WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Bangalore News:
ಜೆನ್ ವ್ಯೋಮ್ಕವಚ್-ಅಡ್ವಾನ್ಸ್‌ಡ್ ಆ್ಯಂಟಿ ಡ್ರೋನ್ ಸಿಸ್ಟಂ, ಫೋರ್ ಬ್ಯಾರಲ್ ರೋಟರಿ ಮಷೀನ್ ಗನ್ (12.7 x 99mm), ಟ್ವಿನ್ ಬ್ಯಾರಲ್ ಆಟೋಕ್ಯಾನನ್ (ಟ್ಯುರೇಟೆಡ್ 20mm) ಎಂಬ ರಕ್ಷಣಾ ವ್ಯವಸ್ಥೆಗಳನ್ನು ಅನಾವರಣಗೊಳಿಸಲಾಗಿದೆ.INDIAದ ಪ್ರಮುಖ ಆ್ಯಂಟಿ ಡ್ರೋನ್ ಟೆಕ್ನಾಲಜಿ & ಡಿಫೆನ್ಸ್ ಟ್ರೈನಿಂಗ್ ಸೊಲ್ಯೂಷನ್ಸ್ ಪ್ರೊವೈಡರ್ ಎನಿಸಿರುವ ಜೆನ್ ಟೆಕ್ನಾಲಜೀಸ್ ಲಿಮಿಟೆಡ್ ಮೂರು ಸುಧಾರಿತ ರಕ್ಷಣಾ ವ್ಯವಸ್ಥೆಗಳನ್ನು ಏರೋ ಇಂಡಿಯಾ-2025ರಲ್ಲಿ ಬಿಡುಗಡೆಗೊಳಿಸಿದೆ.
Gen Vyomakvach-Advanced Anti-Drone System:ಇದು ಬೈರಕ್ತರ್-TB2 ಮತ್ತು ಸ್ವಾರ್ಮ್ಸ್‌ನಂತಹ ಎಲ್ಲಾ ವಿಧದ ಡ್ರೋನ್‌ಗಳ ಬೆದರಿಕೆಗಳ ವಿರುದ್ಧ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಹಾಗೂ ರಿಯಲ್ ಟೈಮ್‌ನಲ್ಲಿ ಡ್ರೋನ್ ಪತ್ತೆ ಹಚ್ಚಿ ತಟಸ್ಥೀಕರಣ ಒದಗಿಸಲಿದೆ.ವೈಮಾನಿಕ ಬೆದರಿಕೆಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಜೆನ್ ವ್ಯೋಮ್ಕವಚ್ ಎಂಬುದು ಸುಧಾರಿತ ಆ್ಯಂಟಿ ಡ್ರೋನ್ ಅನ್ವೇಷಣೆಯಾಗಿ ಗುರುತಿಸಿಕೊಂಡಿದೆ.
Four Barrel Rotary Machine Gun (12.7 x 99mm):ಫೈರ್‌ಪವರ್, ನಿಖರತೆ ಮತ್ತು ಹೊಂದಿಕೊಳ್ಳುವಿಕೆಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಗನ್ ತನ್ನ ಗರಿಷ್ಠ ದಕ್ಷತೆಯೊಂದಿಗೆ ವೈಮಾನಿಕ ಬೆದರಿಕೆಗಳನ್ನು ಎದುರಿಸಲು ಉತ್ತಮ ಆಯ್ಕೆಯಾಗಲಿದೆ.
ಇದು ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದ್ದು, ಆ್ಯಂಟಿ ಡ್ರೋನ್ ಮತ್ತು ಹೈ ಇಂಟೆನ್ಸಿಟಿ ಕಾಂಬ್ಯಾಕ್ಟ್ ಅಪ್ಲಿಕೇಶನ್ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿ ನಿಮಿಷಕ್ಕೆ 3,500 ರೌಂಡ್ಸ್ ಫೈರ್ ರೇಟ್ ಹೊಂದಿರುವ ಇದು, ಸರಿಸುಮಾರು 50 ಕೆ.ಜಿ ತೂಕ ಮತ್ತು 1,300 ಮಿ.ಮೀ ಉದ್ದ ಹೊಂದಿರಲಿದೆ.
