Shimoga News:
ಶಿವಮೊಗ್ಗದ ಶುಭಂ ಹೋಟೆಲ್ನಲ್ಲಿ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಹಾಗೂ ನಾಯಕ ನಟಿ ಜಾಹ್ನವಿ ಶೆಟ್ಟಿ ಅಭಿಯನದ ADHIPATRA TRAILER ಅನಾವರಣಗೊಳಿಸಲಾಯಿತು. ಶಿವಮೊಗ್ಗ ನಾಡವರ ಯಾನೆ ಬಂಟರ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಟ್ರೇಲರ್ ಬಿಡುಗಡೆಗೊಳಿಸಿದ್ರು.
ಚಂದನವನದ ಭರವಸೆಯ ನಟ ರೂಪೇಶ್ ಶೆಟ್ಟಿ ಮುಖ್ಯಭೂಮಿಕೆಯ ‘ಅಧಿಪತ್ರ’ ಚಿತ್ರ ತನ್ನ ಪ್ರಚಾರ ಪ್ರಾರಂಭಿಸಿದೆ. ಫೆಬ್ರವರಿ 7ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿರುವ ‘ಅಧಿಪತ್ರ’ದಲ್ಲಿ ಕರಾವಳಿ ಭಾಗದ ಕಥೆ ಕಟ್ಟಿಕೊಡಲಾಗಿದೆ. ಬಿಡುಗಡೆ ಹೊಸ್ತಿಲಲ್ಲಿರುವ ಚಿತ್ರದ ಟ್ರೇಲರ್ ಅನಾವರಣಗೊಂಡಿದ್ದು, ಸಿನಿಮಾ ನೋಡುವ ಪ್ರೇಕ್ಷಕರ ಕುತೂಹಲ ಹೆಚ್ಚಿದೆ.
ರೂಪೇಶ್ ಶೆಟ್ಟಿ ಮುಖ್ಯಭೂಮಿಕೆಯ ADHIPATRA TRAILER ಅನಾವರಣಗೊಂಡಿದೆ. ಕರಾವಳಿ ಭಾಗದಲ್ಲಿ ನಡೆಯುವ ಕಥೆಯನ್ನು ಸಸ್ಪೆನ್ಸ್ ಹಾಗೂ ಹಾರರ್ ಮೂಲಕ ಹೇಳಲು ಚಿತ್ರದ ನಿರ್ದೇಶಕ ಶಯನ್ ಶೆಟ್ಟಿ ಹೊರಟಿದ್ದಾರೆ. ಸಿನಿಮಾ ಫೆಬ್ರವರಿ 7ರಂದು ಬಿಡುಗಡೆ ಆಗಲಿದೆ. ನಾಯಕ ರೂಪೇಶ್ ಶೆಟ್ಟಿ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ADHIPATRA TRAILER ಜಾಹ್ನವಿ ಅವರು ಇದೇ ಮೊದಲ ಬಾರಿ ನಾಯಕ ನಟಿಯಾಗಿ ನಟಿಸಿದ್ದಾರೆ. ಫೆಬ್ರವರಿ 7ರಂದು ಬಿಡುಗಡೆ ಆಗಲಿರುವ ತಮ್ಮ ಚಿತ್ರವನ್ನು ಚಲನಚಿತ್ರಮಂದಿರದಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಚಿತ್ರತಂಡ ವಿನಂತಿಸಿಕೊಂಡಿದೆ.ADHIPATRA TRAILER ರಿಲೀಸ್ ಬಳಿಕ ಮಾತನಾಡಿದ ನಟ ರೂಪೇಶ್ ಶೆಟ್ಟಿ, ಅಧಿಪತ್ರ ಸಿನಿಮಾದಲ್ಲಿ ಕಥೆಯೇ ಹಿರೋ.
ಕಥೆಗೆ ಏನು ಬೇಕೋ ಅದನ್ನು ಚಿತ್ರದಲ್ಲಿ ಯಾವುದೇ ರಾಜಿ ಇಲ್ಲದೇ ಮಾಡಲಾಗಿದೆ. ಶಯನ್ ಶೆಟ್ಟಿ ಚಿತ್ರವನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಬೆಂಗಳೂರಿನಲ್ಲಿ ಎಲ್ಲರೂ ತಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಾರೆ. ಮಲೆನಾಡಿನಲ್ಲೂ ಸಹ ಚಿತ್ರ ಪ್ರೇಮಿಗಳಿದ್ದು, ಅವರ ಎದರು ನಮ್ಮ ಚಿತ್ರದ ಟ್ರೇಲರ್ ಅನಾವರಣಗೊಳಿಸಿರುವುದು ಖುಷಿ ಕೊಟ್ಟಿದೆ ಎಂದು ತಿಳಿಸಿದರು.
ಇದನ್ನು ಓದಿರಿ : UNION BUDGET 2025 : ಕೇಂದ್ರ ಬಜೆಟ್ಗೆ ದಿನಗಣನೆ ಆರಂಭ