WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Hyderabad News:
IPHONE 16ರ ಸೀರಿಸ್ನಂತೆ 6.1 ಇಂಚ್ನ ಒಎಲ್ಇಡಿ ಡಿಸ್ಪ್ಲೇ ಹಾಗೂ ಎ18 ಚಿಪ್ಸೆಟ್ ಇದರಲ್ಲಿದೆ. ಆ್ಯಪಲ್ ಇಂಟಲಿಜೆನ್ಸಿ ಸಪೋರ್ಟ್ ಹೊಂದಿರುವ ಈ ಐಫೋನ್ 16ಇ ಸಿಂಗಲ್ 48ಎಂಪಿ ರೇರ್ ಕ್ಯಾಮರಾ ಹಾಗೂ ಪ್ರೋಗ್ರಾಮೇಬಲ್ ಆಕ್ಷನ್ ಬಟನ್ ಹೊಂದಿದೆ.ಆ್ಯಪಲ್ ಕಂಪನಿಯು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ IPHONE 16ಇ ಮೊಬೈಲ್ ಅನ್ನು ಪರಿಚಯಿಸಿದೆ. ಪ್ರವೇಶ ಹಂತದ ಮಾದರಿಯ ಆ್ಯಪಲ್ ಈ ಮೊಬೈಲ್ IPHONE 16 ಸರಣಿಯದ್ದಾಗಿದ್ದು, ಬೇಸ್ ಮಾಡೆಲ್ 59,999ಕ್ಕೆ ಲಭ್ಯವಾಗಲಿದೆ.
Pricing and Availability Information:ಈ ಮೊಬೈಲ್ ಕೊಳ್ಳಲು ಗ್ರಾಹಕರು ಫೆ. 21ರಿಂದ ಪ್ರಿ ಆರ್ಡರ್ ಮಾಡಬೇಕಿದ್ದು, ಫೆ. 28ರಿಂದ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ. ಇನ್ನು ಇದು ಕಪ್ಪು ಮತ್ತು ಬಿಳಿ ಎರಡೇ ಬಣ್ಣಗಳಲ್ಲಿ ಲಭ್ಯವಾಗಲಿದೆ.
IPHONE 16ಇ 128ಜಿಬಿ, 256ಜಿಬಿ ಮತ್ತು 512ಜಿಬಿ ಮೂರು ಸ್ಟೋರೇಜ್ನಲ್ಲಿ ಲಭ್ಯವಿದೆ. 12ಜಿಬಿ ಸ್ಟೋರೆಜ್ ಮಾಡೆಲ್ ₹59,999 ಆದರೆ, 256 ಜಿಬಿ ಮಾಡೆಲ್ ₹68,999 ಹಾಗೂ 512ಜಿಬಿ 89,000 ರೂಪಾಯಿ ಇದೆ.
Mobile Features:ಐಫೋನ್ 16ಇ ಸಿಂಗಲ್ 48ಎಂಪಿ ರೇರ್ ಕ್ಯಾಮರಾದ ಜೊತೆಗೆ ಹಿಂಬದಿಯಲ್ಲಿ ಒಐಎಸ್ ಹಿಂದಿದ್ದು, ಮುಂದೆ 12ಎಂಪಿ ಟ್ರೂಡೆಪ್ತ್ ಕ್ಯಾಮರಾ ಇದರಲ್ಲಿದೆ. ಇದಕ್ಕಿಂತ ಹೆಚ್ಚಾಗಿ ಇದು ಫೇಸ್ಐಡಿ ಹಾಗೂ ಟಚ್ ಐಡಿ ಫೀಚರ್ ಹೊಂದಿದೆ. ಇನ್ನು ಬ್ಯಾಟರಿ ವಿಶೇಷತೆ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆಯಾಗಿಲ್ಲ. ಆದರೆ ಅತ್ಯುತ್ತಮ ಬ್ಯಾಟರಿ ಲೈಫ್ ಹೊಂದಿದೆ ಎಂದು ಕಂಪನಿ ತಿಳಿಸಿದೆ.ಈ ಹೊಸ IPHONE 16ಇ, 6.1 ಇಂಚು ಒಎಲ್ಇಡಿ ಡಿಸ್ಪ್ಲೇ ಜೊತೆಗೆ 60 ಹರ್ಟ್ ರಿಫ್ರೆಶ್ ರೇಟ್ ಹಾಗೂ 800ನಿಟ್ಸ್ ಬ್ರೈಟ್ನೆಸ್ ಹೊಂದಿದೆ.
ಸೆರಮಿಕ್ ಶೀಲ್ಡ್ ಮಟಿರಿಯಲ್ ಬಳಕೆಯನ್ನು ಹೊಂದಿದ್ದು, IPHONE 16 ಸರಣಿಯ 3ಎನ್ಎಂ ಎ18 ಚಿಪ್ಸೆಟ್ ಹೊಂದಿದೆ. IPHONE 15 ಪ್ರೊ ಹಾಗೂ IPHONE 16 ಸರಣಿಯ ಆ್ಯಪಲ್ ಇಂಟಲಿಜೆನ್ಸ್ ವೈಶಿಷ್ಟ್ಯವನ್ನು ಹೊಂದಿದೆ.ಯುಎಸ್ಬಿ ಟೈಪ್- ಸಿ ಪೋರ್ಟ್ ಚಾರ್ಜಿಂಗ್, 18ಡಬ್ಲ್ಯೂ ವೈರ್ಡ್ ಮತ್ತು 7.5 ವೈರ್ಲೆಸ್ ಚಾರ್ಜಿಂಗ್ ಇದೆ. 5ಜಿ, 4ಜಿ ಎಲ್ಟಿಇ, ವೈಫೈ6. ಬ್ಲೂಟೂತ್ 5.3, ಎನ್ಎಫ್ಸಿ ಹಾಗೂ ಜಿಪಿಎಸ್ ಸಂಪರ್ಕವನ್ನು ಹೊಂದಿದೆ. ಹೆಚ್ಚುವರಿಯಾಗಿ ಆಯ್ಕೆ ಮಾಡಿದ ಪ್ರದೇಶದ ಸ್ಯಾಟಲೈಟ್ ಮೂಲಕ ಎಸ್ಒಎಸ್ ತುರ್ತು ಬೆಂಬಲವನ್ನು ಬಳಕೆದಾರರು ಆಪತ್ತಿನ ಕಾಲದಲ್ಲಿ ಪಡೆಯಬಹುದು.
ಇದನ್ನು ಓದಿರಿ :Fake Call Centre Busted In Dehradun, 13 Held