ShimogaNews:
ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಕೆ ತನ್ನ ಬೇಡಿಕೆಯನ್ನೇನೋ ಹೆಚ್ಚಿಸಿಕೊಂಡಿದೆ. ಆದರೆ, ಈ ಬೆಳೆಗೆ ಸಾಕಷ್ಟು ಸವಾಲುಗಳಿವೆ. ಭತ್ತದ ಕಣಜವಾಗಿದ್ದ ಶಿವಮೊಗ್ಗ ಜಿಲ್ಲೆ ಇಂದು ARECANUT CROPSಯುವ ಪ್ರಮುಖ ಜಿಲ್ಲೆಯಾಗಿದೆ.
ARECANUT CROP, ಕಟಾವು, ಸಂಸ್ಕರಣೆ, ಮಾರಾಟ ಸೇರಿ ಇಂದು ಒಂದು ಉದ್ಯಮವಾಗಿದೆ. ARECANUT CROPS ಯುವವರಿಗಿಂತ ಇದರ ಸಂಸ್ಕರಣೆ ಮಾಡಿ, ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಾಂಪ್ರದಾಯಿಕ ಬೆಳೆಯಾಗಿದ್ದ ಅಡಕೆ ಇಂದು ವಾಣಿಜ್ಯ ಬೆಳೆಯಾಗಿ ಬೆಳೆದು ನಿಂತಿದೆ. ಅಡಕೆಗೆ ಹಿಂದೂ ಸಂಪ್ರದಾಯದಲ್ಲೂ ಬಹಳ ಪ್ರಾಮುಖ್ಯತೆ ಇದೆ. ಯಾವುದೇ ಶುಭಕಾರ್ಯ ನಡೆಸಿದರೂ ಸಹ ಅಡಕೆ ಬೇಕೇ ಬೇಕು. ಅದರಲ್ಲೂ ಮಲೆನಾಡಿನಲ್ಲಿ ಅಡಕೆ ಸಾಂಪ್ರದಾಯಿಕ ಬೆಳೆಯಾಗಿದೆ.
Nuts spread from the hills to the plains:
ಅಡಕೆಯನ್ನು ಈಗ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅಡಕೆಯಿಂದ ಉತ್ತಮ ಲಾಭ ಪಡೆಯಲು ಇತರೆ ಬೆಳೆಗಳಂತೆ ಹೆಚ್ಚಿನ ಶ್ರಮ ಸಹ ಬೇಕಾಗಿಲ್ಲ. ವರ್ಷದಲ್ಲಿ ಒಂದೆರಡು ಬಾರಿ ಅಡಕೆಗೆ ಮಣ್ಣು, ಗೊಬ್ಬರ ನೀಡಿ, ಪ್ರತಿ 15 ದಿನಕ್ಕೊಮ್ಮೆ ನೀರು ಹಾಯಿಸಿದರೆ ಸಾಕು ಅಡಕೆ ಉತ್ತಮವಾಗಿ ಬೆಳೆಯುತ್ತದೆ.
ಅಡಕೆ ಖೇಣಿ ನೀಡಿದರೆ ಅಡಕೆಯ ಕತ್ತರಿಸುವ ಕೆಲಸವೂ ಇರುವುದಿಲ್ಲ. ಇದರಿಂದ ಶ್ರಮ ಕಡಿಮೆ, ಲಾಭ ಹೆಚ್ಚಿರುವ ಅಡಕೆಯ ಬೆಳೆಯ ಹಿಂದೆಯೇ ಈಗ ಎಲ್ಲರೂ ಬಿದ್ದಿದ್ದಾರೆ. ಅಡಕೆಯನ್ನು 6-8 ವರ್ಷ ಚೆನ್ನಾಗಿ ಬೆಳೆಸಿದರೆ ಅದು ಮುಂದಿನ 20 ವರ್ಷ ಅಡಕೆ ಬೆಳೆಗಾರರನ್ನು ಬೆಳೆಸುತ್ತದೆ.
