Bangalore News:
AERO INDIA SHOW ಹಿನ್ನೆಲೆ ಬೆಂಗಳೂರು ಸಂಚಾರ ಪೊಲೀಸರು ಮುಂಜಾಗ್ರತ ಕ್ರಮವಾಗಿ ಮಾರ್ಗ ಬದಲಾವಣೆ, ಏಕ ಮುಖ ಸಂಚಾರ ಸೇರಿದಂತೆ ತಾತ್ಕಾಲಿಕವಾಗಿ ಕೆಲ ಬದಲಾವಣೆ ಮಾಡಿದ್ದಾರೆ. ಪೆ.10ರಂದು ಬೆಳಗ್ಗೆ AERO INDIA SHOW ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಗಣ್ಯರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳವು ಯಲಹಂಕ ವಾಯುಸೇನಾ ನೆಲೆಯ ಅಂತಾರಾಷ್ಟ್ರೀಯ ಏರ್‌ಪೋರ್ಟ್ ರಸ್ತೆಗೆ ಹೊಂದಿಕೊಂಡಿದೆ. AERO INDIA SHOW ಈ ರಸ್ತೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು, ತುರ್ತು ಸೇವಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡಲಿವೆ. ಆದ್ದರಿಂದ ಸುಗಮ ಸಂಚಾರದ ದೃಷ್ಟಿಯಿಂದ ಫೆ.10ರ ಬೆಳಗ್ಗೆ 5ರಿಂದ ಫೆ. 14ರ ರಾತ್ರಿ 10ವರೆಗೆ ಈ ಕೆಳಕಂಡ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.
ಯಲಹಂಕ ವಾಯುನೆಲೆಯಲ್ಲಿ ಫೆ.10 ರಿಂದ 14ರವರೆಗೆ ನಡೆಯಲಿರುವ AERO INDIA SHOW ವೈಮಾನಿಕ ಪ್ರದರ್ಶನ-2025 ಹಿನ್ನೆಲೆಯಲ್ಲಿ ಸಂಚಾರದಟ್ಟಣೆ ಆಗದಿರಲು ನಗರ ಸಂಚಾರ ಪೊಲೀಸರು ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಏಕಮುಖ ಸಂಚಾರ, ಮಾರ್ಗ ಬದಲಾವಣೆ ಸೇರಿದಂತೆ ತಾತ್ಕಾಲಿಕ ಬದಲಿ ವ್ಯವಸ್ಥೆ ಬಳಸುವಂತೆ ಸವಾರರಿಗೆ ಮನವಿ ಮಾಡಿದ್ದಾರೆ.
One way traffic system:
ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ (ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ)
ಬಾಗಲೂರು ಮುಖ್ಯರಸ್ತೆ : (ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ)
Aero India Parking: Free Parking at GKVK Campus
AERO INDIA SHOW ಅಡ್ವಾ ಪಾರ್ಕಿಂಗ್ಗಾಗಿ (Air Display View Area) 08 & 09 ಹಾಗೂ ಡೊಮೆಸ್ಟಿಕ್ ಪಾರ್ಕಿಂಗ್ಗಾಗಿ ಗೇಟ್ ನಂ. 05ರ ಮೂಲಕ ಪ್ರವೇಶಿಸಿ ಹಣ ಪಾವತಿಸಿ ಪಾರ್ಕಿಂಗ್ ಮಾಡಬಹುದಾಗಿದೆ. ಜಿಕೆವಿಕೆ ಪಾರ್ಕಿಂಗ್ ಸ್ಥಳದಿಂದ ಅಡ್ವಾ ಪಾರ್ಕಿಂಗ್ (Air Display View Area) ಹಾಗೂ ಡೊಮೆಸ್ಟಿಕ್ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಹಾಗೂ ವಾಪಸ್ ಜಿಕೆವಿಕೆ ಪಾರ್ಕಿಂಗ್ ಸ್ಥಳಕ್ಕೆ ಬರಲು ಬಿಎಂಟಿಸಿ ವತಿಯಿಂದ ಉಚಿತ ಎಸಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
Suggested routes:
ಬೆಂಗಳೂರು ಪೂರ್ವ ದಿಕ್ಕಿನಿಂದ ಅಡ್ವಾ (Air Display View Area) ಪಾರ್ಕಿಂಗ್ ಕಡೆ ಬರುವವರಿಗೆ ಕೆ.ಆರ್.ಪುರ ನಾಗವಾರ ಜಂಕ್ಷನ್ ಎಡ ತಿರುವು – ಟೆಲಿಕಾಂ ಲೇಔಟ್ ಬೈಪಾಸ್ ಯಲಹಂಕ ಕಾಫಿ ಡೇ ಫೋರ್ಡ್ ಷೋ ರೂಂ ಎಡ ತಿರುವು, ನಿಟ್ಟೇ ಮಿನಾಕ್ಷಿ ಕಾಲೇಜು ರಸ್ತೆ- ಅಡ್ವಾ ಪಾರ್ಕಿಂಗ್.
