Amaravati (Andhra Pradesh) News:
ತಿರುಪತಿಯಿಂದ ಕಾಣಿಪಾಕಂ, ಕೊಯಮತ್ತೂರು, ಮೈಸೂರು, ರಾಮೇಶ್ವರಂ, ಮಧುರೈ, ಊಟಿ, ಕನ್ಯಾಕುಮಾರಿ, ಅರುಣಾಚಲಂ ಮತ್ತು ಗೋಲ್ಡನ್ ಟೆಂಪಲ್‌ನಂತಹ ಪ್ರಸಿದ್ಧ ಸ್ಥಳಗಳು ಮತ್ತು ದೇವಾಲಯಗಳಿಗೆ ಈ ಪ್ಯಾಕೇಜ್ ಮೂಲಕ ಭೇಟಿ ನೀಡಬಹುದು.ಪ್ರವಾಸಿಗರಿಗಾಗಿ ಆಂಧ್ರ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (APTDC) ತಿರುಪತಿಯಿಂದ ನಾಲ್ಕು ಹೊಸ ಬಸ್ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ.
ಈ ಹಿಂದೆ, ತಿರುಮಲ ಶ್ರೀವಾರಿಯ ದರ್ಶನವನ್ನು BUS ಪ್ಯಾಕೇಜ್‌ಗಳ ಮೂಲಕ ಮಾಡಲಾಗುತ್ತಿತ್ತು. ಆದರೆ, ಕಾರಣಾಂತರಗಳಿಂದ ಟಿಕೆಟ್‌ಗಳ ರದ್ದತಿಯಿಂದ ಪ್ರವಾಸೋದ್ಯಮ ಇಲಾಖೆ ಆರ್ಥಿಕ ನಷ್ಟ ಅನುಭವಿಸುತ್ತಿತ್ತು. ಇದನ್ನು ಸರಿದೂಗಿಸಲು ಇದೇ BUSಗಳನ್ನು ಇತರ ಮಾರ್ಗಗಳಲ್ಲಿ ಬಳಸಲು ಮುಂದಾಗಿದೆ.
Tirupati to Coimbatore, Chennai via Ooty:ಪ್ರತಿ ಬುಧವಾರ ತಿರುಪತಿಯಿಂದ ಕೊಯಮತ್ತೂರು ಹಾಗೂ ಊಟಿ ಮೂಲಕ ಚೆನ್ನೈಗೆ ಬಸ್ ಸಂಚರಿಸಲಿದ್ದು, 5 ಹಗಲು, 4 ರಾತ್ರಿ ಸೇರಿ ಐದು ದಿನಗಳ ಪ್ರವಾಸ ಇದಾಗಿದೆ.
ವಯಸ್ಕರು 4,210 ರೂಪಾಯಿ ಮತ್ತು ಮಕ್ಕಳು 3370 ರೂಪಾಯಿ ಟಿಕೆಟ್ ದರ ಭರಿಸಿದರೆ ಸಾಕು ಐದು ದಿನಗಳ ಪ್ರವಾಸ ಮಾಡಬಹುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.ಭಕ್ತರು ಮತ್ತು ಪ್ರವಾಸಿಗರ ದಟ್ಟಣೆ ಗಮನದಲ್ಲಿಟ್ಟುಕೊಂಡು ನಾಲ್ಕು ಹೊಸ ವಿಶೇಷ BUS ಪ್ಯಾಕೇಜ್‌ಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ ತಿರುಪತಿಯಿಂದ ಕೊಯಮತ್ತೂರು, ಊಟಿ ಮೂಲಕ ಚೆನ್ನೈ ತೆರಳುವ ಪ್ಯಾಕೇಜ್ ಕೂಡ ಒಂದು.
Tirupati to Mysore, Bangalore via Ooty:ಮತ್ತೊಂದು ಪ್ಯಾಕೇಜ್‌ನ ಭಾಗವಾಗಿ, ಪ್ರತಿ ಬುಧವಾರ ತಿರುಪತಿಯಿಂದ ಮೈಸೂರು, ಊಟಿ ಮೂಲಕ ಬೆಂಗಳೂರಿಗೆ BUS ಸಂಚರಿಸಲಿದ್ದು, ಇದೂ ಕೂಡ ಐದು ದಿನದ ಪ್ರವಾಸವಾಗಿದೆ. ಇದರ ಟಿಕೆಟ್ ಬೆಲೆ ವಯಸ್ಕರಿಗೆ 3020 ರೂಪಾಯಿ ಮತ್ತು ಮಕ್ಕಳಿಗೆ 2420 ರೂಪಾಯಿ ಇದೆ.
