spot_img
spot_img

ಪ್ರಧಾನಿ ಜೊತೆಗೆ ‘ದಿ ಸಬರಮತಿ ರಿಪೋರ್ಟ್​’ ಸಿನಿಮಾ ವೀಕ್ಷಣೆ ನಟ ವಿಕ್ರಾಂತ್

spot_img
spot_img

Share post:

ನವದೆಹಲಿ: ಸಂಸದರೊಂದಿಗೆ ಸಿನಿಮಾ ವೀಕ್ಷಣೆಯ ಹಲವು ಫೋಟೋಗಳನ್ನು ಅಧಿಕೃತ ಎಕ್ಸ್​ ಜಾಲತಾಣದಲ್ಲಿ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ಚಿತ್ರದ ನಿರ್ಮಾಣದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ನಟ ವಿಕ್ರಾಂತ್​ ಮಸ್ಸೆ ಅಭಿನಯದ ‘ದಿ ಸಬರಮತಿ ರಿಪೋರ್ಟ್’​ ಚಲನಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವರಾದ ರಾಜನಾಥ್​ ಸಿಂಗ್​ ಸೇರಿದಂತೆ ಅನೇಕರು ವೀಕ್ಷಿಸಿದರು.

ಸೋಮವಾರ ಸಂಜೆ ಸಂಸತ್ ಭವನದ ಬಾಲಯೋಗಿ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ಸಿನಿಮಾದ ನಾಯಕ ನಟ ವಿಕ್ರಾಂತ್​ ಮಸ್ಸೆ ಸೇರಿದಂತೆ ಚಿತ್ರತಂಡದ ಸದಸ್ಯರು, ಪ್ರಧಾನಿಗಳೊಂದಿಗೆ ಸಿನಿಮಾ ವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ಚಿತ್ರ ನಟ ವಿಕ್ರಾಂತ್​ ಮಸ್ಸೆ, ಇದು ತಮ್ಮ ವೃತ್ತಿಜೀವನದ ಅತ್ಯುತ್ತಮ ಕ್ಷಣ ಎಂದು ತಿಳಿಸಿದರು.

ಸಿನಿಮಾ ವೀಕ್ಷಣೆ ಬಳಿಕ ಮಾಧ್ಯಮದ ಜೊತೆ ಅನುಭವ ಹಂಚಿಕೊಂಡ ವಿಕ್ರಾಂತ್​, ‘ಪ್ರಧಾನಿ ಮತ್ತು ಎಲ್ಲಾ ಕ್ಯಾಬಿನೆಟ್​ ಸಚಿವರು ಹಾಗೂ ಅನೇಕ ಸಂಸದರೊಂದಿಗೆ ನಾನು ಕೂಡ ಸಿನಿಮಾ ವೀಕ್ಷಿಸಿದೆ.

ಇದೊಂದು ವಿಶೇಷ ಅನುಭವ. ಇದು ಅತ್ಯಂತ ಸಂತಸದ ವಿಷಯವಾಗಿದ್ದು, ಇದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಪ್ರಧಾನ ಮಂತ್ರಿ ಅವರೊಂದಿಗೆ ಸಿನಿಮಾ ವೀಕ್ಷಣೆಗೆ ಸಮಯ ಸಿಕ್ಕಿರುವುದು ನನ್ನ ವೃತ್ತಿ ಜೀವನದ ಅತ್ಯುತ್ತಮ ಮಹತ್ವದ ಕ್ಷಣ’ ಎಂದರು.

ಸಂಸದರೊಂದಿಗೆ ಸಿನಿಮಾ ವೀಕ್ಷಣೆಯ ಹಲವು ಫೋಟೋಗಳನ್ನು ಅಧಿಕೃತ ಎಕ್ಸ್​ ಜಾಲತಾಣದಲ್ಲಿ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ಚಿತ್ರದ ನಿರ್ಮಾಣದ ಪ್ರಯತ್ನವನ್ನು ಶ್ಲಾಘಿಸಿದರು.

‘ದಿ ಸಬರಮತಿ ರಿಪೋರ್ಟ್’​ ಚಿತ್ರವೂ 2002ರ ಫೆಬ್ರವರಿ 27ರಂದು ಗುಜರಾತ್​ನಲ್ಲಿನ ಗೋದ್ರಾ ರೈಲು ನಿಲ್ದಾಣ ಸಮೀಪ ಸಬರಮತಿ ಎಕ್ಸ್​ಪ್ರೆಸ್​​ ರೈಲಿನ S-6 ಕೋಚ್‌ನಲ್ಲಿ ಸಂಭವಿಸಿದ ಬೆಂಕಿ ದುರಂತ ಘಟನೆ ಆಧಾರಿತ ಚಿತ್ರವಾಗಿದೆ.

ಚಿತ್ರದ ಟ್ರೈಲರ್​ ಬಿಡುಗಡೆಯಾದ ಸಂದರ್ಭದಲ್ಲೇ ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದ ಪ್ರಧಾನಿ, ಉತ್ತಮ ಕೆಲಸ. ಸತ್ಯ ಹೊರ ಬರುತ್ತಿರುವುದು ಒಳ್ಳೆಯದು. ಇದೀಗ ಸಾಮಾನ್ಯ ಮನುಷ್ಯರು ಇದನ್ನು ತಿಳಿಯಬಹುದು. ಸುಳ್ಳು ಸುದ್ದಿಗಳ ಸಿಮೀತ ಅವಧಿಯಲ್ಲಿಯೇ ಸಾಯುತ್ತದೆ. ಹಾಗೇ ಸತ್ಯವೂ ಹೊರಬರುತ್ತದೆ ಎಂದಿದ್ದರು.

2002 ರ ಗೋಧ್ರಾ ಘಟನೆ ಕುರಿತು ಈ ಚಿತ್ರಕ್ಕೆ ಉತ್ತರ ಪ್ರದೇಶ, ಚತ್ತೀಸ್‌ಗಢ, ಮಧ್ಯಪ್ರದೇಶ, ಉತ್ತರಾಖಂಡ, ಒಡಿಶಾ, ಹರಿಯಾಣ, ಗುಜರಾತ್ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ.

ಮಾಧ್ಯಮಗಳ ವರದಿ ಅನುಸಾರ, ಚಿತ್ರದ ವೀಕ್ಷಣೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾವನಾತ್ಮಕಗೊಂಡರು.

ನಟ ವಿಕ್ರಾಂತ್​ ಮಸ್ಸೆ ಕೂಡ ಪ್ರಧಾನಿ ಅವರೊಂದಿಗೆ ‘ದಿ ಸಬರಮತಿ ರಿಪೋರ್ಟ್’​ ಸಿನಿಮಾ ವೀಕ್ಷಣೆಯ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ.

‘ನನ್ನ ಸಂಪೂರ್ಣ ಜೀವನದಲ್ಲಿ ನೆನಪಿಡುವ ಘಟನೆ ಇದು. ನನ್ನ ಸಿನಿಮಾ ವೀಕ್ಷಣೆಗೆ ಅವರು ಸಮಯ ನೀಡಿದ್ದಕ್ಕೆ ನಾನು ಸದಾ ಅವರಿಗೆ ಅಭಾರಿಯಾಗಿರುತ್ತೇನೆ. ನಿಮ್ಮ ಪ್ರಶಂಸೆಯ ಮಾತು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಪೋಸ್ಟ್​ ಮಾಡಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...