spot_img
spot_img

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರದಲ್ಲಿ ನಟಿ ಸನ್ನಿ ಲಿಯೋನ್?

spot_img
spot_img

Share post:

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಭಾರತ “ ಯುಐ” ಸಿನಿಮಾ ತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಚಿತ್ರದ ಕಥೆ ಏನಿರಬಹುದು ಎಂದು ಈಗಾಗಲೇ ಫ್ಯಾನ್ಸ್​ ಕಾಯುತ್ತಿದ್ದಾರೆ. ಯುಐಯ ಪ್ರತಿ ವಿಷಯ ಭಾರೀ ನಿರೀಕ್ಷೆ ಮೂಡಿಸುತ್ತಿದೆ. ಭಾರೀ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾದ ಮತ್ತೊಂದು ನವೀಕರಿನೆ (Update) ​ ಸಿಕ್ಕಿದ್ದು, ಇದು ನವಯುವಕರ ಮನಸು ಕದಡೋ ಸಂಗತಿಯಾಗಿದೆ!

ಇದನ್ನೂ ಓದಿ : ಸೋಡಾ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತೇ.?

ಉಪ್ಪಿ ಏನೇ ಮಾಡಿದರೂ ಅದನ್ನು ವಿಭಿನ್ನವಾಗಿ ಮಾಡಿ ತೋರಿಸುತ್ತಾರೆ. ಉಪೇಂದ್ರ ನಿರ್ದೇಶನ ಎಂದರೆ ಯಾರೂ ಊಹೆ ಮಾಡದಂತಹ ಸೀನ್​ಗಳು ಇದ್ದೆ ಇರುತ್ತವೆ. ಯುಐ ಮೂಲಕ ಜನರಿಗೆ ಏನೋ ಸಂದೇಶ ನೀಡಲು ಹೊರಟಿದ್ದಾರೆ ಎಂದು ಅಭಿಮಾನಿಗಳ ಕುತೂಹಲ. ಇದೆಲ್ಲದರ ನಡುವೆ ಬಾಲಿವುಡ್ ಬ್ಯೂಟಿ ಸಖತ್ ಹಾಟ್​ ಹಾಟ್ ಎನಿಸಿರುವ ಸನ್ನಿ ಲಿಯೋನ್ ಯುಐ ಸಿನಿಮಾದಲ್ಲಿ ಆ್ಯಕ್ಟ್ ಮಾಡುತ್ತಿದ್ದಾರಂತೆ. ಅಂದ್ಹಾಗೆ ಸನ್ನಿ ಲಿಯೋನ್​ ಕನ್ನಡದಲ್ಲಿ ನಟಿಸುತ್ತಿರುವ 3ನೇ ಸಿನಿಮಾ ಇದಾಗಿದೆ.

ಇದನ್ನೂ ಓದಿ : ಚಿಕ್ಕೋಡಿ : ಕೋಮುವಾದವೇ ತುಂಬಿರುವ ಸಮಾಜದಲ್ಲಿ ಮುಸ್ಲಿಂ ಬಾಂಧವರು ಮಾಡಿದ ಈ ಕಾರ್ಯ ಶ್ಲಾಘನಿಯ..!

ರಿಯಲ್ ಸ್ಟಾರ್ ಉಪ್ಪಿ ನಟನೆಯ ಯುಐ ಸಿನಿಮಾದ ಕ್ರೇಜ್ ದಿನೇ ದಿನೇ ಜಾಸ್ತಿ ಆಗುತ್ತಿದೆ. ಉಪ್ಪಿ ಡೈರೆಕ್ಷನ್ ಕಂ ಆ್ಯಕ್ಟಿಂಗ್ ಇರೋದ್ರಿಂದ ಈ ರೇಂಜ್​ಗೆ ಕ್ರೇಜ್ ಸೃಷ್ಟಿಯಾಗಿದೆ. ಅಂದ್ಹಾಗೆ ಮೊದಲಿಂದ ಒಂದು ಸುದ್ದಿ ಓಡಾಡುತ್ತಿತ್ತು. ಇದೀಗ ಅದು ರಿವೀಲ್ ಆಗಿದೆ. ಯುಐ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸಿದ್ದಾರಂತೆ. ಈ ವಿಚಾರ ಈಗ ಕನ್ಫರ್ಮ್ ಆಗಿದೆ. ಈಗಾಗಲೇ ಯುಐ ಚಿತ್ರತಂಡ ಸನ್ನಿ ಲಿಯೋನ್ ಪೋಸ್ಟರ್ ರಿವೀಲ್ ಮಾಡಿದ್ದು, ಸನ್ನಿ ಕೇವಲ ಹಾಡಿನಲ್ಲಷ್ಟೇ ಇರುತ್ತಾರಾ, ಇಲ್ಲ ಸಿನಿಮಾದಲ್ಲಿ ವಿಶೇಷ ಪಾತ್ರವೇನಾದರೂ ಮಾಡಿದ್ದಾರಾ ಅನ್ನೋ ಕುತೂಹಲ ಪಡೆ ಹೈಕ್ಳದ್ದಾಗಿದೆ.

ಇದನ್ನೂ ಓದಿ : Sandalwood Queen ರಮ್ಯಾ ಮದುವೆ ಫಿಕ್ಸ್.? ಹುಡುಗ ಯಾರು ಗೊತ್ತಾ.?

ಯುಐ ಸಿನಿಮಾಗೆ ಜಿ.ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದು ಉಪೇಂದ್ರ ಜೊತೆ ರೀಷ್ಮಾ ನಾಣಯ್ಯ ಹಾಗು ನಿಧಿ ಸುಭಯ್ಯ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಸಿನಿಮಾಗೆ ಹೆಚ್‌.ಸಿ ವೇಣು ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ ಇದೆ. ಯುಐನಲ್ಲಿ ಆರ್ಮುಗ ರವಿಶಂಕರ್, ಸಾಧು ಕೋಕಿಲ, ಅಚ್ಯುತ್‌ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಇದೆ. ಇದರ ಜೊತೆಗೆ ಇದೀಗ ಸನ್ನಿ ಲಿಯೋನ್ ಕೂಡ ಸೇರ್ಪಡೆ ಆಗಿದ್ದಾರೆ.

spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...