ಮಲೆನಾಡಿನಲ್ಲಿ ಹಿಂದಿನಿಂದಲೂ ಸಹ ಸಾಂಪ್ರದಾಯಿಕ ಬೆಳೆಯಾಗಿದ್ದ ಅಡಕೆ ಈಗ ಮಲೆನಾಡು ದಾಟಿ ಅರೆ ಮಲೆನಾಡು, ಬಯಲು ಸೀಮೆಯ ಕಡೆ ದಾಪುಗಾಲಿಟ್ಟಿದೆ. ಬಯಲು ಸೀಮೆ ಎಂದು ಗುರುತಿಸಿಕೊಳ್ಳುವ ಚಿತ್ರದುರ್ಗ, ತುಮಕೂರು, ಗದಗ, ಹಾವೇರಿ ಭಾಗದಲ್ಲೂ ಅಡಕೆಯನ್ನು ಬೆಳೆಯಲಾರಂಭಿಸಿದ್ದಾರೆ. ಇದರಿಂದ ಅಡಕೆ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ.ಅಡಕೆಯನ್ನು ದಕ್ಷಿಣ ಭಾರತದಲ್ಲಿ ಬೆಳೆಯುತ್ತಿದ್ದರೂ ಸಹ ಇದಕ್ಕೆ ಬೇಡಿಕೆ ಹೆಚ್ಚಾಗಿ ಉತ್ತರ ಭಾರತದಲ್ಲಿದೆ.
ಇದರಿಂದ ಇಲ್ಲಿ ಬೆಳೆದ ಅಡಕೆಯನ್ನು ಉತ್ತರ ಭಾರತದ ವ್ಯಾಪಾರಿಗಳು ಬಂದು ಕೊಂಡೊಯ್ಯುತ್ತಾರೆ. ಕರ್ನಾಟಕದಿಂದ ಸೀಸನ್ನಲ್ಲಿ ನೂರಾರು ಲೋಡ್ ಅಡಕೆಯನ್ನು ದೆಹಲಿ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಅನೇಕ ರಾಜ್ಯದವರು ತೆಗೆದುಕೊಂಡು ಹೋಗುತ್ತಾರೆ. ಉತ್ತರ ಭಾರತದಲ್ಲಿ ಇವುಗಳನ್ನು ಕ್ರಷಿಂಗ್ ಮಾಡಿ ವ್ಯಾಪಾರಿ ವಸ್ತುಗಳನ್ನಾಗಿ ಮಾರಾಟ ಮಾಡುತ್ತಾರೆ.
Types of Nuts:
1) ಸರಕು ಅಡಕೆ
2) ಬೆಟ್ಟೆ ಅಡಕೆ
3) ರಾಶಿ ಅಡಕೆ
4) ಗೂರಬಲು ಅಡಕೆ
Yesterday (Saturday) rate of groundnut:
ಗೊರಬಲು ಅಡಕೆಗೆ ಕ್ವಿಂಟಾಲ್ಗೆ ₹18,090ನಿಂದ 30,000ದ ತನಕ ಇದೆ. ಬೆಟ್ಟೆ ಅಡಕೆಗೆ ₹44,100ರಿಂದ 56,600 ಇದೆ. ರಾಶಿ ಅಡಕೆಗೆ ₹30,389 ರಿಂದ 51,299 ದರ ಇದೆ. ಸರಕು ಅಡಕೆಗೆ ₹40,099ನಿಂದ ₹87,740 ತನಕ ಇದೆ.
Groundnut Price Fluctuation:
ಅಡಕೆ ದರ ಸ್ಟಾಕ್ ಮಾರ್ಕೆಟ್ನಂತೆ ಏರಿಳಿತವಾಗುತ್ತಿರುತ್ತದೆ. ಪ್ರತಿದಿನ ಅಡಕೆ ದರ ಹೆಚ್ಚೂ ಕಡಿಮೆ ಆಗುತ್ತಿರುತ್ತದೆ. ಸ್ಟಾಕ್ ಮಾರ್ಕೆಟ್ನಲ್ಲಿ ಷೇರುಗಳಿಗೆ ಹೇಗೆ ಬೆಲೆ ಏರಿಕೆ ಆಗುತ್ತದೆಯೋ ಅದೇ ರೀತಿ ಅಡಕೆ ಮಾರುಕಟ್ಟೆಯಲ್ಲಿ ಉತ್ತಮ ಅಡಕೆಗೆ ಉತ್ತಮ ಬೆಲೆ ಸಿಗುತ್ತದೆ. ಅಡಕೆ ಖರೀದಿಸುವವರು ಪ್ರತಿನಿತ್ಯ ಅಡಕೆ ಮಾರುಕಟ್ಟೆಗೆ ಬಂದು ತಮಗೆ ಬೇಕಾದ ಉತ್ತಮ ಗುಣಮಟ್ಟದ ಅಡಕೆ ಖರೀದಿಸುತ್ತಾರೆ. ಇದರಿಂದ ದರ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗ, ದಾವಣಗೆರೆ, ಶಿರಸಿ, ಚಿಕ್ಕಮಗಳೂರು ಈ ಭಾಗದ ಅಡಕೆಗೆ ಉತ್ತಮವಾದ ಬೇಡಿಕೆ ಇರುತ್ತದೆ. ಇಲ್ಲಿ ಪ್ರತಿನಿತ್ಯ ಮಾರುಕಟ್ಟೆ ನಡೆಯುತ್ತಿರುತ್ತದೆ.
