ನಾವು ತಿನ್ನುವ ಊಟ ಕಲಬೆರಕೆ, ಕುಡಿಯುವ ನೀರು ಕಲಬೆರಕೆ ಎನ್ನುವ ಸಂಗತಿಗಳ ನಡುವೆ ನಾವು ಸೇವನೆ ಮಾಡುವ ಗಾಳಿಯೂ ಕೆಲಬೆರಕೆ ಆಗುತ್ತಿದೆ ಎನ್ನುವ ವಿಚಾರ ಹೊರಬಿದ್ದಿದೆ. ಈ ವಿಚಾರ ಕೇಳಿ ಸಿಲಿಕಾನ್ ಸಿಟಿ ಜನರು ಸ್ವಲ್ಪ ಗಾಬರಿ ಪಡುವಂತಾಗಿದೆ.
2023ನೇ ವರ್ಷದಲ್ಲಿ ಬೆಂಗಳೂರಿನ ವಾಯುಮಾಲಿನ್ಯದ ಬಗ್ಗೆ ಸ್ಟಡಿ ಮಾಡಿರುವ ಗ್ರೀನ್‌ಪೀಸ್ ಇಂಡಿಯಾ, ಸಿಲಿಕಾನ್ ಸಿಟಿಯ ಗಾಳಿಯಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ದುಪ್ಪಟ್ಟಾಗಿದೆ ಎಂದು ವರದಿ ನೀಡಿದೆ.
WHO ನಿಗದಿಪಡಿಪಡಿಸಿರುವ ಪ್ರಮಾಣಕ್ಕಿಂತಲೂ 2 ಪಟ್ಟು ನೈಟ್ರೋಜನ್ ಡೈಆಕ್ಸೈಡ್ ಕಂಟೆಂಟ್ ಗಾಳಿಯಲ್ಲಿ ಮಿಶ್ರಣವಾಗಿದ್ದು, ಇದು ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ. ಅದರಲ್ಲೂ ವಿಶೇಷವಾಗಿ ಟ್ರಾಫಿಕ್ನಲ್ಲಿ ವಾಹನಗಳಿಂದ ಹೊರಸೂಸುವ ಕೆಟ್ಟ ಇಂಧನದಿಂದ ವಾಯುಮಾಲಿನ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
ಬೆಂಗಳೂರಿನಲ್ಲಿ ಸದ್ಯ ತಣ್ಣನೆ ಗಾಳಿ ಮೆಲ್ಲನೇ ಬೀಸುತ್ತಿದ್ದು ಮೈ ನಡುಗಿಸುವ ಚಳಿ ಕೂಡ ಇದೆ. ಈ ವೆದರ್ ಎಂಜಾಯ್ ಸಹ ಮಾಡೋರಿದ್ದಾರೆ. ಬಟ್, ಬೆಂಗಳೂರಿನ ಗಾಳಿ ಸುರಕ್ಷಿತವಾಗಿಲ್ಲ ಎನ್ನುವ ಶಾಕಿಂಗ್ ಮಾಹಿತಿ ಒಂದು ಹೊರ ಬಿದ್ದಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ ಗಾಳಿಯ ಗುಣಮಟ್ಟ ಹೆಚ್ಚು ಕಳಪೆಯಾಗಿದೆ ಎಂದು ಗ್ರೀನ್ ಪೀಸ್ ಇಂಡಿಯಾ ಎಂಬ ಸಂಸ್ಥೆ ವರದಿ ಮಾಡಿದೆ.