spot_img
spot_img

ಸಾರ್ವಕಾಲಿಕ ದಾಖಲೆ ಬರೆದ ಬಿಟ್​ಕಾಯಿನ್​

spot_img
spot_img

Share post:

ನ್ಯೂಯಾರ್ಕ್​: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ಬಳಿಕ ಬಿಟ್​ಕಾಯಿನ್​ ಮೌಲ್ಯ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಇದೀಗ ಮೊದಲ ಬಾರಿಗೆ ಹೊಸ ದಾಖಲೆಯನ್ನೂ ಸೃಷ್ಟಿಸಿದೆ. ಬಿಟ್ ಕಾಯಿನ್ ಮೌಲ್ಯ ಇದೀಗ 1 ಲಕ್ಷ ಡಾಲರ್​ಗೆ ಏರಿಕೆ ಕಂಡಿದೆ.

ಈ ಬೆನ್ನಲ್ಲೇ ಮುಂದಿನ ತಿಂಗಳು ಅಧಿಕಾರ ಸ್ವೀಕಾರ ಮಾಡಲಿರುವ ಟ್ರಂಪ್​ ಕ್ರಿಪ್ಟೋಕರೆನ್ಸಿ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಅವರು ಚುನಾವಣೆ ಪ್ರಚಾರದ ವೇಳೆ ಕ್ರಿಪ್ಟೋಕರೆನ್ಸಿ ಬಲವರ್ದನೆಯ ಮಾತನಾಡಿದ್ದರು.

ಈ ಮೊದಲು ಬಿಟ್​ ಕಾಯಿನ್​​​ 1ಲಕ್ಷ ಡಾಲರ್​ಗಿಂತ ಕಡಿಮೆ ಮೌಲ್ಯದಲ್ಲಿ ವ್ಯವಹಾರ ನಡೆಸುತ್ತಿತ್ತು. ಈ ನಡುವೆ ಕ್ರಿಪ್ಟೋ ಪ್ರತಿಪಾದಕ ಪಾಲ್ ಅಟ್ಕಿನ್ಸ್ ಅವರನ್ನು ಸೆಕ್ಯುರಿಟೀಸ್ & ಎಕ್ಸ್ಚೇಂಜ್ ಕಮಿಷನ್​​ನ ಅಧ್ಯಕ್ಷರನ್ನಾಗಿ ನೇಮಕ ಮಾಡುವ ನಿರ್ಧಾರವನ್ನು ಟ್ರಂಪ್​​ ಘೋಷಣೆ ಮಾಡಿದ ಬಳಿಕ ಕ್ರಿಫ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಕಂಡು ಬಂದಿದೆ. ಪರಿಣಾಮ ಇಂದು ಬಿಟ್​​​ ಕಾಯಿನ್​ ಖರೀದಿ ಭರಾಟೆ ಕಂಡು ಬಂದಿದ್ದರಿಂದ ಇದರ ಮೌಲ್ಯ ಲಕ್ಷ ಡಾಲರ್​ ಮೀರಿ ಮುಂದುವರೆದಿದೆ.

ಕ್ರಿಪ್ಟೋಕರೆನ್ಸಿಯು ಆರಂಭಿಕ ಏಷ್ಯನ್ ವ್ಯಾಪಾರದಲ್ಲಿ 102,700 ಡಾಲರ್ ಮುಟ್ಟಿದೆ. ಚುನಾವಣಾ ಪ್ರಚಾರ ವೇಳೆ ಮಾತನಾಡಿದ್ದ ಟ್ರಂಪ್​ ಯುನೈಟೆಡ್​ ಸ್ಟೇಟ್ಸ್​ ಅನ್ನು ಬಿಟ್‌ಕಾಯಿನ್ ಮತ್ತು ಕ್ರಿಪ್ಟೋಕರೆನ್ಸಿ ರಾಜಧಾನಿಯನ್ನಾಗಿ ಮಾಡುವುದಾಗಿ ಘೋಷಿಸಿದ್ದರು. ಅವರ ಈ ಮಾತು ಅಮೆರಿಕನ್​ ಅಧ್ಯಕ್ಷೀಯ ಚುನಾವಣೆ ಮೇಲೆ ಭಾರಿ ಪರಿಣಾಮ ಬೀರಿತ್ತು ಎಂದು ಹೇಳಲಾಗುತ್ತಿದೆ.

ಅಟ್ಕಿನ್ಸ್​​ 2002 ರಿಂದ 2008 ರವರೆಗೆ ಎಸ್​ಇಸಿ ಆಯುಕ್ತರಾಗಿದ್ದು, 2009ರಲ್ಲಿ ಪಟೋಮಾಕ್ ಗ್ಲೋಬಲ್ ಪಾರ್ಟ್‌ನರ್ಸ್ ಸಂಸ್ಥೆ ಸ್ಥಾಪಿಸಿದರು. ಇದು ಬ್ಯಾಂಕಿಂಗ್​, ಟ್ರೇಡಿಂಗ್​ ಮತ್ತು ಕ್ರಿಪ್ಟೋಕರೆನ್ಸಿ ಸಂಸ್ಥೆಯಾಗಿದೆ.
ಡಿಜಿಟಲ್ ಸ್ವತ್ತುಗಳು ಮತ್ತು ಇತರ ಆವಿಷ್ಕಾರಗಳು ಅಮೆರಿಕವನ್ನು ಹಿಂದೆಂದಿಗಿಂತಲೂ ಉತ್ತಮವಾಗಿಸಲು ನಿರ್ಣಾಯಕವಾಗಿವೆ. 2022ರ ಮಾರುಕಟ್ಟೆಯ ವೈಫಲ್ಯಕ್ಕೆ ಕಾರಣರಾದ ಗ್ಯಾರಿ ಜೆನ್ಸ್ಲರ್ ಅವರ ನೀತಿಯನ್ನು ಬದಲಾಯಿಸಲಾಗುತ್ತದೆ ಎಂದು ಟ್ರಂಪ್​ ತಿಳಿಸಿದ್ದಾರೆ.

