spot_img
spot_img

ಆಂಧ್ರಪ್ರದೇಶಕ್ಕೆ ಅಮರಾವತಿ ಏಕೈಕ ರಾಜಧಾನಿಯಾಗಿರಲಿದೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಎಲ್ಲ ದೃಷ್ಟಿಕೋನದಲ್ಲೂ ಆಂಧ್ರಪ್ರದೇಶದ ಏಕಮೇವ ರಾಜಧಾನಿಯಾಗಿ ಅಮರಾವತಿ ಅಭಿವೃದ್ಧಿ ಪಡಿಸಲು ಬದ್ಧವಾಗಿರುವುದಾಗಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​​ಗೆ ತಿಳಿಸಿದೆ. ರಾಜಧಾನಿ ಅಮರಾವತಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ರಾಜಧಾನಿ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಕಾನೂನು ಬದ್ಧ ಭರವಸೆ ನೀಡಲಾಗಿದೆ.

ಆಂಧ್ರ ಪ್ರದೇಶ ಸರ್ಕಾರವು 2014ರ ಆಂಧ್ರಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಜಾರಿಗೊಳಿಸಿದೆ.

ಮಾಸ್ಟರ್ ಪ್ಲಾನ್ ಮತ್ತು ಭೂ ಸದೃಢೀಕರಣದಡಿ ನಗರವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಆಂಧ್ರಪ್ರದೇಶ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
ಆಂಧ್ರ ಪ್ರದೇಶ ಸರ್ಕಾರವು 2014ರಲ್ಲಿ ಆಂಧ್ರಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯನ್ನು ಜಾರಿಗೊಳಿಸಿದೆ. ಎಪಿಸಿಆರ್​ಡಿಎನ್ನು ಸ್ಥಾಪಿಸಿದ್ದು, ಈ ಕಾಯಿದೆಯನ್ನು ರಾಜ್ಯಪಾಲರ ಒಪ್ಪಿಗೆಯೊಂದಿಗೆ 2014ರ ಡಿಸೆಂಬರ್​ 30ರಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿತ್ತು.

2015ರ ಜೂನ್​ 9ರಂದು ಪರಿಷ್ಕರಿಸಿದಂತೆ ಜಿಒ ಎಂಎಸ್​ ಸಂಖ್ಯೆ 141ರಲ್ಲಿ ಪ್ರಕಟಿಸಿದಂತೆ 122 ಚ.ಕಿ.ಮೀ ಅನ್ನು 217 ಚ.ಕಿಮೀವರೆಗೂ ವಿಸ್ತರಿಸಿ ರಾಜಧಾನಿ ಪ್ರದೇಶ ಎಂದು ಗುರುತಿಸಲಾಗಿದೆ. 2016ರ ಫಬ್ರವರಿ 23ರಂದು ಕಾಯಿದೆಯ ಸೆಕ್ಷನ್​ 39ರಂತೆ ಸಂಪೂರ್ಣ ಮಾಸ್ಟರ್​ ಪ್ಲಾನ್​ ಪ್ರಕಟಿಸಲಾಗಿದೆ.

ಈ ಗೆಜೆಟ್​ನಲ್ಲಿ ಪ್ರಕಟಿಸಿದಂತೆ ಜಿಒ ಎಂಎಸ್​ ಸಂಖ್ಯೆ 254ರ, 53,748 ಎಕರೆಯಲ್ಲಿ ಹರಡಿರುವ 24 ಕಂದಾಯ ಗ್ರಾಮ ಸೇರಿದಂತೆ ಕೃಷ್ಣ ನದಿ ಮತ್ತು ವಿಜಯವಾಡ ಹಾಗೂ ಗುಂಟೂರು ನಡುವೆ ರಾಜಧಾನಿ ನಗರ ಅಭಿವೃದ್ಧಿಯಾಗಲಿದೆ. ಕಾಯಿದೆ ಸೆಕ್ಷನ್​ 3(3) ಅಂತೆ ಒಟ್ಟಾರೆ 122 ಚ. ಕಿ.ಮೀ ಪ್ರದೇಶವನ್ನು ರಾಜಧಾನಿ ನಗರವಾಗಿ ಘೋಷಿಸಲಾಗಿದೆ.

ಅಮರಾವತಿಯನ್ನು ಕೇವಲ ಆಡಳಿತಾತ್ಮಕ ನಗರವಲ್ಲದೇ, ಆರ್ಥಿಕ ಹಬ್​ ಆಗಿಯೂ ರೂಪಿಸಲಾಗುವುದು. ಅಮರಾವತಿಯನ್ನು ಪ್ರತಿ 1000 ಎಕರೆಯಂತೆ 1 ರಿಂದ 1.5 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ 27 ಟೌನ್​ ಶಿಪ್ ಗಳಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಅಫಿಡವಿಟ್​ನಲ್ಲಿ ವಿವರಿಸಲಾಗಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಹಿಂದುಳಿದ ವರ್ಗಗಳ ಮೀಸಲಾತಿಗೆ ಆಗ್ರಹ : ಪಂಚಮಸಾಲಿಗರ ಹೋರಾಟ ತೀವ್ರ!

ಬೆಂಗಳೂರು: ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ವಿರೋಧಿಸಿ ಸುವರ್ಣಸೌಧದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಎದುರು ವಿಪಕ್ಷ ನಾಯಕ ಆರ್, ಅಶೋಕ್ ನೇತೃತ್ವದಲ್ಲಿ...

ಆಸ್ತಿ ತೆರಿಗೆ ಕಟ್ಟಲು ನಿರಾಕರಣೆ : ರಸ್ತೆ ಸರಿಪಡಿಸಿದ ಪಂಚಾಯಿತಿ ಸದಸ್ಯರು

ಬೆಂಗಳೂರು: ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂಬ ನಾಗರಿಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾಲನಾಯಕನಹಳ್ಳಿ ಪಂಚಾಯಿತಿಯ 15 ಸದಸ್ಯರು ತಮ್ಮ ಜೇಬಿನಿಂದ ಸುಮಾರು 5 ಲಕ್ಷ...

ದೆಹಲಿ : ಗೃಹಲಕ್ಷ್ಮೀ ಯೋಜನೆ ಚುನಾವಣೆ ಬಳಿಕ 2100

ನವದೆಹಲಿ: 2025ರ ದೆಹಲಿ ವಿಧಾನಸಭೆ ಚುನಾವಣೆಗೂ ಮೊದಲು ದೆಹಲಿ ಮುಖ್ಯಮಂತ್ರಿ ಅತಿಶಿ ಸರ್ಕಾರವು ಸಚಿವ ಸಂಪುಟ ಸಭೆಯ ನಂತರ ಅರವಿಂದ್ ಕೇಜ್ರಿವಾಲ್ ಅವರ ಗ್ಯಾರಂಟಿಯನ್ನು...

ಪುನರ್‌ ಸಮೀಕರಣ : 2ಎ ಕಥೆ ಮುಗಿದು ಹೋಗಿದೆ

ಮೈಸೂರು: ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ ಸದಸ್ಯ ಹೆಚ್.‌ವಿಶ್ವನಾಥ್‌, 2ಎ ಕಥೆ ಈಗಾಗಲೇ ಮುಗಿದು ಹೋಗಿದೆ. ಅವುಗಳನ್ನು ಪುನರ್‌...