ಶಿವಮೊಗ್ಗ: ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್‌ದಾರರ ವಿರುದ್ಧ ಆಹಾರ ಇಲಾಖೆ ಸಮರ ಸಾರಿದೆ. ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿದ್ದವರ ಪತ್ತೆ ಮಾಡಿ ಲಕ್ಷಾಂತರ ರೂ ದಂಡ ವಿಧಿಸಿದೆ. ಮೃತಪಟ್ಟ ವ್ಯಕ್ತಿ ಹೆಸರುಗಳು ಡಿಲೀಟ್ ಮಾಡಲಾಗುತ್ತಿದೆ. ಶಿವಮೊಗ್ಗದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದ 72 ಸರ್ಕಾರಿ ನೌಕರರಿಗೆ 4,12,890 ರೂ. ದಂಡ ವಿಧಿಸಲಾಗಿದೆ.
ಸರ್ಕಾರಿ ನೌಕರರು ಮತ್ತು ಅಧಿಕ ಆದಾಯದೊಂದಿಗೆ ತೆರಿಗೆ ಪಾವತಿ ಮಾಡುವವರು ಅಕ್ರಮವಾಗಿ ಪಡೆದುಕೊಂಡಿದ್ದ ಬಿಪಿಎಲ್ ಕಾರ್ಡ್‌ಗಳನ್ನು ಆಹಾರ, ನಾಗರಿಕ ಸರಬರಾಜು ಇಲಾಖೆ ಪರಿಶೀಲಿಸಿ, ಎಪಿಎಲ್ ಕಾರ್ಡ್‌ಗೆ ಬದಲಾಯಿಸಿದೆ. ಬಿಪಿಎಲ್ ಕಾರ್ಡ್ ಹೊಂದಿದ್ದ 72 ಸರ್ಕಾರಿ ನೌಕರರಿಗೆ 4,12,890 ರೂ. ದಂಡ ವಿಧಿಸಲಾಗಿದೆ.
ಆಹಾರ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ಅಕ್ರಮ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಬದಲಿಸುವ ಕಾರ್ಯಾಚರಣೆಯಲ್ಲಿನಿರತರಾಗಿದ್ದಾರೆ. ಜಿಲ್ಲೆಯಲ್ಲೂಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರು, ತೆರಿಗೆ ಪಾವತಿದಾರರ ಸಾವಿರಾರು ಕಾರ್ಡ್‌ಗಳನ್ನು ಜಿಲ್ಲಾಆಹಾರ ಇಲಾಖೆ ಎಪಿಎಲ್‌ಗೆ ಬದಲಿಸಿದೆ.
ಜಿಲ್ಲೆಯಲ್ಲಿ ಒಟ್ಟು 4.9 ಲಕ್ಷ ಪಡಿತರ ಚೀಟಿಗಳಿದ್ದು, ಇವುಗಳಲ್ಲಿಎಪಿಎಲ್ 1.2ಲಕ್ಷ, ಬಿಪಿಎಲ್ 3.52 ಲಕ್ಷ, ಅಂತ್ಯೋದಯ 36 ಸಾವಿರ ಕಾರ್ಡ್‌ಗಳಿವೆ. ಕಳೆದ ಏಪ್ರಿಲ್ 1ರಿಂದ ಅಕ್ಟೋಬರ್ 31 ರ ವರೆಗೆ 53,342 ಕಾರ್ಡ್‌ಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಇವುಗಳಲ್ಲಿ72 ಜನ ಸರ್ಕಾರಿ ನೌಕರರು, 2,970 ತೆರಿಗೆ ಪಾವತಿದಾರರು, 50,877 ಜನ 1.2 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವವರು ಇದ್ದಾರೆ. ಮತ್ತೆ ಈಗ 44 ಸಾವಿರ ಕಾರ್ಡ್‌ಗಳನ್ನು ಪರಿಶೀಲನೆ ಕೈಗೆತ್ತಿಕೊಂಡಿದ್ದು, 9940 ಕಾರ್ಡ್‌ಗಳ ಪರಿಶೀಲನೆ ಚಾಲ್ತಿಯಲ್ಲಿದೆ.
ಒಟ್ಟು 2388 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಜಿಲ್ಲಾಆಹಾರ ಇಲಾಖೆ ವರ್ಗಾವಣೆ ಮಾಡಿದೆ. ಮರಣ ಹೊಂದಿದ 70 ಬಿಪಿಎಲ್ ಕಾರ್ಡ್‌ದಾರರ ಹೆಸರನ್ನು ಪಟ್ಟಿಯಿಂದ ರದ್ದುಗೊಳಿಸಲಾಗಿದೆ. ಬ್ಯಾಂಕ್‌ನಿಂದ ಸಾಲ ಪಡೆಯಲು ಪಾನ್ ಕಾರ್ಡ್ ಸಲ್ಲಿಕೆ ಹಾಗೂ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ.
ಇದರಿಂದ ಬಿಪಿಎಲ್ ಕಾರ್ಡ್‌ದಾರರೂ ತೆರಿಗೆ ಪಾವತಿಸಿರುತ್ತಾರೆ. ಇದೇ ಕಾರಣಕ್ಕೆ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್‌ಗೆ ಬದಲಿಸುವುದು ಎಂತಹ ನ್ಯಾಯ. ಸಾಲ ಪಡೆಯಲು ತೆರಿಗೆ ಪಾವತಿ ಕಡ್ಡಾಯವಲ್ಲಎಂಬ ನಿಯಮ ಜಾರಿಗೆ ಬಂದರೆ ಸಣ್ಣ, ಪುಟ್ಟ ವ್ಯಾಪಾರ ನಡೆಸುವ ಬಿಪಿಎಲ್ ಕಾರ್ಡ್‌ದಾರರಿಗೆ ಅನುಕೂಲವಾಗುತ್ತದೆ.
ಬಿಪಿಎಲ್ ಕಾರ್ಡ್‌ಗಳಿಂದ ಸಿಗುವ ಸೌಲಭ್ಯದ ಆಸೆಗಾಗಿ ಅಕ್ರಮವಾಗಿ ಕಾರ್ಡ್ ಮಾಡಿಸಿಕೊಂಡಿದ್ದ 72 ಜನ ಸರ್ಕಾರಿ ನೌಕರರ ಕಾರ್ಡ್‌ಗಳು ಎಪಿಎಲ್‌ಗೆ ಬದಲಾಗಿವೆ. ಜತೆಗೆ ಕಳೆದ ಆರು ತಿಂಗಳಿಂದ ಪಡಿತರ ಪಡೆಯದ ಬಿಪಿಎಲ್ ಕಾರ್ಡ್‌ಗಳನ್ನು ಅಮಾನತು ಮಾಡಿದ್ದು, ಸೂಕ್ತ ದಾಖಲೆ ನೀಡಿ, ಇವುಗಳನ್ನು ಮತ್ತೆ ಸಕ್ರಿಯಗೊಳಿಸಿಕೊಳ್ಳಬಹುದಾಗಿದೆ.
ಅರ್ಹವಾದ ಯಾವುದೆ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿಲ್ಲ. ಅಕ್ರಮ, ಅನರ್ಹ, ಸರಕಾರಿ ನೌಕರರು ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ಗುರುತಿಸಿ ಎಪಿಎಲ್‌ಗೆ ಬದಲಿಸಲಾಗುತ್ತಿದೆ. ಈ ಕಾರ್ಯಾಚರಣೆ ನಿರಂತರವಾಗಿರಲಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಅವಿನ್ ಅವರು ತಿಳಿಸಿದ್ದಾರೆ.