ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮುಂಭಾಗ ಲೈನ್ ಮ್ಯಾನ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಬೇಕೆಂದು ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದಾರೆ.
ಕೆಪಿಟಿಸಿಎಲ್‌ನಲ್ಲಿ 2975 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ. 10 ನೇ ತರಗತಿಯ ಫಲಿತಾಂಶದ ಮೇಲೆ ನೇಮಕಾತಿಗನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಕೂಡಾ ಉದ್ಯೋಗ ದೊರೆಯುತ್ತಿಲ್ಲ.
ಕೋವಿಡ್ ಸಂದರ್ಭ 95% ಅಂಕ ಪಡೆದವರು 5 ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ದಯವಿಟ್ಟು ಈ ನೇಮಕಾತಿಯನ್ನು ಪರೀಕ್ಷೆ ಮೂಲಕವೇ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಡವರ ಹುದ್ದೆಯಾದ ಲೈನ್ ಮ್ಯಾನ್ ಹುದ್ದೆಯು ಸ್ಪರ್ಧಾತ್ಮಕ ಪರೀಕ್ಷೆ ಬರೆಸಿಯೇ ನೇಮಕಾತಿ ಮಾಡಬೇಕು ಎಂದು ಮನವಿ ಸಲ್ಲಿಸಿದರು ಪ್ರತಿಕ್ರಿಯಿಸುತ್ತಿಲ್ಲ.
ಅಧಿಕಾರಿಗಳು ನಮ್ಮ ಮನವಿಯನ್ನು ಸ್ವೀಕರಿಸದೆ ಈ ರೀತಿ ನಮ್ಮನ್ನು ಕಚೇರಿಯಿಂದ ಹೊರಗಡೆ ನಿಲ್ಲಿಸಿ, ಈ ರೀತಿ ವರ್ತಿಸಿದರೆ ಇಡೀ ಕರ್ನಾಟಕಕ್ಕೆ ಧಕ್ಕೆ ಉಂಟಾಗುತ್ತಿದೆ.
ನೀವು ಮಾಡುವ ಕೆಲಸಗಳನ್ನು ವಿದ್ಯಾರ್ಥಿಗಳ ಪರವಾಗಿಯೇ ಮಾಡಬೇಕು. ಏಕೆಂದರೆ ಇದು ನಿಮ್ಮ ಮನೆಯ ಕೆಲಸ ಅಲ್ಲ, ಸರ್ಕಾರದ ಕೆಲಸ ಎಂದು ಕಿಡಿಕಾರಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನೋಡಿ ಮಾಡಿದರೆ ಸರಿಯಲ್ಲ. ಏಕೆಂದರೆ ಕೋವಿಡ್ ಸಂದರ್ಭ ಮೂರು ಮೂರು ಬಾರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಅವರು 99% ಪಡೆದಿದ್ದರೂ ಅವರಿಗೆ ಏನೂ ಗೊತ್ತಿಲ್ಲ. ಅದೇ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಫೇಲ್ ಆಗಿದ್ದಾರೆ. ಅವರಿಗೆ 50% ತೆಗೆದುಕೊಳ್ಳಲು ಆಗುತ್ತಿಲ್ಲ. ಅವರನ್ನು ತೆಗೆದುಕೊಂಡು ನೇರ ನೇಮಕಾತಿ ಮಾಡಿದರೆ ಸರಿಯಲ್ಲ. ಒಂದೇ ತಿಂಗಳಲ್ಲಿ ಕಾಂಪಿಟೇಟಿವ್ ಎಕ್ಸಾಮ್ ಮೂಲಕ ಒಂದೇ ತಿಂಗಳಿನಲ್ಲಿ ನೇಮಕಾತಿ ಮಾಡಿಕೊಳ್ಳಿ.
ಈ ಮನವಿಗೆ ಸ್ಪಂದಿಸದೇ ಹೋದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now