spot_img
spot_img

APPLE UNVEILS POWERFUL MAC STUDIO – ಅತ್ಯಂತ ಪವರ್ಫುಲ್ ಮ್ಯಾಕ್ ಸ್ಟುಡಿಯೋ ಪರಿಚಯಿಸಿದ ಆಪಲ್!: ಅಬ್ಬಾ!! ಇದರ ಬೆಲೆ, ಫೀಚರ್ಸ್ ಹೇಗಿವೆ ಗೊತ್ತಾ?

spot_img
spot_img

Share post:

Apple Unveils Most Powerful Mac Studio: 

ಟೆಕ್ ದೈತ್ಯ ಆಪಲ್ ಪ್ರಬಲ MAC STUDIO ವನ್ನು ಘೋಷಿಸಿದೆ. ಇದು ಅವರು ರಚಿಸಿದ ಅತ್ಯಂತ ಪವರ್​ಫುಲ್​ ಮ್ಯಾಕ್ ಎಂದು ಕಂಪನಿ ಹೇಳುತ್ತದೆ. ಇದನ್ನು ಹೈ-ಸ್ಪೀಡ್​ ಪ್ರೊಸೆಸಿಂಗ್, ಸಿಮ್​ಲೆಸ್​ ಮಲ್ಟಿ ಟಾಸ್ಕಿಂಗ್​ಗೆ ಅಗತ್ಯವಿರುವ ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಬಳಕೆದಾರರಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಹೊಸ ಮ್ಯಾಕ್ ಸ್ಟುಡಿಯೋ ವಿಶೇಷವಾಗಿ ವಿಡಿಯೋ ಎಡಿಟರ್ಸ್​, ಎಂಜಿನಿಯರ್ಸ್​, ಡೆವಲಪರ್ಸ್​, 3D ಆನಿಮೇಟರ್ಸ್​ ಮತ್ತು ಇತರ ಕ್ರಿಯೆಟಿವ್​ ಪ್ರೊಫೆಷನಲ್ಸ್​​ಗೆ ಉಪಯುಕ್ತವಾಗಿರುತ್ತದೆ.

Major updates:

ಕಂಪನಿಯು ಇದನ್ನು ಶಕ್ತಿಯುತ ‘M4 ಮ್ಯಾಕ್ಸ್’ ಮತ್ತು ‘M3 ಅಲ್ಟ್ರಾ’ ಚಿಪ್‌ಗಳೊಂದಿಗೆ ಅಪ್​ಡೇಟ್​ ಮಾಡಿದೆ. ಈ ಅಪ್​ಡೇಟ್ಡ್​ ಮ್ಯಾಕ್ ಸ್ಟುಡಿಯೋ ಫಾಸ್ಟ್​ ಕನೆಕ್ಟಿವಿಟಿ, 512GB ವರೆಗೆ ಯೂನಿಫೈಡ್​ ಮೆಮೊರಿ, 16TB ವರೆಗೆ SSD ಸ್ಟೋರೇಜ್​ಗಾಗಿ Thunderbolt 5 ಸಪೋರ್ಟ್​ ಹೊಂದಿದೆ. ಇದು 600 ಶತಕೋಟಿ ಪ್ಯಾರಾಮೀಟರ್‌ಗಳೊಂದಿಗೆ LLM (Large Language Models​) ಅನ್ನು ಸಹ ರನ್ ಮಾಡಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ ‘M4 ಮ್ಯಾಕ್ಸ್’ ಮತ್ತು ‘M3 ಅಲ್ಟ್ರಾ’ ಚಿಪ್‌ಸೆಟ್‌ಗಳನ್ನು ಹೊಂದಿರುವ ಈ ಮ್ಯಾಕ್ ಸ್ಟುಡಿಯೋ ಸಾಧನಗಳು Apple ಇಂಟೆಲಿಜೆನ್ಸ್ ಅನ್ನು ಸಪೋರ್ಟ್​ ಮಾಡುತ್ತವೆ.