Chennai via Tirupati-Rameswaram-Kanyakumari-Madurai-Srirangam-Tirupati:ಪ್ರತಿ ಗುರುವಾರ ತಿರುಪತಿಯಿಂದ-ರಾಮೇಶ್ವರಂ-ಕನ್ಯಾಕುಮಾರಿ-ಮಧುರೈ-ಶ್ರೀರಂಗಂ-ತಿರುಪತಿ ಮೂಲಕ ಚೆನ್ನೈಗೆ ಪ್ರವಾಸ ಮಾಡಬಹುದಾದ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಿದೆ.
4 ಹಗಲು ಮತ್ತು 3 ರಾತ್ರಿ ಸೇರಿದಂತೆ ನಾಲ್ಕು ದಿನಗಳ ಪ್ರವಾಸ ಇದಾಗಿದ್ದು, ಇದರ ಟಿಕೆಟ್ ಬೆಲೆಯನ್ನು ವಯಸ್ಕರಿಗೆ 5,600 ರೂಪಾಯಿ ಮತ್ತು ಮಕ್ಕಳಿಗೆ 4,480 ರೂಪಾಯಿ ಎಂದು ನಿಗದಿಪಡಿಸಲಾಗಿದೆ.
Fourth Package:ಒಂದು ದಿನದ ಪ್ಯಾಕೇಜ್ ಇದಾಗಿರಲಿದೆ. ಇದು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಿ ರಾತ್ರಿ 9 ಗಂಟೆಗೆ ಕೊನೆಗೊಳ್ಳುತ್ತದೆ. ವಯಸ್ಕರಿಗೆ ಟಿಕೆಟ್ ಬೆಲೆ ಕೇವಲ 1,200 ರೂಪಾಯಿ ಇದ್ದರೆ, ಚಿಕ್ಕ ಮಕ್ಕಳಿಗೆ 960 ರೂಪಾಯಿ ನಿಗದಿಪಡಿಸಲಾಗಿದೆ.ನಾಲ್ಕನೇ ಪ್ಯಾಕೇಜ್ ತಿರುಪತಿಯಿಂದ ಆರಂಭವಾಗಿ ಕಾಣಿಪಾಕಂ, ಅರುಣಾಚಲಂ ಮತ್ತು ಸುವರ್ಣ ದೇವಾಲಯಕ್ಕೆ ಭೇಟಿ ನೀಡಿದ ನಂತರ ತಿರುಪತಿಗೆ ಹಿಂತಿರುಗಬಹುದು.
Food and Accommodation:ಟಿಕೆಟ್ ದರಗಳು ಮತ್ತು ಇತರ ವಿವರಗಳಿಗಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು 9848007024, 9848850099, ಮತ್ತು 9848973985 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪ್ರಕಟಣೆ ಮೂಲಕ ತಿಳಿಸಿದೆ.
ಈ ಪ್ಯಾಕೇಜ್‌ಗಳಲ್ಲಿ ಉಪಹಾರ, ಮಧ್ಯಾಹ್ನ ಊಟ ಮತ್ತು ವಸತಿ ಕೂಡ ಸೇರಿವೆ. ಇದಲ್ಲದೆ, ಮಲ್ಟಿ-ಆಕ್ಸಲ್ ಎಸಿ ವೋಲ್ವೋ BUSಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ BUSನಲ್ಲಿ 40 ಸೀಟುಗಳಿರಲಿವೆ. ಹೆಚ್ಚಿನ ವಿವರಗಳು ಮತ್ತು ಬುಕಿಂಗ್‌ಗಳಿಗಾಗಿ, ನೀವು APTDC ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಇದನ್ನು ಓದಿರಿ :Udhampur-Srinagar-Baramulla Rail Link To Boost Tourism In Region