ಬೆಂಗಳೂರು: ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್‌ಶಿಪ್‌ನ 25ನೇ ಆವೃತ್ತಿಯು ನವೆಂಬರ್ 26, ಮಂಗಳವಾರದಿಂದ ಆರಂಭವಾಗಲಿದೆ.
ಸಿಐಎಸ್‌ಎಫ್‌ನ ವಿಶೇಷ ಮಹಾನಿರ್ದೇಶಕ (ಎಸ್‌ಡಿಜಿ) ಪ್ರವೀರ್ ರಂಜನ್ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಸಮಾರೋಪ ಸಮಾರಂಭವನ್ನು ನೆರವೇರಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಐಜಿಪಿ ಜೋಸೆಫ್ ಮೋಹನ್ ಅವರು, ಸಿಐಎಸ್‌ಎಫ್‌ನ ವಿಶೇಷ ಮಹಾನಿರ್ದೇಶಕ (ಎಸ್‌ಡಿಜಿ) ಪ್ರವೀರ್ ರಂಜನ್ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಸಮಾರೋಪ ಸಮಾರಂಭವನ್ನು ನೆರವೇರಿಸಲಿದ್ದಾರೆ.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಶನ್ (ಕೆಎಸ್‌ಎಲ್‌ಟಿಎ) ಕ್ರೀಡಾಂಗಣ ಮತ್ತು ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್) ಆಯೋಜಿಸಿರುವ ನಾಲ್ಕು ದಿನಗಳ ಪಂದ್ಯಾವಳಿಗೆ ಆಂಧ್ರ ಪ್ರದೇಶ, ತೆಲಂಗಾಣ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ರಾಜ್ಯಗಳ ಪೊಲೀಸ್, ಸಿಆರ್‌ಪಿಎಫ್, ಗುಪ್ತಚರ ವಿಭಾಗ, ರಾಷ್ಟ್ರೀಯ ಭದ್ರತಾ ಪಡೆ ಸೇರಿದಂತೆ 21 ತಂಡಗಳು ಹೆಸರು ನೋಂದಾಯಿಸಿದ್ದು, 124 ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸಿಂಗಲ್ಸ್, ಡಬಲ್ಸ್ ಮತ್ತು ಹಿರಿಯರ ವಿಭಾಗದ ಪಂದ್ಯಗಳು ಕಬ್ಬನ್ ಉದ್ಯಾನದಲ್ಲಿರುವ ಲಾನ್ ಟೆನಿಸ್ ಅಸೋಸಿಯೇಷನ್ ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿವೆ. ಉತ್ತಮ ಪ್ರದರ್ಶನ ನೀಡುವ ತಂಡಕ್ಕೆ ಚಾಂಪಿಯನ್‌ಷಿಪ್ ಟ್ರೋಫಿ ಹಾಗೂ ವಿಜೇತರಿಗೆ ಟ್ರೋಫಿ ನೀಡಿ ಗೌರವಿಸಲಾಗುವುದು.
ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿಯಾಗಿದೆ. ಹಾಗಾಗಿ ತರಬೇತಿ ಅವಧಿಯಲ್ಲಿಯೇ ಕ್ರೀಡೆಗೆ ಹೆಚ್ಚು ಪ್ರೊತ್ಸಾಹ ನೀಡಲಾಗುತ್ತದೆ. ಈ ಚಾಂಪಿಯನ್‌ಶಿಪ್ ದೇಶಾದ್ಯಂತ ರಾಜ್ಯ ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಆಟಗಾರರನ್ನು ಒಟ್ಟುಗೂಡಿಸಿ, ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ.
ಈ ಪಂದ್ಯಾವಳಿಯ ಉದ್ದೇಶವು ಪೊಲೀಸ್ ಸಂಸ್ಥೆಗಳ ನಡುವೆ ಉತ್ತಮ ಸಂಬಂಧವನ್ನು ಬೆಳೆಸುವುದು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುವುದಾಗಿದೆ ಎಂದು ಹೇಳಿದರು.
ಏರ್‌ಪೋರ್ಟ್ ಸೆಕ್ಟರ್‌ನ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಜೋಸ್ ಮೋಹನ್ ಅವರು ಮಾತನಾಡಿ, ರಾಷ್ಟ್ರದಾದ್ಯಂತದ ಪೊಲೀಸ್ ಪಡೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಐಜಿ ಶ್ರೇಣಿಯ ಅಧಿಕಾರಿಯೂ ಭಾಗವಹಿಸಲಿದ್ದಾರೆಂದು ತಿಳಿಸಿದರು.