spot_img
spot_img

ANCIENT WELL DISCOVERED – ಸಂಭಾಲ್ನಲ್ಲಿ ಮತ್ತೊಂದು ಪುರಾತನ ಬಾವಿ ಪತ್ತೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Sambhal (Uttar Pradesh) News:

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆಯುತ್ತಿರುವ ‘ರಹಸ್ಯಗಳ’ ಉತ್ಖನನದಲ್ಲಿ ಮತ್ತೊಂದು ಪುರಾತನ ಬಾವಿ ಪತ್ತೆಯಾಗಿದೆ. ಇದು ಯಾತ್ರಾರ್ಥಿಗಳ ದಾಹ ತಣಿಸುತ್ತಿದ್ದ ತೀರ್ಥಗಂಗೆ ಎಂಬ ಐತಿಹ್ಯವನ್ನು ಹೊಂದಿದೆ. ಇಲ್ಲಿನ ಶಹಜಾದಿ ಸರೈ ಪ್ರದೇಶದಲ್ಲಿ ಪುರಾತತ್ವ ಇಲಾಖೆ ನಡೆಸುತ್ತಿರುವ ಉತ್ಖನನದಲ್ಲಿ ದೀರ್ಘಕಾಲದಿಂದ ಮುಚ್ಚಿರುವ ಪುರಾತನವಾದ ಶುದ್ಧ ನೀರಿನ ಬಾವಿ ಸಿಕ್ಕಿದೆ. ಇದರ ಪುನರುಜ್ಜೀವನ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ಸಂಭಾಲ್​​ನಲ್ಲಿ ನಡೆಯುತ್ತಿರುವ ಉತ್ಖನನವು ಭೂಗರ್ಭದಲ್ಲಿ ಹುದುಗಿ ಹೋಗಿರುವ ಐತಿಹಾಸಿಕ ಧಾರ್ಮಿಕ ರಹಸ್ಯಗಳು ಒಂದೊಂದಾಗಿ ಹೊರಬರುತ್ತಿವೆ. ‘ಯಾತ್ರಾರ್ಥಿಗಳ ತೀರ್ಥಗಂಗೆ’ ಎಂದೇ ಕರೆಯಲ್ಪಡುವ ಮುಚ್ಚಲ್ಪಟ್ಟಿದ್ದ ಮತ್ತೊಂದು ಬಾವಿ ಸೋಮವಾರ ಪತ್ತೆಯಾಗಿದೆ. ಇತ್ತೀಚೆಗಷ್ಟೆ ಮೆಟ್ಟಿಲು ಬಾವಿ ಪತ್ತೆಯಾಗಿತ್ತು. ಇದಕ್ಕೆ ಸಮಾನಾಂತರವಾಗಿ ಕ್ಷೇಮನಾಥ ತೀರ್ಥ ಪ್ರದೇಶದಲ್ಲಿ ಮತ್ತೊಂದು ಬಾವಿ ಇರುವ ಬಗ್ಗೆ ಮಾಹಿತಿ ಬಂದಿತ್ತು. ಇಂದು ಗಂಗಾಮೂಲವು ಕಂಡುಬಂದಿದೆ ಎಂದು ಸಂಭಾಲ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಂದನಾ ಮಿಶ್ರಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

One of the 68 Sacred Fields:

