ನಟ ಸುದೀಪ್ ಅವರ ತಾಯಿ ಸರೋಜಾ ಸಂಜೀವ ಅನಾರೋಗ್ಯ ಅವರು ಭಾನುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಇಂದು (ಅ. ೨೦) ಮಧ್ಯಾಹ್ನ ಸರೋಜಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತಾಯಿಯ ಅನಾರೋಗ್ಯದ ಕಾರಣದಿಂದ ಬಿಗ್ ಬಾಸ್ ಶೋಟಿಂಗನ್ನು ಬೇಗನೆ ಮುಗಿಸಿ ನಿನ್ನೆಯ ವಾರದ ಪಂಚಾಯಿತಿ, ಸಾಮಾನ್ಯಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮುಗಿಸಿ ಧಾವಿಸಿದ್ದಾರೆ.
ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಸುದೀಪ ಅವ್ರ್ ತಾಯಿ ಮಂಗಳೂರು ಮೂಲದವರಾಗಿದ್ದು, ಸುದೀಪ ಅವ್ರು ಒಂದು ಕಾರ್ಯಕ್ರಮದಲ್ಲಿ ನನ್ನ ತಾಯಿ ಮಂಗಳೂರು ಮೂಲದವರು, ಅವ್ರ ಮಾತೃಭಾಷೆ ತುಳು, ನನಗೆ ಆ ಭಾಷೆ ಬಹಳ ಇಷ್ಟ ನಾನು ಸಾಕಷ್ಟು ಕೇಳಿಸಿಕೊಂಡಿದ್ದೇನೆ ಆದ್ರೆ ನನಗೆ ಮಾತನಾಡಲು ಬರುವುದಿಲ್ಲ ಎಂದು ಹಟನ್ನ ತಾಯಿಯ ಬಗ್ಗೆ ಹಂಚಿಕೊಂಡಿದ್ದರು.
ಇತ್ತೀಚಿಗೆ, ನವರಾತ್ರಿ ಕಾರಣಕ್ಕಾಗಿ ಸುದೀಪ್ ಬಿಗ್ ಬಾಸ್ ವೇದಿಕೆಗೆ ಚಪ್ಪಲಿ ಧರಿಸದೇ ಬಂದಿದ್ದರು. ಅಲ್ಲದೆ, “ಅಮ್ಮ, ನೀವು ಹೇಳಿದ ರೀತಿಯಲ್ಲಿಯೇ ಉಡುಪು ಧರಿಸಿದ್ದೇನೆ” ಎಂದು ‘ಬಿಗ್ ಬಾಸ್’ ವೇದಿಕೆ ಮೇಲಿಂದಲೇ ಅಮ್ಮನಿಗೆ ಹೇಳಿದ್ದರು ಸುದೀಪ್.
ಖ್ಯಾತ ಚಲನಚಿತ್ರ ನಟ ಹಾಗೂ ಆತ್ಮೀಯರಾದ ಅವರ ತಾಯಿ ಶ್ರೀಮತಿ ಸರೋಜಾ ಅವರು ನಿಧನರಾಗಿರುವ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ. ನಟ ಸುದೀಪ್ ಹಾಗೂ ಅವರ ಕುಟುಂಬ ವರ್ಗದವರಿಗೆ ಅವರ ತಾಯಿಯ ನಿಧನದ ದುಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
“ಖ್ಯಾತ ಚಲನಚಿತ್ರ ನಟರಾದ ಕಿಚ್ಚ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ತಿಳಿದು ದುಃಖವಾಗಿದೆ. ಈ ಸಮಯದಲ್ಲಿ ನಟ ಸುದೀಪ್ ಹಾಗೂ ಕುಟುಂಬದ ಸದಸ್ಯರಿಗೆ ಅವರ ತಾಯಿಯ ಅಗಲಿಕೆಯ ನೋವು ಸಹಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಂತಾಪ ಸೂಚಿಸಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now