M4 Max Processor:

‘M4 Max’ ಚಿಪ್‌ಸೆಟ್‌ನೊಂದಿಗೆ ಈ MAC STUDIO 128GB ವರೆಗೆ ಯೂನಿಫೈಡ್​ ಮೆಮೊರಿ ಮತ್ತು 8TB ವರೆಗಿನ SSD ಸ್ಟೋರೇಜ್​ ಅನ್ನು ಹೊಂದಿದೆ. ಮುಂಭಾಗದಲ್ಲಿ ಸಾಧನವು ಎರಡು USB-ಟೈಪ್ C ಪೋರ್ಟ್‌ಗಳನ್ನು ಹೊಂದಿದೆ. ಒಂದು SDXC ಕಾರ್ಡ್ ಸ್ಲಾಟ್ ಸಹ ಇದೆ. ಹಿಂಭಾಗದಲ್ಲಿ ನಾಲ್ಕು Thunderbolt 5 ಪೋರ್ಟ್‌ಗಳು, ಎರಡು USB-ಟೈಪ್ A ಪೋರ್ಟ್‌ಗಳು, HDMI ಪೋರ್ಟ್, 10GB ಎತರ್ನೆಟ್ ಪೋರ್ಟ್ ಮತ್ತು ಹೆಡ್‌ಫೋನ್ ಜ್ಯಾಕ್ ಇವೆ.

ಈ M4 ಮ್ಯಾಕ್ಸ್‌ನೊಂದಿಗೆ Mac Studio ಏಕಕಾಲದಲ್ಲಿ 5 ಡಿಸ್‌ಪ್ಲೇಗಳನ್ನು ಸಪೋರ್ಟ್​ ಮಾಡುತ್ತದೆ. ಇದು 16-ಕೋರ್ CPU, 40-ಕೋರ್ GPU ವರೆಗೆ ಹೊಂದಿದೆ. ಇದು ‘M1 ಮ್ಯಾಕ್ಸ್’ ಚಿಪ್‌ಸೆಟ್‌ಗಿಂತ 3.5x ಹೆಚ್ಚಿನ ಕಾರ್ಯಕ್ಷಮತೆ ನೀಡುತ್ತದೆ ಮತ್ತು ಇಂಟೆಲ್ ಆಧಾರಿತ 27-ಇಂಚಿನ iMac ಗಿಂತ 6.1x ವೇಗವಾಗಿದೆ ಎಂದು ಕಂಪನಿ ಹೇಳುತ್ತದೆ.

2025 Apple Mac Studio Price:

ಭಾರತೀಯ ಮಾರುಕಟ್ಟೆಯಲ್ಲಿ ಈ ಹೊಸ MAC STUDIO ‘M4 Max’ ಚಿಪ್‌ಸೆಟ್ 36GB ಯೂನಿಫೈಡ್​ ಮೆಮೊರಿ ಮತ್ತು 512GB SSD ಸ್ಟೋರೇಜ್ ಮೂಲ ರೂಪಾಂತರಕ್ಕಾಗಿ ರೂ.2,14,900 ರಿಂದ ಪ್ರಾರಂಭವಾಗುತ್ತದೆ. ‘M3 ಅಲ್ಟ್ರಾ’ ಚಿಪ್ ಹೊಂದಿರುವ ಹೈ-ಸ್ಪೆಕ್ ಮ್ಯಾಕ್ ಸ್ಟುಡಿಯೋ ಬೆಲೆ ರೂ. 4,29,900 ರಿಂದ ಶುರುವಾಗುತ್ತದೆ. ಇದು 96GB ಯೂನಿಫೈಡ್​ ಮೆಮೊರಿ ಮತ್ತು 1TB SSD ಸ್ಟೋರೇಜ್​ನೊಂದಿಗೆ ಬರುತ್ತದೆ.

ಇದರ ಪ್ರಿ-ಆರ್ಡರ್ ಈಗಾಗಲೇ ಮಾರುಕಟ್ಟೆಯಲ್ಲಿ ಪ್ರಾರಂಭವಾಗಿದೆ. ಆಸಕ್ತ ಗ್ರಾಹಕರು ಈ ಹೊಸ MAC STUDIO ಅನ್ನು ಮುಂಗಡವಾಗಿ ಆರ್ಡರ್ ಮಾಡಬಹುದು. ಆದರೆ ಅದರ ಡೆಲಿವರಿಗಳು ಮಾರ್ಚ್ 12 ರಿಂದ ಪ್ರಾರಂಭವಾಗುತ್ತವೆ.

ಇದನ್ನು ಓದಿ : ISRO’s POEM-4 Completes 1,000 Orbits

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...