For those coming from Bangalore West towards Domestic Parking:
AERO INDIA SHOW ಗೊರಗುಂಟೆಪಾಳ್ಯ ಬಿ.ಇ.ಎಲ್ ವೃತ್ತ ಗಂಗಮ್ಮ ವೃತ್ತ ಉನ್ನಿಕೃಷ್ಣನ್ ರಸ್ತೆ ಮದರ್ ಡೈರಿ ಜಂಕ್ಷನ್ – ಉನ್ನಿಕೃಷ್ಣನ್ ಜಂಕ್ಷನ್ ಎಡ ತಿರುವು ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ Domestic Parking. ಬಲ ತಿರುವು ಅದ್ದಿಗಾನಹಳ್ಳಿ ತಿಮ್ಮಸಂದ್ರ ವಿದ್ಯಾನಗರ ಕ್ರಾಸ್ ಯು ತಿರುವು – ಹುಣಸಮಾರನಹಳ್ಳಿ ಮೂಲಕ ಎಂ.ಎಸ್ ಪಾಳ್ಯ ಸರ್ಕಲ್.
For those coming from Bengaluru West towards Adva Parking:
AERO INDIA SHOW ಗೊರಗುಂಟೆಪಾಳ್ಯ ಉನ್ನಿಕೃಷ್ಣನ್ ರಸ್ತೆ ದೊಡ್ಡಬಳ್ಳಾಪುರ ರಸ್ತೆ ಬಿ.ಇ.ಎಲ್ ವೃತ್ತ – ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್-ಮದರ್ ಡೈರಿ ಜಂಕ್ಷನ್ ಉನ್ನಿ ಕೃಷ್ಣನ್ ಜಂಕ್ಷನ್ ಎಡ ತಿರುವು ನಾಗೇನಹಳ್ಳಿ ಗೇಟ್ ಬಲ ತಿರುವು ಗಂಟಿಗಾನಹಳ್ಳಿ ಸರ್ಕಲ್ ಬಲ ತಿರುವು ಪಡೆದು – ADVA Parking ಹಾರೋಹಳ್ಳಿ.
For those coming from Bengaluru South towards Adva Parking:
ಮೈಸೂರು ರಸ್ತೆ-ನಾಯಂಡನಹಳ್ಳಿ-ಚಂದ್ರಾ ಲೇಔಟ್-ಗೊರಗುಂಟೆಪಾಳ್ಯ-ಬಿ.ಇ.ಎಲ್ ವೃತ್ತ-ಗಂಗಮ್ಮ ವೃತ್ತ-ಎಂ.ಎಸ್ ಪಾಳ್ಯ ಸರ್ಕಲ್-ಮದರ್ ಡೈರಿ ಜಂಕ್ಷನ್ ಉನ್ನಿ ಕೃಷ್ಣನ್ ಜಂಕ್ಷನ್ – ದೊಡ್ಡಬಳ್ಳಾಪುರ ಮುಖ್ಯ ರಸ್ತೆ ನಾಗೇನಹಳ್ಳಿ ಗೇಟ್ -ಬಲ ತಿರುವು -ಹಾರೋಹಳ್ಳಿ – ADVA Parking.
