spot_img
spot_img

ANJANADRI TEMPLE HUNDI : ಅರ್ಧ ಕೋಟಿ ದಾಟಿದ ಅಂಜನಾದ್ರಿ ಹನುಮಪ್ಪನ ಆದಾಯ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Gangavati (Koppal) News:

ANJANADRI TEMPLE HUNDI ಯಲ್ಲಿ ರೂ. 61.64 ಲಕ್ಷ ಮೊತ್ತದ ನಗದು ಸಂಗ್ರಹವಾಗಿದೆ. ಕಳೆದ ನವಂಬರ್​ನಲ್ಲಿ ನಡೆದ ಹುಂಡಿ ಎಣಿಕೆಯ ಸಂದರ್ಭದಲ್ಲಿ ಸಂಗ್ರಹವಾಗಿದ್ದ 36 ಲಕ್ಷ ರೂಪಾಯಿ ಇದುವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ ಎಲ್ಲಾ ದಾಖಲೆ ಮುರಿದು ಬರೋಬ್ಬರಿ ಅರ್ಧ ಕೋಟಿ ಅಂದರೆ ರೂ. 61.64 ಲಕ್ಷ ಮೊತ್ತದ ನಗದು ಸಂಗ್ರಹವಾಗಿದೆ.

ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ANJANADRI TEMPLE HUNDIಯಲ್ಲಿನ ಹುಂಡಿ ಎಣಿಕೆ ಕಾರ್ಯ ಸೋಮವಾರ ನಡೆದಿದ್ದು, ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ಹುಂಡಿ ಎಣಿಕೆಯ ಸಂದರ್ಭದಲ್ಲಿ ಅಮೆರಿಕದ ತಲಾ ಒಂದು ಡಾಲರ್ ಮೌಲ್ಯದ ಎರಡು ಡಾಲರ್, ಸೌದಿ ಅರೆಬಿಯಾದ ಐದು ರಿಯಾದ್, ನೇಪಾಳದ 20 ರೂಪಾಯಿ ಮುಖ ಬೆಲೆಯ ಎರಡು ಹಾಗೂ ಐದು ರೂಪಾಯಿ ಮುಖ ಬೆಲೆಯ ಐದು ನೋಟುಗಳು ಪತ್ತೆಯಾಗಿವೆ.

ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಹೆಚ್ ಪ್ರಕಾಶ್ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಆರಂಭವಾದ ANJANADRI TEMPLE HUNDI ಕಾರ್ಯ ಸಂಜೆ ಏಳು ಗಂಟೆಗೆ ಮುಗಿಯಿತು. ಸತತ ಎಂಟು ಗಂಟೆಗೂ ಹೆಚ್ಚು ಕಾಲ ಕಂದಾಯ ಇಲಾಖೆ, ದೇಗುಲ ಸಮಿತಿ ಸಿಬ್ಬಂದಿ ಸೇರಿ ಸುಮಾರು 40ಕ್ಕೂ ಹೆಚ್ಚು ಸಿಬ್ಬಂದಿ ಹಣ ಎಣಿಕೆ ಮಾಡಿದರು. ಹನುಮನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಹನುಮಮಾಲೆ ವಿಸರ್ಜನೆ, ಹೊಸ ವರ್ಷ, ಸಂಕ್ರಮಣದಂತಹ ವಿಶೇಷ ದಿನಗಳು ಸಾಲು ಸಾಲಾಗಿ ಬಂದ ಹಿನ್ನೆಲೆ ಹುಂಡಿ ಹಣದಲ್ಲಿ ಏರಿಕೆಯಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನು ಓದಿರಿ : JACKPOT FOR YOUNG BOWLER : ಗೌತಮ್ ಗಂಭೀರ್ ಶಿಷ್ಯನಿಗೆ ಬಿಗ್ ಜಾಕ್ಪಾಟ್

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ISRO 100TH MISSION:ಬೆಳ್ಳಂಬೆಳಗ್ಗೆ ನಭಕ್ಕೆ ಜಿಗಿಯಲು ಸಿದ್ಧವಾಗಿದೆ ರಾಕೆಟ್.

ISROS 100th Mission News: ಇಸ್ರೋದ 100ನೇ MISSION ಸಿದ್ಧವಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ನಭಕ್ಕೆ ಹಾರಲು ರಾಕೆಟ್​ ತಯಾರಿಗೊಂಡಿದೆ. ಇದರ ಲೈವ್​ ಸ್ಟ್ರೀಮಿಂಗ್​, ಸಮಯ ಸೇರಿದಂತೆ...

HOW MUCH SALT INTAKE DAILY:ಪ್ರತಿನಿತ್ಯ ಯಾವ ವಯಸ್ಸಿನವರು ಎಷ್ಟು ಉಪ್ಪು ಸೇವಿಸಬೇಕು ನಿಮಗೆ ಗೊತ್ತೇ? ತಜ್ಞರ ಸಲಹೆ ಹೀಗಿದೆ.

How Much Salt You Should Consume in That Day's News : ನಿಮ್ಮ ದೈನಂದಿನ ಆಹಾರದಲ್ಲಿ ನಿಯಮಿತವಾಗಿ SALTನ್ನು ಸೇವಿಸಿದರೆ ಆರೋಗ್ಯದ ಅಪಾಯಗಳನ್ನು...

HEALTH BENEFITS OF APPLE:ಅನಿಮಿಯಾ ಸಮಸ್ಯೆ ಹೋಗಲಾಡಿಸಲು ಇದೊಂದು ಹಣ್ಣು ಸೇವಿಸಲು ತಜ್ಞರ ಸಲಹೆ .

Health Benefits That Apple News: ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೆ, ರಕ್ತಹೀನತೆಯ (ಅನಿಮಿಯಾ) ಅಪಾಯ ಹೆಚ್ಚಾಗುತ್ತದೆ. ಈ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ, ಅನಿಮಿಯಾ ಸಮಸ್ಯೆ...

38TH NATIONAL GAMES:ಎಲ್ಲಾ ರಾಜ್ಯಗಳ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕರ್ನಾಟಕ!

38th National Games News: ಉತ್ತರಾಖಂಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಹೆಚ್ಚಿನ ಪದಕ ಗೆದ್ದು ನಂಬರ್​ ಒನ್​ ಸ್ಥಾನಕ್ಕೇರಿದೆ.ಕ್ರೀಡಾಕೂಟದ ಎರಡನೇ ದಿನವಾದ ಬುಧವಾರ ಸಂಜೆ...