ಕ್ಷೇಮನಾಥ ತೀರ್ಥರ ಪ್ರಧಾನ ಅರ್ಚಕ ಮಹಂತ್ ಬಾಲಯೋಗಿ ದೀನನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ಹೂತು ಹೋಗಿದ್ದ ಪುರಾತನ ಬಾವಿಯನ್ನು ಮತ್ತೆ ತೆರೆಯಲಾಗಿದೆ. ಎಂಟು ಅಡಿ ಆಳದಲ್ಲಿ ನೀರು ಕಾಣಿಸಿಕೊಂಡಿದೆ. ಪ್ರಾಚೀನ ಬಾವಿಯಲ್ಲಿ ಶುದ್ಧ ನೀರು ಇರುವುದು ಅಚ್ಚರಿ ಮತ್ತು ದೈವಾಂಶವೇ ಆಗಿದೆ” ಎಂದು ಹೇಳಿದ್ದಾರೆ. ಸೀತಾಪುರ ಜಿಲ್ಲೆಯಲ್ಲಿರುವ ನೀಮಾಸರ ತೀರ್ಥ ಎಂದೂ ಕರೆಯಲ್ಪಡುವ ಕ್ಷೇಮನಾಥ ತೀರ್ಥವು ದೇಶದ 68 ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಈ ಸ್ಥಳವು ಬಾಬಾ ಕ್ಷೇಮ ನಾಥ್ ಜೀ ಅವರ ಸಮಾಧಿಯ ನೆಲೆಯಾಗಿದೆ. ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಸುಕ್ಷೇತ್ರ ಎಂಬ ನಂಬಿಕೆಯಿದೆ ಎಂದು ಅವರು ತಿಳಿಸಿದ್ದಾರೆ.

Legend of the discovered well:

ಇತ್ತೀಚೆಗಷ್ಟೆ, ಸಂಭಾಲ್‌ನ ಚಂದೌಸಿಯ ಲಕ್ಷ್ಮಣ್ ಗಂಜ್ ಪ್ರದೇಶದಲ್ಲಿ ಸುಮಾರು 400 ಚದರ ಮೀಟರ್‌ಗಳಷ್ಟು ವ್ಯಾಪಿಸಿರುವ 150 ವರ್ಷ ಹಳೆಯದಾದ ಮೆಟ್ಟಿಲುಬಾವಿ ಉತ್ಖನನದಲ್ಲಿ ಪತ್ತೆಯಾಗಿತ್ತು. 46 ವರ್ಷಗಳಿಂದ ಮುಚ್ಚಲಾಗಿದ್ದ ಭಸ್ಮ ಶಂಕರ ದೇವಸ್ಥಾನವನ್ನು ಡಿಸೆಂಬರ್ 13ರಂದು ಪುನಃ ತೆರೆದು ಸಂಶೋಧನೆ ನಡೆಸಲಾಗುತ್ತಿದೆ. ಪತ್ತೆಯಾದ ಪುರಾತನ ಬಾವಿಯು ಐತಿಹ್ಯ ಹೊಂದಿದೆ. ಇದು ಇಲ್ಲಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ದಾಹ ತೀರಿಸುವ ತೀರ್ಥಗಂಗೆಯಾಗಿತ್ತು. ಇದೇ ನೀರನ್ನು ಇಲ್ಲಿನ ಜನರು ಬಳಸುತ್ತಿದ್ದರು. ಅದರ ಆಳದಿಂದಾಗಿಯೇ ಅದು ಇನ್ನೂ ಶುದ್ಧ ನೀರನ್ನು ಹೊಂದಿದೆ. 46 ವರ್ಷಗಳಿಂದ ಭೂಗತವಾಗಿದ್ದ ಬಾವಿಯು ಮತ್ತೆ ತೆರೆದಿದ್ದು, ಇಲ್ಲಿನ ಜನರನ್ನು ಅಚ್ಚರಿಗೀಡು ಮಾಡಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

HIGH COURT : ಚಾಮರಾಜಪೇಟೆ ಪಶು ವೈದ್ಯಕೀಯ ಆಸ್ಪತ್ರೆ ಜಾಗ ಮೊರಾರ್ಜಿ ಶಾಲೆಗೆ ಹಸ್ತಾಂತರ

Bangalore News: HIGH COURT ಪ್ರಕರಣ ಸಂಬಂಧ ವಕೀಲ ಗಿರೀಶ್ ಭಾರದ್ವಾಜ್​ ​ ಹಾಗೂ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ...

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...