ಬೆಂಗಳೂರು ಜಿಲ್ಲಾ ಪಂಚಾಯತ್‌ನಲ್ಲಿ ಸಮಾಲೋಚಕರ ಹುದ್ದೆಯಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸಮಾಲೋಚಕರ ಹುದ್ದೆಯ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ ಈ ಹುದ್ದೆಯನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ.
ಹುದ್ದೆ: ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ- ಸಮಾಲೋಚಕರು – 1
ವಿದ್ಯಾರ್ಹತೆ: ಬಿಇ ಪರಿಸರ ಅಥವಾ ಸಿವಿಲ್ ಇಂಜಿನಿಯರಿಂಗ್
ಅನುಭವ: ನೀರು ಮತ್ತು ನೈರ್ಮಲ್ಯ ಅಥವಾ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಹುದ್ದೆ ನಿರ್ವಹಿಸಿದ ಅನುಭವ.
ಮಾಸಿಕ: ಮಾಸಿಕ ₹25,000
ವಯೋಮಿತಿ: ಗರಿಷ್ಠ 45 ವರ್ಷ
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅಧಿಸೂಚನೆಯೊಂದಿಗೆ ನೀಡಲಾಗಿರುವ ನಿಗದಿತ ಅರ್ಜಿ ಜೊತೆಗೆ ಈ ಹುದ್ದೆಗೆ ತಾವು ಯಾಕೆ ಸೂಕ್ತ ಎಂಬ ಕುರಿತು ಬರೆಯಬೇಕು. ಜೊತೆಗೆ, ಅಗತ್ಯ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲಾತಿಯೊಂದಿಗೆ ಅಂಚೆ, ಕೋರಿಯರ್ ಮೂಲಕ ಅರ್ಜಿ ಸಲ್ಲಿಸಬೇಕು.