Actress Meghna:
ಮದುವೆ ಸೀಸನ್ ಬಂದಿದ್ದೇ ಬಂದಿದ್ದು ಸ್ಯಾಂಡಲ್‌ವುಡ್‌ನಲ್ಲಿ ವಿವಾಹ ಸಮಾರಂಭಗಳು ಜೋರಾಗಿ ನಡೆಯುತ್ತಿವೆ. ಸಿನಿಮಾ, ಧಾರಾವಾಹಿಗಳ ಶೂಟಿಂಗ್ಗಳ ಮಧ್ಯೆ ನಟ, ನಟಿಯರು ವಿವಾಹ ಕಾರ್ಯಕ್ರಮಗಳಿಗೂ ಹೋಗಿ ಬರುತ್ತಿದ್ದಾರೆ. ಹಳದಿ ಶಾಸ್ತ್ರ ಮಾಡಿಕೊಂಡ ಬೆನ್ನಲ್ಲೇ ಸೀತಾರಾಮ ಧಾರಾವಾಹಿಯ ACTRESS MEGHNA ಶಂಕರಪ್ಪ- ಜಯಂತ್ ಹೊಸ ಜೀವನಕ್ಕೆ ವೆಲ್ಕಮ್ ಹೇಳಿದ್ದಾರೆ.
ಸೀತಾರಾಮ ಧಾರಾವಾಹಿಯ ಕ್ಯೂಟ್ ಬೆಡಗಿ ಪ್ರಿಯಾ ಯಾರಿಗೇ ಗೊತ್ತಿಲ್ಲ. ಬಿಂದಾಸ್ ಪ್ರಿಯಾ ಅವರು ತರ್ಲೆ, ತಮಾಷೆ ಅಭಿನಯಕ್ಕೆ ವೀಕ್ಷಕರು ಮನಸೋತಿದ್ದಾರೆ. ಪ್ರಿಯಾ ಅಶೋಕ ರೀಲ್ ಮದುವೆ ಅಂದ, ಚಂದವಾಗಿ ಮೂಡಿ ಬಂದಿತ್ತು. ಸೀತಾರಾಮ ಧಾರಾವಾಹಿಯಲ್ಲಿ ಅಶೋಕನ ಮನದರಸಿಯಾಗಿರುವ ACTRESS MEGHNA ಶಂಕರಪ್ಪ ಇದೀಗ ನಿಜ ಜೀವನದಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ACTRESS MEGHNA ರೀಲ್ ಅಲ್ಲಿ ಮದುವೆಗಿಂತ ರಿಯಾಲ್ ಆಗಿ ಪ್ರಿಯಾ ಅಲಿಯಾಸ್ ಮೇಘನಾ ಶಂಕರಪ್ಪ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಸ್ಯಾಂಡಲ್‌ವುಡ್‌ನ ನಟಿ ರಕ್ಷಿತಾಪ್ರೇಮ್ ಸಹೋದರ ರಾಣಾ- ರಕ್ಷಿತಾರನ್ನ ವಿವಾಹ ಆಗಿದ್ದಾರೆ.
ಹಿರಿಯ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರ ಮದುವೆ ಕೂಡ ಸಂಭ್ರಮದಿಂದ ನೆರವೇರಿದೆ. ಇದರ ಬೆನ್ನಲ್ಲೇ ಸೀತಾರಾಮ ಧಾರಾವಾಹಿಯ ನಟಿ ಮೇಘನಾ ಶಂಕರಪ್ಪ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ಡಾಲಿ ಧನಂಜಯ್-ಧನ್ಯಾತಾ ಮೈಸೂರಿನಲ್ಲಿ ವಿವಾಹವಾಗಲಿದ್ದಾರೆ. ಜಯಂತ್ ಅವರು ಬೆಂಗಳೂರಿನವರೇ ಆಗಿದ್ದಾರೆ.
ಮೇಘನಾ ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಅರಿಶಿಣ ಶಾಸ್ತ್ರ, ಮೆಹೆಂದಿ, ಸಂಗೀತ, ಪ್ರಿ ವೆಡ್ಡಿಂಗ್ ಕಾರ್ಯಕ್ರಮದ ವಿಡಿಯೋಗಳನ್ನು ಶೇರ್ ಮಾಡಿದ್ದರು. ಈಗ ವಿವಾಹ ಸಮಾರಂಭದ ವಿಡಿಯೋಗಳನ್ನು ಹಂಚಿಕೊಳ್ಳಬೇಕಿದೆ. ಆದರೂ ಇವರ ಮದುವೆಯ ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇಂಜಿನಿಯರ್ ಆಗಿರುವ ಜಯಂತ್ ಅವರ ಜೊತೆ ಮೇಘನಾ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಪಕ್ಕಾ ಅರೇಂಜ್ ಮ್ಯಾರೇಜ್ ಆಗಿರುವ ಈ ಜೋಡಿ ಮದುವೆಯಲ್ಲಿ ಗೋಲ್ಡ್ ಕಲರ್ ಡ್ರೆಸ್ನಲ್ಲಿ ಮಿಂಚಿದ್ದಾರೆ. ಎರಡು ಕುಟುಂಬದ ಹಿರಿಯರ ಸಮ್ಮುಖದಲ್ಲಿ ಇಬ್ಬರು ಹಸೆಮಣೆಗೆ ಏರಿದ್ದಾರೆ. ಮದುವೆಗೆ ಸ್ನೇಹಿತರು, ಸಂಬಂಧಿಗಳು, ಕಿರುತೆರೆಯ ನಟ, ನಟಿಯರು ಆಗಮಿಸಿ ಶುಭ ಹಾರೈಸಿದ್ದಾರೆ.
ಇದನ್ನು ಓದಿರಿ : PlayStation Apologises For Online Network Outage, Offers 5 Days Plus Extension: Step To Fix The Issue