Haveri News:
ಕೂಡಲಸಂಗಮದಲ್ಲಿ ಬಸವಣ್ಣನವರ ಐಕ್ಯಮಂಟಪದಂತೆ AMBIGARA CHOUDAYYA MANTAP ಅಭಿವೃದ್ಧಿ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಅಭಿನವ ಅಂಬಿಗ ಚೌಡಯ್ಯ ಸ್ವಾಮೀಜಿ ಎಂದು ಸ್ಥಳೀಯ ಮುಖಂಡರು ಮತ್ತು ಸ್ವಾಮೀಜಿಗಳು ತಮಗೆ ಪಟ್ಟಾಭಿಷೇಕ ಮಾಡಿದ್ದಾರೆ. ಕೂಡಲಸಂಗಮದಲ್ಲಿ ಬಸವಣ್ಣನವರ ಐಕ್ಯಮಂಟಪದಂತೆ AMBIGARA CHOUDAYYA MANTAPದ ಅಭಿವೃದ್ಧಿಯಾಗಬೇಕು. ಐಕ್ಯಮಂಟಪದ ಅಭಿವೃದ್ಧಿಗಾಗಿ ನಾನು ಸ್ವಾಮೀಜಿಯಾಗಿದ್ದು, ನನ್ನ ನಂತರವೂ ಈ ಪರಂಪರೆ ಮುಂದುವರೆಯುತ್ತೆ ಎಂದು ವೀರಭದ್ರ ಸ್ವಾಮೀಜಿ ತಿಳಿಸಿದರು.
ತಾಲೂಕು ನರಸೀಪುರದಲ್ಲಿ ನಿಜಶರಣ ಅಂಬಿಗ ಚೌಡಯ್ಯ ಪೀಠದಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದೆ. ಇದರ ಮಧ್ಯದಲ್ಲಿಯೇ AMBIGARA CHOUDAYYA MANTAP ಅಭಿವೃದ್ದಿ ಮಾಡಲು ಸ್ಥಳೀಯರೇ ಸ್ವಾಮೀಜಿಯೊಬ್ಬರಿಗೆ ಪಟ್ಟಾಭಿಷೇಕ ಮಾಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರ 12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯನ ತವರೂರು.
ಇಲ್ಲಿಯ ಮುಕ್ತೇಶ್ವರ ದೇವಸ್ಥಾನದ ಪಕ್ಕದಲ್ಲಿಯೇ ತುಂಗೆಯ ತಟದಲ್ಲಿ AMBIGARA CHOUDAYYA MANTAPವಿದೆ. ಕನಕದಾಸರ ಕಾಗಿನೆಲೆ ಅಭಿವೃದ್ಧಿಯಾಗಿದೆ. ಬಸವಣ್ಣರ ಐಕ್ಯಮಂಟಪದ ಅಭಿವೃದ್ಧಿಯಾಗಿದೆ. ಆದರೆ ಚೌಡಯ್ಯ ಐಕ್ಯಮಂಟಪ ಅಭಿವೃದ್ಧಿಯಾಗಿಲ್ಲ ಯಾಕೆ ಆಗಿಲ್ಲ? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ನಿಜಶರಣ AMBIGARA CHOUDAYYA MANTAP ಮತ್ತು ಚೌಡಯ್ಯದಾನಪುರ ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅದರ ಬದಲು ಚೌಡಯ್ಯ ಪೀಠದ ಅನತಿದೂರದಲ್ಲಿರುವ ನರಸೀಪುರದಲ್ಲಿ ಅಂಬಿಗರ ಚೌಡಯ್ಯಪೀಠ ಸ್ಥಾಪನೆ ಮಾಡಿ, ಅದರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಸದ್ಯ ಇರುವ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ಮೂಲ ಮಠ ನಿರ್ಲಕ್ಷಿಸಿಲ್ಲ ಎಂದು ಮದ್ವರಾಜ್ ತಿಳಿಸಿದ್ದಾರೆ. ಅಂಬಿಗರ AMBIGARA CHOUDAYYA MANTAP ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತೆ. ಸಮಾಜದ ಹಿರಿಯರ ತೀರ್ಮಾನದಂತೆ ನರಸೀಪುರದಲ್ಲಿ ಮಠದ ಅಭಿವೃದ್ಧಿ ಕಾರ್ಯಗಳಾಗಿವೆ. ಈಗ ಭುಗಿಲೆದ್ದಿರೋ ಗೊಂದಲಗಳನ್ನು ಸರಿಪಡಿಸುತ್ತೇವೆ ಅಂತ ಹೇಳಿದರು.
