spot_img
spot_img

ANNUAL AND LIFETIME TOLL PASSES: ಇದರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Annual and Lifetime Toll Passages News:

TOLL​ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆದಷ್ಟು ಬೇಗ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಈ ನಿಯಮದಿಂದ ವಾಹನ ಸವಾರರು TOLL​ ಬಗೆಗಿನ ಚಿಂತನೆ ಕಡಿಮೆಯಾಗಬಹುದಾಗಿದೆ.ಇನ್ನು ಹೊಸ ನಿಮಯದ ಪ್ರಕಾರ ಸರ್ಕಾರವು ಖಾಸಗಿ ವಾಹನಗಳಿಗೆ TOLL ಪಾಸ್‌ಗಳನ್ನು ಪರಿಚಯಿಸಬಹುದಾಗಿದೆ.

ಮಾಹಿತಿ ಪ್ರಕಾರ, ಈ TOLL ಪಾಸ್ ಬಂದ ನಂತರ ಜನರು ವರ್ಷಕ್ಕೊಮ್ಮೆ ಕೇವಲ 3,000 ರೂ. ಪಾವತಿಸುವ ಮೂಲಕ ಎಲ್ಲಿ ಬೇಕಾದರಲ್ಲಿ ಪ್ರಯಾಣಿಸಬಹುದಾಗಿದೆ. ಇದರ ಜೊತೆ ಸರ್ಕಾರ ಲೈಫ್​ಟೈಮ್​ ಪಾಸ್ ನೀಡುವ ಬಗ್ಗೆಯೂ ಆಲೋಚಿಸುತ್ತಿದೆ. TOLL​ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮ ತರಲು ಚಿಂತನೆ ನಡೆಸುತ್ತಿದೆ.

ಒಂದು ವೇಳೆ ಈ ಹೊಸ ನಿಯಮ ಜಾರಿಗೆ ಬಂದ್ರೆ, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ TOLL​ಗೇಟ್​ ಬಳಿ ವಾಹನಗಳ ಸರತಿ ಸಾಲುಗಳು ಅಥವಾ ದಟ್ಟಣೆ ಇರುವುದಿಲ್ಲ. ಅಷ್ಟೇ ಅಲ್ಲ, ಫಾಸ್ಟ್‌ಟ್ಯಾಗ್ ಕಾರ್ಡ್‌ನಿಂದ ಪದೇ ಪದೇ ಹಣವನ್ನು ಕಡಿತಗೊಳಿಸಲಾಗುವುದಿಲ್ಲ.

How will the new fasttag rule be?ಇದಲ್ಲದೇ ಸರ್ಕಾರವು ಕೇವಲ ಒಂದು ವರ್ಷಕ್ಕೆ ಮಾತ್ರವಲ್ಲದೆ, ಲೈಫ್​​ಟೈಮ್​ TOLL ಪಾಸ್ ಅನ್ನು ಪರಿಚಯಿಸುವ ಬಗ್ಗೆ ಯೋಚಿಸುತ್ತಿದೆ. 30 ಸಾವಿರ ರೂ.ಗಳನ್ನು ಒಮ್ಮೆ ಪಾವತಿಸಿದರೆ 15 ವರ್ಷಗಳವರೆಗೆ TOLL ಪಾಸ್ ಸೌಲಭ್ಯ ದೊರೆಯಲಿದೆ.

ಈ TOLL ಪಾಸ್ ನಿಯಮದ ಮೂಲಕ ಭಾರತ ಸರ್ಕಾರವು TOLL ಸಂಗ್ರಹವನ್ನು ಸುಲಭಗೊಳಿಸಲು ಬಯಸುತ್ತದೆ. ಈ ಹೊಸ ನಿಯಮ ಜಾರಿಗೆ ಬಂದ ಬಳಿಕ TOLL ಬೂತ್‌ಗಳಲ್ಲಿ ವಾಹನಗಳ ದೀರ್ಘ ಸರತಿ ಸಾಲುಗಳು ಸಹ ನಿಲ್ಲುತ್ತವೆ ಅಥವಾ ವಾಹನ ದಟ್ಟಣೆಯೂ ಕಂಡು ಬರುವುದಿಲ್ಲ.

