Apple iPhone 16e Sale:
ಆ್ಯಪಲ್ ಇತ್ತೀಚೆಗೆ ತನ್ನ ಅಗ್ಗದ ಮಾದರಿ APPLE IPHONE 16E ಬಿಡುಗಡೆ ಮಾಡಿತು. ಈಗಾಗಲೇ ಈ ಫೋನಿನ ಮುಂಗಡ ಬುಕಿಂಗ್ ಪ್ರಾರಂಭವಾಗಿದೆ.
ಇಂದಿನಿಂದ APPLE IPHONE 16E ಸ್ಮಾರ್ಟ್ಫೋನ್ ಹವಾ ಶುರುವಾಗಲಿದೆ. ಇಂದಿನಿಂದ ಇದರ ಮಾರಾಟ ಆರಂಭವಾಗಿದೆ. ಆಪಲ್ ಇತ್ತೀಚೆಗೆ ಫೆಬ್ರವರಿ 19 ರಂದು ತನ್ನ ಅಗ್ಗದ ಮಾದರಿ ಐಫೋನ್ 16e ಅನ್ನು ಬಿಡುಗಡೆ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಈಗಾಗಲೇ ಈ ಸ್ಮಾರ್ಟ್ಫೋನ್ ಮುಂಗಡ ಬುಕಿಂಗ್ ಪ್ರಾರಂಭವಾಗಿದ್ದು, ಈ ಫೋನ್‌ನ ಮಾರಾಟ ಇಂದಿನಿಂದ ಪ್ರಾರಂಭವಾಗಲಿದೆ. ಕಂಪನಿಯು ಈ ಸ್ಮಾರ್ಟ್ಫೋನ್ ಬೆಲೆಯನ್ನು ಭಾರತದಲ್ಲಿ 59,900 ರೂ.ಗಳಿಗೆ ನಿಗದಿಪಡಿಸಿದೆ. ಆದರೂ ಮಾರಾಟಕ್ಕೂ ಮುನ್ನ, ಆಪಲ್‌ನ ಅಧಿಕೃತ ವಿತರಕ ರೆಡಿಂಗ್ಟನ್ ಅದರ ಮೇಲೆ ಆಕರ್ಷಕ ಕೊಡುಗೆಗಳನ್ನು ಘೋಷಿಸಿದ್ದು, ಅದರ ಅಡಿಯಲ್ಲಿ ಗ್ರಾಹಕರು ಈ ಫೋನ್ ಮೇಲೆ 10 ಸಾವಿರ ರೂ.ಗಳವರೆಗೆ ರಿಯಾಯಿತಿ ಪಡೆಯಬಹುದು.
ರೆಡಿಂಗ್ಟನ್ APPLE IPHONE 16E ಗಾಗಿ ಹಲವಾರು ಬ್ಯಾಂಕ್ ಕೊಡುಗೆಗಳನ್ನು ಘೋಷಿಸಿದೆ. ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಹೊಂದಿರುವವರು 4 ಸಾವಿರ ರೂ.ಗಳ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಲಿದ್ದು, ಫೋನ್‌ನ ಬೆಲೆ 55,900 ರೂ.ಗಳಿಗೆ ಇಳಿಯಲಿದೆ. ಇದಲ್ಲದೆ ಹಳೆಯ ಫೋನ್ ವಿನಿಮಯ ಮಾಡಿಕೊಳ್ಳುವಾಗ 6 ಸಾವಿರ ರೂ.ಗಳವರೆಗಿನ ವಿನಿಮಯ ಬೋನಸ್ ಸಹ ಲಭ್ಯವಿರುತ್ತದೆ.