”ಅಂಬಿಗರ ಚೌಡಯ್ಯ ಪೀಠದ ಮೂಲ AMBIGARA CHOUDAYYA MANTAP ಅಭಿವೃದ್ಧಿ ಆಗಿಲ್ಲ. ಚೌಡಯ್ಯದಾನಪುರ ಒಂದು ಐತಿಹಾಸಿಕ ಕ್ಷೇತ್ರ. ನಿಜಗುಣ ಅಂಬಿಗರ ಚೌಡಯ್ಯನವರ ಐಕ್ಯ ಭೂಮಿ ಅಲ್ಲಿಯೇ ಇದೆ. ಆದರೆ AMBIGARA CHOUDAYYA MANTAPದ ಪಕ್ಕದಲ್ಲಿಯೇ ಪುರಾತತ್ವ ಇಲಾಖೆಯ ಸುಪರ್ದಿಗೆ ಒಳಪಡುವ ಮುಕ್ತೇಶ್ವರ ದೇವಸ್ಥಾನವಿದೆ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ದೇವಸ್ಥಾನ ಇದಾಗಿದ್ದು, ದೇವಸ್ಥಾನದ ಸುತ್ತಮುತ್ತಲೂ 300 ಮೀಟರ್ನಲ್ಲಿ ಯಾವುದೇ ಕಟ್ಟಡ ಕಾಮಗಾರಿ ನಡೆಸಲು ಸಾಧ್ಯವಿಲ್ಲ” ಎನ್ನುತ್ತಾರೆ ಅಂಬಿಗರಪೀಠದ ಕಾರ್ಯಾಧ್ಯಕ್ಷ ಪ್ರಮೋದ್ ಮದ್ವರಾಜ್.
ಗಂಗಾಮತ ಸಮುದಾಯ ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾಗಿದ್ದು, ಇದೀಗ ಐಕ್ಯಮಂಟಪ ವಿಚಾರದಲ್ಲಿ ಪರ್ಯಾಯ ಸ್ವಾಮೀಜಿ ಪೀಠಾರೋಹಣ ಮಾಡಿರುವುದು ಹಲವು ಜಿಜ್ಞಾಸೆಗಳಿಗೆ ಕಾರಣವಾಗಿದೆ. ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಈ ಬಗ್ಗೆ ನನ್ನ ಗಮನಕ್ಕೆ ಇಲ್ಲ. ರಾಜ್ಯದ ಎಲ್ಲಾ ಸಮಾಜದ ಬಾಂಧವರು ಸೇರಿ ನನ್ನನ್ನು ಸ್ವಾಮೀಜಿ ಮಾಡಿದ್ದಾರೆ. ಪರ್ಯಾಯ ಸ್ವಾಮೀಜಿ ನೇಮಕ ನನ್ನ ಗಮನದಲ್ಲಿ ಇಲ್ಲ ಎಂದು ತಿಳಿಸಿದರು.
ಇದನ್ನು ಓದಿರಿ : MINISTER MAHADEVAPPA REACTION : ಯಾವ ರೇಸೂ ಇಲ್ಲ, ಸಿಎಂ ಕುರ್ಚಿ ಮೇಲೆ ಸಿದ್ದರಾಮಯ್ಯ ಗಟ್ಟಿಯಾಗಿ ಕುಳಿತಿದ್ದಾರೆ