Return of substandard peanuts, embarrassment for traders:
ಇತ್ತೀಚಿಗೆ ಶಿವಮೊಗ್ಗ ಮ್ಯಾಮ್ಕೋಸ್ನಿಂದ ಹಾಗೂ ಅಡಕೆ ಮಂಡಿಗಳಿಂದ ಉತ್ತರ ಭಾರತಕ್ಕೆ ಹೋಗಿದ್ದ ಅಡಕೆಯ ಲೋಡ್‌ಗಳು ವಾಪಸ್ ಬಂದಿವೆ. ಈ ರೀತಿ ಅಡಕೆ ವಾಪಸ್ ಬಂದಿರುವುದು ಇದೇ ಮೊದಲೇನಲ್ಲ. ಅಡಕೆಯು ವಾಪಸ್ ಬಂದಿರುವುದು ಇಲ್ಲಿಂದ ಅಡಕೆಯನ್ನು ಕಳುಹಿಸಿರುವವರಿಗೆ ಒಂದು ರೀತಿ ಮುಜುಗರವ ಉಂಟುಮಾಡಿದೆ. ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ ನಿಯಮಿತ (ಮ್ಯಾಮ್ಕೋಸ್) ಸೇರಿದಂತೆ ಇತರೆ ವ್ಯಾಪಾರಸ್ಥರು ಕಳುಹಿಸಿದ ಅಡಕೆಯು ವಾಪಸ್ ಬಂದಿದೆ.
ಮ್ಯಾಮ್ಕೋಸ್ ARECANUT CROPS ರಿಂದ ಖರೀದಿ, ಇಲ್ಲವೆ ಅಡಕೆ ಅಡಮಾನ ಇಟ್ಟು ಕೊಂಡು ಸಾಲವನ್ನು ನೀಡುತ್ತದೆ. ಅಡಕೆ ಮಾರಾಟಗಾರರು ನಂಬುವ ಮ್ಯಾಮ್ಕೋಸ್ಗೆ ಅಡಕೆ ವಾಪಸ್ ಬಂದ ಕಾರಣ ARECANUT CROPಗಾರರಿಗೆ ಒಂದು ರೀತಿ ಆಘಾತವನ್ನುಂಟು ಮಾಡಿದೆ. ಮಲೆನಾಡಿನ ಅಡಕೆಗೆ ಉತ್ತರ ಭಾರತದಲ್ಲಿ ಬಹುಬೇಡಿಕೆ ಇದೆ. ಇದರಿಂದ ಅಲ್ಲಿನ ವ್ಯಾಪಾರಿಗಳು ಬಂದು ಇಲ್ಲಿನ ಅಡಕೆಯನ್ನು ಪರಿಶೀಲಿಸಿ ತೆಗೆದುಕೊಂಡು ಹೋಗುತ್ತಾರೆ.
ದೆಹಲಿಯಿಂದ ಶಿವಮೊಗ್ಗಕ್ಕೆ ನೂರಾರು ಲೋಡ್ ಅಡಕೆ ವಾಪಸ್ ಬಂದಿದೆ. ಕಾರಣ ಕಳಪೆ ಗುಣಮಟ್ಟದ ಅಡಕೆ. ಕಳಪೆ ಗುಣಮಟ್ಟದ ಅಡಕೆಯನ್ನು ಅಲ್ಲಿನ ವ್ಯಾಪಾರಿಗಳು ಗುರುತಿಸಿ ವಾಪಸ್ ಕಳುಹಿಸಿಕೊಟ್ಟಿದ್ದಾರೆ.
Mamkos wrote for quality nuts:
ಉತ್ತರ ಭಾರತಕ್ಕೆ ವ್ಯಾಪಾರವಾಗಿ ಹೋಗಿದ್ದ ಅಡಕೆ ವಾಪಸ್ ಬಂದ ಕಾರಣಕ್ಕೆ ಮ್ಯಾಮ್ಕೋಸ್ ತನ್ನ ಸದಸ್ಯರಿಗೆ ಪತ್ರವನ್ನು ಬರೆದಿದೆ. ಪತ್ರದಲ್ಲಿ, ಪಾನ್ ಮಸಾಲ ಮತ್ತು ಗುಟ್ಕಾ ಕಂಪನಿಗಳು ಗುಣ ಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಗುಣಮಟ್ಟವಿಲ್ಲದ ಅಡಕೆಗಳ ಖರೀದಿಯನ್ನು ನಿಲ್ಲಿಸಿರುತ್ತದೆ.