For those coming from Bangalore South towards Domestic Parking:
ಮೈಸೂರು ರಸ್ತೆ-ನಾಯಂಡನಹಳ್ಳಿ -ಚಂದ್ರಾ ಲೇಔಟ್- ಗೊರಗುಂಟೆಪಾಳ್ಯ -ಬಿ.ಇ.ಎಲ್. ವೃತ್ತ-ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್- ಮದರ್ ಡೈರಿ-ಉನ್ನಿ ಕೃಷ್ಣನ್ ಜಂಕ್ಷನ್ ತಿರುವು ದೊಡ್ಡಬಳ್ಳಾಪುರ ರಸ್ತೆ- ರಾಜಾನುಕುಂಟೆ ಬಲ ತಿರುವು ಅಡ್ಡಿಗಾನಹಳ್ಳಿ ಎಂ.ವಿ.ಐ.ಟಿ ಕ್ರಾಸ್- ವಿದ್ಯಾನಗರ ಕ್ರಾಸ್-ಯು ತಿರುವು ಪಡೆದು Domestic ಹುಣಸಮಾರನಹಳ್ಳಿ.\
Alternative route to reach Kempegowda International Airport (KIAL):
From Bangalore East:
AERO INDIA SHOW ಕೆ.ಆರ್.ಪುರಂ-ಹೆಣ್ಣೂರು ಕ್ರಾಸ್ -ಕೊತ್ತನೂರು- ಗುಬ್ಬಿ ಕ್ರಾಸ್ ಕಣ್ಣೂರು ಬಾಗಲೂರು ಮೈಲನಹಳ್ಳಿ – ಬೇಗೂರು -ನೈರುತ್ಯ ಪ್ರವೇಶದ್ವಾರದ ಮೂಲಕ- KIAL ತಲುಪಬಹುದು.
From Bengaluru West:
ಗೊರಗುಂಟೆಪಾಳ್ಯ – ಬಿ.ಇ.ಎಲ್ ವೃತ್ತ ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್ ಮದರ್ ಡೈರಿ ರಾಜಾನುಕುಂಟೆ ಮೂಲಕ ಉನ್ನಿ ಕೃಷ್ಣನ್ ಜಂಕ್ಷನ್ ಎಡ ತಿರುವು ದೊಡ್ಡಬಳ್ಳಾಪುರ ರಸ್ತೆ ಅದ್ದಿಗಾನಹಳ್ಳಿ – ತಿಮ್ಮಸಂದ್ರ ಎಂ.ವಿ.ಐ.ಟಿ ಕ್ರಾಸ್ ವಿದ್ಯಾನಗರ ಕ್ರಾಸ್ KIAL ತಲುಪುವುದು.
From Bangalore South:
ಮೈಸೂರು ರಸ್ತೆ – ನಾಯಂಡನಹಳ್ಳಿ ಚಂದ್ರಾ ಲೇಔಟ್ – ಗೊರಗುಂಟೆಪಾಳ್ಯ-ಬಿಇಎಲ್ ವೃತ್ತ – ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್ – ಮದರ್‌ಡೈರಿ ಜಂಕ್ಷನ್ ಉನ್ನಿಕೃಷ್ಣನ್ ಜಂಕ್ಷನ್ ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ – ರಾಜಾನುಕುಂಟೆ ಅದ್ದಿಗಾನಹಳ್ಳಿ-ಎಂ.ವಿ.ಐ.ಟಿ ಕ್ರಾಸ್ ವಿದ್ಯಾನಗರ ಕ್ರಾಸ್ ಮೂಲಕ KIAL ತಲುಪಬಹುದು.