ಇದರರ್ಥ ನೀವು ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಂಡು ಬ್ಯಾಂಕ್ ಆಫರ್ ಅನ್ನು ಪಡೆದರೆ iPhone 16e ನ ಅಂತಿಮ ಬೆಲೆ 49,900 ರೂ.ಗಳಿಗೆ ಇಳಿಯಬಹುದು. ಆದರೂ ವಿನಿಮಯ ಮೌಲ್ಯವು ನಿಮ್ಮ ಹಳೆಯ ಫೋನಿನ ಸ್ಥಿತಿ ಮತ್ತು ಮಾದರಿಯನ್ನು ಅವಲಂಬಿಸಿರುತ್ತದೆ. ನೀವು Cashify ನಂತಹ ಮೂರನೇ ವ್ಯಕ್ತಿಯ ವೇದಿಕೆಗಳಲ್ಲಿ ವಿನಿಮಯ ಮೌಲ್ಯಗಳನ್ನು ಹೋಲಿಸಬಹುದು.
iPhone 16e ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ಕಂಪನಿಯು 128GB ರೂಪಾಂತರದ ಫೋನ್‌ಗೆ 59,900 ರೂ., 256GB ರೂಪಾಂತರಕ್ಕೆ 69,900 ರೂ. ಮತ್ತು 512GB ರೂಪಾಂತರಕ್ಕೆ 89,900 ರೂ. ಬೆಲೆ ನಿಗದಿಪಡಿಸಿದೆ.
iPhone 16e ನಲ್ಲಿ 6.1-ಇಂಚಿನ OLED ಸ್ಕ್ರೀನ್ ನೀಡಲಾಗಿದೆ. ಇದಲ್ಲದೆ ಇದು ಐಫೋನ್‌ನ ಸಿಗ್ನೇಚರ್ ಫೇಸ್ ಐಡಿ ನಾಚ್‌ನೊಂದಿಗೆ ಬರುತ್ತದೆ. ಇದು ಮ್ಯೂಟ್ ಟಾಗಲ್ ಬದಲಿಗೆ ಹೊಸ ಆಕ್ಷನ್ ಬಟನ್ ಅನ್ನು ಸಹ ಒಳಗೊಂಡಿದೆ. ಕಂಪನಿಯು ಫೋನ್‌ನಲ್ಲಿ ಲೈಟ್ನಿಂಗ್ ಪೋರ್ಟ್ ಅನ್ನು ತೆಗೆದುಹಾಕಿ USB-C ಪೋರ್ಟ್ ಅನ್ನು ಒದಗಿಸಿದೆ. ಈ ಫೋನ್ A18 ಚಿಪ್ ಪ್ರೊಸೆಸರ್ ಹೊಂದಿದ್ದು, ಇದು ಜೆನ್‌ಮೋಜಿ, ಬರವಣಿಗೆ ಟೂಲ್ಸ್ ಮತ್ತು ಚಾಟ್‌ಜಿಪಿಟಿ ಇಂಟಿಗ್ರೇಶನ್ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.
ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, ಈ ಸಾಧನವು 48MP ಫ್ಯೂಷನ್ ಕ್ಯಾಮೆರಾವನ್ನು ಹೊಂದಿದ್ದು, ಇದು 2x ಟೆಲಿಫೋಟೋ (ಡಿಜಿಟಲ್) ಜೂಮ್ ಅನ್ನು ಸಹ ಬೆಂಬಲಿಸುತ್ತದೆ. ಅದೇ ಸಮಯದಲ್ಲಿ ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 12MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಭವಿಷ್ಯದಲ್ಲಿ ಐಫೋನ್ 16e ವಿಸುವಲ್ ಇಂಟೆಲಿಜೆನ್ಸ್ ಅಪ್ಡೇಟ್ ಪಡೆಯಲಿದೆ ಎಂದು ಆಪಲ್ ದೃಢಪಡಿಸಿದೆ. ಫೆಬ್ರವರಿ 28 ರಂದು ಅಂದ್ರೆ ಇಂದು ಬೆಳಗ್ಗೆ 8 ಗಂಟೆಯಿಂದ ಎಲ್ಲಾ ಅಂಗಡಿಗಳಲ್ಲಿ ಐಫೋನ್ 16e ಮಾರಾಟ ಶುರುವಾಗಿದೆ. ಈ ಬಗ್ಗೆ ರೆಡಿಂಗ್ಟನ್ ದೃಢಪಡಿಸಿದೆ.