ಅಷ್ಟು ಮಾತ್ರವಲ್ಲದೇ, ಅಟ್ಕಿನ್ಸ್​, 2017 ರಿಂದ ಡಿಜಿಟಲ್ ಸ್ವತ್ತುಗಳ ಬಳಕೆ ಉತ್ತೇಜಿಸುವ ಡಿಜಿಟಲ್ ಚೇಂಬರ್ ಆಫ್ ಕಾಮರ್ಸ್‌ನ ಸಹ ಅಧ್ಯಕ್ಷರೂ ಆಗಿ ಕೆಲಸ ಮಾಡಿದ್ದಾರೆ. ಅಟ್ಕಿನ್ಸ್​​ ಕ್ರಿಪ್ಟೋಕರೆನ್ಸಿಯ ಸಾಮಾನ್ಯ ಜ್ಞಾನದ ನಿಯಮಾವಳಿ ಹೊಂದಿರುವ ನಾಯಕ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಅಲ್ಲದೇ ಅವರು ಬಂಡವಾಳ ಮಾರುಕಟ್ಟೆಯ ಸ್ಥಿರತೆ, ನವೀನತೆಗೆ ಬದ್ಧರಾಗಿದ್ದಾರೆ ಎಂದು ಟ್ರಂಪ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಮ್ಮೆ ಕ್ರಿಪ್ಟೋಕರೆನ್ಸಿಗಳನ್ನು “ಹಗರಣ” ಎಂದು ಬ್ರಾಂಡ್ ಮಾಡಿದ್ದ ಟ್ರಂಪ್​ ಬಳಿಕ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಬಿಟ್​ ಕಾಯಿನ್​​ ಪರ ಚುನಾವಣಾ ಪ್ರಚಾರದ ವೇಳೆ ವಕಾಲತ್ತು ಸಹ ವಹಿಸಿದ್ದರು ಎಂಬುದು ಗಮನಾರ್ಹ.

ಅಷ್ಟೇ ಅಲ್ಲತಮ್ಮ ಮಕ್ಕಳು ಮತ್ತು ಉದ್ಯಮಿಗಳೊಂದಿಗೆ ವರ್ಲ್ಡ್ ಲಿಬರ್ಟಿ ಫೈನಾನ್ಶಿಯಲ್ ಎಂಬ ಡಿಜಿಟಲ್ ಕರೆನ್ಸಿ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಟ್ರಂಪ್​​​​​​​​ ಅಮೆರಿಕದ ಪ್ರಸಿದ್ಧ ಉದ್ಯಮಿ ನಂಬರ್​ ಒನ್​ ಶ್ರೀಮಂತ ಎಲೋನ್ ಮಸ್ಕ್ ಆಪ್ತ ಸ್ನೇಹಿತರಾಗಿದ್ದಾರೆ. ಅಷ್ಟೇ ಅಲ್ಲ ಫೆಡರಲ್​ ಗವರ್ನಮೆಂಟ್​​​​​​ ನಲ್ಲಿ ಆಗುತ್ತಿರುವ ಭಾರಿ ವೆಚ್ಚವನ್ನು ಕಡಿಮೆ ಮಾಡಲು ನಿರ್ಧರಿಸಿರುವ ಡೊನಾಲ್ಡ್​ ಟ್ರಂಪ್​, ಎಲೋನ್ ಮಸ್ಕ್ ಅವರಿಗೆ ಯುಎಸ್ ಸರ್ಕಾರದಲ್ಲಿ ವೆಚ್ಚವನ್ನು ಕಡಿಮೆಗೊಳಿಸುವ ಸಮಿತಿಯನ್ನು ಸ್ಥಾಪಿಸುವ ಜವಾಬ್ದಾರಿಯನ್ನು ವಹಿಸಿದ್ದಾರೆ. ಮಸ್ಕ್ ಈ ಹಿಂದೆ $2 ಟ್ರಿಲಿಯನ್ ವೆಚ್ಚವನ್ನು ಕಡಿತಗೊಳಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಟ್ರಂಪ್​ ಮಸ್ಕ್​ಗೆ ಅತಿದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ.

ಮತ್ತೊಂದು ಕಡೆ ಟ್ರಂಪ್​, ಕ್ರಿಪ್ಟೋ ಉದ್ಯಮದ ಮೇಲಿನ ನಿಬಂಧನೆಗಳನ್ನು ಹಿಂಪಡೆಯುವ ಉದ್ದೇಶ ಇಟ್ಟುಕೊಂಡಿದ್ದು, ಹೂಡಿಕೆದಾರರು ಡಿಜಿಟಲ್ ಕರೆನ್ಸಿ ಮತ್ತು ಸಂಬಂಧಿತ ಸ್ಟಾಕ್‌ಗಳ ಕುರಿತು ಅರ್ಥೈಸಿಕೊಳ್ಳಲು ಮುಂದಾಗಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...