Details of roads where lorries, trucks, private buses and other heavy goods vehicles are restricted:
ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಮೇಖಿ ವೃತ್ತದಿಂದ-ಎಂವಿಐಟಿ ಕ್ರಾಸ್ವರೆಗೆ ಮತ್ತು ಎಂ.ವಿ.ಐ.ಟಿ. ಕ್ರಾಸ್ನಿಂದ ಮೇದ್ರಿ ವೃತ್ತದ ವರೆಗೆ, ರಸ್ತೆಯ ಎರಡೂ ದಿಕ್ಕಿನಲ್ಲಿ ಸಂಚಾರ ನಿಷೇಧಿಸಲಾಗಿದೆ. ಗೊರಗುಂಟೆ ಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್ವರೆಗೆ ರಸ್ತೆಯ ಎರಡು ದಿಕ್ಕಿನಲ್ಲಿ ಮತ್ತು ನಾಗವಾರ ಜಂಕ್ಷನ್‌ನಿಂದ – ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ಬಾಗಲೂರು ಮುಖ್ಯ ರಸ್ತೆ, ರೇವಾ ಕಾಲೇಜ್ ಜಂಕ್ಷನ್ವರೆಗೆ ಹಾಗೂ ಹೆಸರಘಟ್ಟ ಮತ್ತು ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ನಗರದ ಕಡೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಬೆಂಗಳೂರು-ಬಳ್ಳಾರಿ ರಸ್ತೆಯ ಮೇಖಿ ಸರ್ಕಲ್ ನಿಂದ ದೇವನಹಳ್ಳಿವರೆಗೆ, ಬಾಗಲೂರು ಕ್ರಾಸ್ ಜಂಕ್ಷನ್‌ನಿಂದ ಬಾಗಲೂರು ಮುಖ್ಯ ರಸ್ತೆಯ ಮಾರ್ಗವಾಗಿ ಸಾತನೂರು, ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ರೇವಾ ಕಾಲೇಜ್ ಜಂಕ್ಷನ್, ಎಫ್‌ಟಿಐ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್ ಜಂಕ್ಷನ್, ಹೆಣ್ಣೂರು ಕ್ರಾಸ್ನಿಂದ ಬೇಗೂರು ಬ್ಯಾಕ್ ಗೇಟ್, ನಾಗೇನಹಳ್ಳಿ ಗೇಟ್ ಜಂಕ್ಷನ್‌ನಿಂದ ಯಲಹಂಕ ಸರ್ಕಲ್, ಎಂವಿಐಟಿ ಕ್ರಾಸ್ನಿಂದ ನಾರಾಯಣಪುರ ರೈಲ್ವೆ ಕ್ರಾಸ್, ಕೋಗಿಲು ಕ್ರಾಸ್ ಜಂಕ್ಷನ್‌ನಿಂದ ಕಣ್ಣೂರು ಜಂಕ್ಷನ್, ಮತ್ತಿಕೆರೆ ಕ್ರಾಸ್ನಿಂದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಉನ್ನಿಕೃಷ್ಣನ್ ಜಂಕ್ಷನ್ ಮತ್ತು ಜಾಲಹಳ್ಳಿ ಕ್ರಾಸ್ ಜಂಕ್ಷನ್‌ನಿಂದ ಗಂಗಮ್ಮ ಸರ್ಕಲ್ ಜಂಕ್ಷನ್ ವರೆಗೆ ಪಾರ್ಕಿಂಗ್ಗೆ ನಿಷೇಧಿಸಲಾಗಿದೆ.
QR Code Scan:
ಏರ್ ಶೋ ವೀಕ್ಷಣೆಗೆ ಬರುವವರು ತಮಗೆ ನೀಡಲಾಗಿರುವ ಟಿಕೆಟ್ ಅಥವಾ ಪಾಸ್‌ನ ಕ್ಯೂ ಆರ್ ಕೋಡ್ ಅನ್ನು ಮೊದಲೇ ಸ್ಕ್ಯಾನ್ ಮಾಡಿ ಯಾವ ಗೇಟ್‌ನಿಂದ ಪ್ರವೇಶಿಸಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಂಡು ಪ್ರಯಾಣಿಸಿದ್ದಲ್ಲಿ ಅನವಶ್ಯಕ ವಿಳಂಬಕ್ಕೆ ಅವಕಾಶವಿರುವುದಿಲ್ಲ.
ಅಲ್ಲದೆ ವೀಕ್ಷಣೆಗೆ ಬರುವವರು ಉಚಿತ ವಾಹನ ನಿಲುಗಡೆ ಲಭ್ಯವಿರುವ ಜಿಕೆವಿಕೆ ಆವರಣ ಮತ್ತು ಶಟಲ್ ಬಸ್ ಸೇವೆಯನ್ನು ಉಪಯೋಗಿಸಲು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನು ಓದಿರಿ : Crushing Debt And Shattered Dreams: Families Of Punjab Deportees Stare At Bleak Future