Twin barrel autocannon (turreted 20mm):“ದೇಶದ ಭದ್ರತೆ ಮತ್ತು ಜಾಗತಿಕ ರಕ್ಷಣಾ ವಲಯದಲ್ಲಿ ಭಾರತದ ಉಪಸ್ಥಿತಿಯನ್ನು ಬಲಪಡಿಸುವ ವಿಶ್ವ ದರ್ಜೆಯ ರಕ್ಷಣಾ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಇದು ಬಲಪಡಿಸುತ್ತದೆ. ಹೆಚ್ಚುತ್ತಿರುವ ಆತಂಕಗಳನ್ನು ನಿಖರತೆ ಮತ್ತು ಚುರುಕುತನದಿಂದ ಎದುರಿಸಲು ನಮ್ಮ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲಾಗಿದೆ” ಎಂದು ಜೆನ್ ಟೆಕ್ನಾಲಜೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಅಟ್ಲೂರಿ ತಿಳಿಸಿದ್ದಾರೆ.
ಸುಧಾರಿತ ಟ್ವಿನ್-ಬ್ಯಾರೆಲ್ ವ್ಯವಸ್ಥೆಯು ಯುದ್ಧ ಹೆಲಿಕಾಪ್ಟರ್‌ಗಳಿಗೆ ಅಧಿಕ ಸ್ಟ್ರೈಕ್ ಸಾಮರ್ಥ್ಯವನ್ನು ಒದಗಿಸಲಿದೆ. ಯುದ್ಧದ ಸನ್ನಿವೇಶಗಳಲ್ಲಿ ವೇಗವಾಗಿ ಸಾಗುತ್ತಾ ಕಾರ್ಯನಿರ್ವಹಿಸುವಾಗ ಪೈಲಟ್‌ಗಳು ಹೆಚ್ಚಿನ ನಿಖರತೆಯೊಂದಿಗೆ ಗುರಿಗಳನ್ನು ಟಾರ್ಗೆಟ್ ಮಾಡಲು ಇದು ಸಹಕಾರಿಯಾಗಲಿದೆ.
Gen Technologies Limited:ಹೈದರಾಬಾದ್‌ನಲ್ಲಿರುವ ಜೆನ್ ಟೆಕ್ನಾಲಜೀಸ್ ಲಿಮಿಟೆಡ್, INDIA ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಗುರುತಿಸಲ್ಪಟ್ಟಿದೆ ಮತ್ತು ಪ್ರಪಂಚದ ವಿವಿಧೆಡೆ ಒಂದು ಸಾವಿರಕ್ಕೂ ಅಧಿಕ ತರಬೇತಿ ವ್ಯವಸ್ಥೆಗಳನ್ನು ಒದಗಿಸಿದೆ.
30 ವರ್ಷಗಳಿಗೂ ಅಧಿಕ ಅನುಭವದೊಂದಿಗೆ, ವಿಶ್ವದಾದ್ಯಂತ ಸಶಸ್ತ್ರ ಪಡೆಗಳಿಗೆ ಯುದ್ಧ ತರಬೇತಿ ಪರಿಹಾರಗಳನ್ನು ಒದಗಿಸುತ್ತಿರುವ ಜೆನ್ ಟೆಕ್ನಾಲಜೀಸ್ ಹೊಸ ವಿಧದ ಬೆದರಿಕೆಗಳಿಗೆ ಪರಿಹಾರ ಒದಗಿಸುವ ಕಾರ್ಯದಲ್ಲಿ ನಿರತವಾಗಿದೆ.ವಿಶ್ವ ದರ್ಜೆಯ ಅತ್ಯಾಧುನಿಕ ರಕ್ಷಣಾ ತರಬೇತಿ ಮತ್ತು ಆ್ಯಂಟಿ ಡ್ರೋನ್ ಸೊಲ್ಯೂಷನ್ಸ್ ಒದಗಿಸುವಲ್ಲಿ ಜೆನ್ ಟೆಕ್ನಾಲಜೀಸ್ ಲಿಮಿಟೆಡ್ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.
ಇದನ್ನು ಓದಿರಿ :’Alternative To Scuba Diving’:The underwater bike ‘Spot Fin Underwater Scooter