ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನ ಕಳೆದಂತೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ವಾರ ಬಿಗ್ಬಾಸ್ ಮನೆಯಲ್ಲಿ ಗೌತಮಿ ಜಾಧವ್ ಹಾಗೂ ಐಶ್ವರ್ಯಾ ಕಣ್ಣೀರು ಹಾಕಿದ್ದಾರೆ.
ಈ ಬಾರಿ ಬಿಗ್ಬಾಸ್ ಗೇಮ್ನಲ್ಲಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಂಗಡಿಸಿ, ಎರಡು ಟಿವಿ ಚಾನೆಲ್ಗಳನ್ನ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಅಂತೆಯೇ ನಿನ್ನೆಯಿಂದ ಬಿಗ್ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಗೊಂಡಿದೆ. ಅಂತೆಯೇ ಟಿವಿ ವಾಹಿನಿಯ ಎದುರಾಳಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗುತ್ತಿದೆ.
ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್ಗೆ ಸಂಬಂಧಿಸಿದಂತೆ ಪ್ರೊಮೋವನ್ನು ಕಲರ್ಸ್ ಕನ್ನಡ ಶೇರ್ ಮಾಡಿದೆ. ಅದರಲ್ಲಿ ಶಿಶಿರ್ ಗೆಳತಿ ಐಶ್ವರ್ಯಾಗೆ ಮೂರು ಹಾಗಲಕಾಯಿ ತಿನ್ನುವಂತೆ ಕೇಳಿಕೊಂಡಿದ್ದಾರೆ. ಅದೇ ರೀತಿ ಗೌತಮಿಗೆ ರಜತ್ ಎರಡು ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್ ನೀಡಲಾಗಿದೆ.
ಇದೇ ಟಾಸ್ಕ್ನಲ್ಲಿ ಸ್ಪರ್ಧಿಗಳು ಹ್ಞೂಂ ಅಂತ ಎದುರಾಳಿ ತಂಡ ಕೊಟ್ಟ ಚಾಲೆಂಜ್ ಸ್ವೀಕರಿಸಿದ್ದಾರೆ. ಅಂತೆಯೇ ಗೌತಮಿ ಹಸಿ ಮೆಣಸಿನಕಾಯಿಯನ್ನು ಪಟ ಪಟ ಅಂತ ಇದ್ದು, ಕಾರವನ್ನು ತಡೆದುಕೊಳ್ಳಲು ಆಗದೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇತ್ತ ಐಶ್ವರ್ಯಾ ಕೂಡ ಕಹಿಯಾದ ಮೂರು ಹಾಗಲಕಾಯಿಯನ್ನು ಒಲ್ಲದ ಮನಸ್ಸಿನಿಂದ ತಿಂದು ಟಾಸ್ಕ್ ಅನ್ನು ಕಂಪ್ಲೀಟ್ ಮಾಡಿದ್ದಾರೆ. ಅಲ್ಲದೇ ಉಗ್ರಂ ಮಂಜು, ರಜತ್ಗೆ ತಲೆ ಬೋಳಿಸಿಕೊಳ್ಳಬೇಕು ಎಂದು ಸವಾಲ್ ಹಾಕಿದ್ದಾರೆ. ಅದಕ್ಕೆ ರಜತ್ ‘ಓಕೆ’ ಎಂದು ತಮ್ಮ ಕೂದಲನ್ನೂ ಟ್ರಿಮ್ ಮಾಡಿಸಿಕೊಂಡಿದ್ದಾರೆ.