ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ದೇಶದ ಸಾಕಷ್ಟು ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಪುರುಷರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದು, ಡೇಟ್, ಮದುವೆ, ಲೈಂಗಿಕತೆ ಮತ್ತು ಮಕ್ಕಳನ್ನು ಹೆರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಚುನಾವಣೆ ಸಮಯದಲ್ಲಿ ಟ್ರಂಪ್ ಅವರ ಸ್ತ್ರೀ ವಿರೋಧಿ ಧೋರಣೆಗಳನ್ನು ಕಮಲಾ ಹ್ಯಾರಿಸ್ ಬಹಿರಂಗಪಡಿಸಿದ್ದು, ಈ 4ಬಿ ಪ್ರತಿಭಟನೆ ಆರಂಭವಾಗಲು ಕಾರಣ ಎನ್ನಲಾಗಿದೆ.
ಅಮೆರಿಕದ ಸಾಕಷ್ಟು ಮಹಿಳೆಯರು ಈ ಬಗ್ಗೆ ವೀಡಿಯೋ ಹಂಚಿಕೊಂಡಿದ್ದು, ನಾವೆಲ್ಲರೂ 4ಬಿ ಪ್ರತಿಭಟನೆಯ ಭಾಗ ಎಂದು ಹೇಳಿಕೊಂಡಿದ್ದಾರೆ. ಹೊಸ ಸರಕಾರ ಹಾಗೂ ಪುರುಷರು ತಮ್ಮನ್ನು ತುಳಿಯುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
4ಬಿ ಪ್ರತಿಭಟನೆ ಮೊದಲು ಆರಂಭವಾಗಿದ್ದು ದಕ್ಷಿಣ ಕೊರಿಯಾದಲ್ಲಿ. ಅಲ್ಲಿನ ಸರಕಾರದ ವಿರುದ್ಧ ಮಹಿಳೆಯರು ಈ ಪ್ರತಿಭಟನೆ ಆರಂಭಿಸಿದ್ದರು. ಕೊರಿಯಾದಲ್ಲಿ “ಇಲ್ಲ’ ಎನ್ನುವ ಶಬ್ದಕ್ಕೆ ಪರ್ಯಾಯವಾಗಿ ಬಳಸುವ “ಬಿ’ ಶಬ್ದವನ್ನು ಈ ಪ್ರತಿಭಟನೆಯ ಹೆಸರಿನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಹತ್ಯೆಗೆ ರೂಪಿಸಲಾಗಿದ್ದ ಸಂಚುಗಳು ಬಯಲಾದ ಬೆನ್ನಲ್ಲೇ ಮಾರ್-ಎ-ಲಾಗೋ ಎಸ್ಟೇಟ್‌ನಲ್ಲಿರುವ ಅವರ ನಿವಾಸಕ್ಕೆ ಭಾರೀ ಭದ್ರತೆ ನೀಡಲಾಗಿದೆ. ಟ್ರಂಪ್ ನಿವಾಸದ ಸುತ್ತ ರೊಬೋಟಿಕ್ ಶ್ವಾನಗಳನ್ನು ನಿಯೋಜಿ ಸಲಾಗಿದ್ದು, ಅವು ಗಸ್ತು ತಿರುಗುತ್ತಿರುವ ವೀಡಿಯೋ ವೈರಲ್ ಆಗಿವೆ.
ಈ ಶ್ವಾನಗಳು ಬಾಂಬ್ ಮತ್ತು ರಾಸಾಯನಿಕ ಬೆದರಿಕೆ ಪತ್ತೆ ಹಚ್ಚುವಲ್ಲಿ ಸಮರ್ಥವಾಗಿದ್ದು, ಅವುಗಳಿಗೆ ಉತ್ತಮ ತಂತ್ರಜ್ಞಾನ ಹಾಗೂ ಹೈ ರೆಸಲ್ಯೂಶನ್ ಕೆಮರಾಗಳನ್ನು ಅಳವಡಿಸಲಾಗಿದೆ.