ಒಂದೇ ಬಾರಿ ಹಣ ಪಾವತಿಸುವ ಮೂಲಕ ಇಡೀ ವರ್ಷಕ್ಕೆ TOLL ಪಾಸ್‌ಗಳನ್ನು ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ವರ್ಷಕ್ಕೊಮ್ಮೆ ಕೇವಲ 3 ಸಾವಿರ ರೂಪಾಯಿ ಠೇವಣಿ ಇಡುವುದರಿಂದ ಯಾವುದೇ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನವನ್ನು ತೆಗೆದುಕೊಂಡು ಹೋಗಲು TOLL ಪಾವತಿಸುವ ಅವಶ್ಯಕತೆಯಿಲ್ಲ. ಈ ಪ್ರಸ್ತಾವನೆಯು TOLL ಶುಲ್ಕವನ್ನು ಅಗ್ಗಗೊಳಿಸುವುದಲ್ಲದೆ, TOLL ಗೇಟ್‌ನಲ್ಲಿ ಸಂಚಾರವನ್ನು ಮತ್ತಷ್ಟು ಸುಲಭಗೊಳಿಸುತ್ತದೆ.

Nitin Gadkari said:ಕೇಂದ್ರ ಸರ್ಕಾರ ಈ ನಿಯಮಗಳನ್ನು ಜಾರಿಗೊಳಿಸಿದರೆ.. ಫಾಸ್ಟ್‌ಟ್ಯಾಗ್ ಖಾತೆದಾರರು ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್ ಯೋಜನೆಯ ಪ್ರಕಾರ ಅನ್​ಲಿಮಿಟೆಡ್​ ಎಂಟ್ರಿ ಪಡೆಯಬಹುದು, ಯಾವುದೇ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿ ಅಡೆತಡೆಯಿಲ್ಲದೆ ಚಾಲನೆ ಮಾಡಲು ಅನುವು ಮಾಡಿಕೊಡುತ್ತದೆ.

ಖಾಸಗಿ ವಾಹನಗಳಿಂದ TOLL ಸಂಗ್ರಹಿಸಲು ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್‌ಗಳ ಸೌಲಭ್ಯವನ್ನು ಸರ್ಕಾರ ಒದಗಿಸಬಹುದು. ಒಟ್ಟು TOLL ಸಂಗ್ರಹದ ಶೇಕಡಾ 26 ರಷ್ಟು ಖಾಸಗಿ ವಾಹನಗಳಿಂದಲೇ ಬರುತ್ತದೆ. ಆದರೆ TOLL ಸಂಗ್ರಹದ ಶೇ. 74 ರಷ್ಟು ವಾಣಿಜ್ಯ ವಾಹನಗಳಿಂದಲೇ ಆಗುತ್ತದೆ ಎಂದು ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಕಳೆದ ತಿಂಗಳು ಹೇಳಿದ್ದರು.

 

ಇದನ್ನು ಓದಿರಿ :YASHASVI JAISWAL:ಪಾದಾರ್ಪಣೆ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ಕುಸಿದ ಜೈಸ್ವಾಲ್.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

IND VS PAK:ಚಾಂಪಿಯನ್ಸ್ ಟ್ರೋಫಿಯಲ್ಲಿಂದು ಹೈವೋಲ್ಟೇಜ್ ಪಂದ್ಯ

Ind Was Pak News: ಈಗಾಗಲೇ ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ IND ಎರಡನೇ ಪಂದ್ಯದಲ್ಲೂ ಗೆಲುವು ಓಟ ಮುಂದುವರೆಸುವ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ,...

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...