ಐ ಟಿ ಬಿ ಪಿ ೩೪೫ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ.
ನವೆಂಬರ್ ೧೪ ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳು ಎಂಬಿಬಿಎಸ್ ಪೂರ್ಣಗೊಳಿಸಿರಬೇಕು.
ಸಾಮಾನ್ಯ ಇ ಡಬ್ಲ್ಯೂ ಎಸ ಮತ್ತು ಒಬಿಸಿ ಅಭ್ಯರ್ಥಿಗಳು ೪೦೦ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಎಸ್ ಸಿ, ಎಸ್ ಟಿ ಮತ್ತು ಮಹಿಳೆಯರಿಗೆ ಶುಲ್ಕ ವಿನಾಯಿತಿ ಇದೆ.
ಅರ್ಜಿ ಸಲ್ಲಿಸಲು, ಸೂಪರ್ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ (ಸೆಕೆಂಡ್-ಇನ್-ಕಮಾಂಡ್) ಹುದ್ದೆಗೆ, ಅರ್ಜಿಯ ಅಂತಿಮ ದಿನಾಂಕದಂದು ವಯಸ್ಸಿನ ಮಿತಿಯು 50 ವರ್ಷಗಳನ್ನು ಮೀರಬಾರದು.
ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್‌ಗಳಿಗೆ (ಡೆಪ್ಯುಟಿ ಕಮಾಂಡೆಂಟ್) ವಯೋಮಿತಿಯು ಅರ್ಜಿಯ ಅಂತಿಮ ದಿನಾಂಕದಂದು 40 ವರ್ಷಗಳನ್ನು ಮೀರಬಾರದು.
ಕೊನೆಯದಾಗಿ, ವೈದ್ಯಕೀಯ ಅಧಿಕಾರಿಗಳ (ಸಹಾಯಕ ಕಮಾಂಡೆಂಟ್) ವಯಸ್ಸಿನ ಮಿತಿಯು ಅರ್ಜಿಯ ಗಡುವಿನಂತೆ 30 ವರ್ಷಗಳಿಗಿಂತ ಹೆಚ್ಚಿರಬಾರದು.
ಕಾಯ್ದಿರಿಸಿದ ವರ್ಗಗಳಿಗೆ ವಿಶೇಷ ವಯೋಮಿತಿ ಸಡಿಲಿಕೆ ನೀಡಲಾಗುವುದು. ಎಲ್ಲಾ ಖಾಲಿ ಹುದ್ದೆಗಳಿಗೆ ಅರ್ಹತಾ ಮಾನದಂಡಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಹ್ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಅದರ ನಂತರ ಅವರನ್ನು ಸಂದರ್ಶನ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ : recruitment.itbpolice.nic.in ಮೂಲಕ ಅರ್ಜಿ ಸಲ್ಲಿಸಬಹುದು.