ಈ ಕಾರಣದಿಂದಾಗಿ ಮಾಮ್ಕೋಸ್ ಸಂಸ್ಥೆಯು ಸಹ ಉತ್ತಮ ಗುಣಮಟ್ಟದ ಅಡಕೆ ಖರೀದಿ ಬಗೆಗೆ ಗಮನ ಹರಿಸುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ಮಾನ್ಯ ಸದಸ್ಯರು ಅಡಕೆಯ ಗುಟಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಅಡಕೆಗೆ ಹೆಚ್ಚಿನ ಧಾರಣೆ ಪಡೆಯಬಹುದಾಗಿದೆ.
ಗೊರಬಲು ಪಾಲಿಷ್ಗೆ ಹಾಕಿದ ಅಡಕೆಯನ್ನು ಮತ್ತು ಗುಣಮಟ್ಟವಿಲ್ಲದ ಎರಡನೇ ದರ್ಜೆ ಅಡಕೆಯನ್ನು ರಾಶಿಗೆ ಸೇರಿಸದೆ, ಅದನ್ನು ಪ್ರತ್ಯೇಕವಾಗಿಯೇ ಸಂಘಕ್ಕೆ ತಂದು ಬಿಲ್ ಮಾಡಿಸುವುದರಿಂದ ರೈತರು ತಮ್ಮ ಅಡಕೆಗೆ ಉತ್ತಮ ದರ ಪಡೆಯಬಹುದಾಗಿದೆ. ಪ್ರಸ್ತುತ ಅನಿವಾರ್ಯ ಪರಿಸ್ಥಿತಿಯನ್ನು ಅರಿತುಕೊಂಡು ಮಾನ್ಯ ಸದಸ್ಯರು ಸಂಘಕ್ಕೆ ಉತ್ತಮ ಗುಣಮಟ್ಟದ ಅಡಕೆಯನ್ನು ಹಾಕಿ ವ್ಯವಹರಿಸಬೇಕೆಂದು ವಿನಂತಿಸಿಕೊಂಡಿದೆ.ಇದರಿಂದ ಮ್ಯಾಮ್ಕೋಸ್ ಉತ್ತಮ ಅಡಕೆಯನ್ನು ನಿರೀಕ್ಷಿಸಿದೆ.
ಹೊಸ ಅಡಕೆ ಖೇಣಿ ಮಾಡುವವರು, ದುರಾಸೆಗೆ ಬಿದ್ದು ಗುಣಮಟ್ಟವಿಲ್ಲದ ಅಡಕೆಯನ್ನು ಮಾರುಕಟ್ಟೆಗೆ ಬಿಟ್ಟು ಧಾರಣೆ ಕುಸಿಯುವಂತೆ ಆಗಿದೆ. ಕಳೆದ ತಿಂಗಳು ಕ್ವಿಂಟಾಲ್ಗೆ 54 ರಿಂದ 56 ಸಾವಿರದಷ್ಟಿದ್ದ ಅಡಕೆ ಧಾರಣೆ ಈಗ 45 ರಿಂದ 46 ಸಾವಿರಕ್ಕೆ ಕುಸಿತವಾಗಿದೆ. ಇದು ಅಡಕೆ ಬೆಳೆಗಾರರಿಗೆ ಆಂತಕವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.
What is leaf spot disease?:
ಅಡಕೆ ಮರದ ಎಲೆಗಳ ಮೇಲೆ ಚುಕ್ಕಿ ಚುಕ್ಕಿ ತರ ಆಗಿ, ಮರ ಒಣಗಿ ಹೋಗಿ ಮರದ ಎಲೆ ಎಲ್ಲಾ ಬೀಳುತ್ತದೆ. ಜೊತೆಗೆ ಮರ ಸಹ ಬಿದ್ದು ಹೋಗುತ್ತದೆ. ಈ ರೋಗ ಕಳೆದ ನಾಲ್ಕೈದು ವರ್ಷಗಳಿಂದ ಕಂಡು ಬಂದಿದೆ. ಇನ್ನು ಕೊಳೆ ರೋಗ ಸಹ ಅಡಕೆ ಬೆಳೆಗಾರರನ್ನು ಕಾಡುತ್ತಿದೆ. ಕೊಳೆ ರೋಗವು ಮಳೆ ಹೆಚ್ಚಾದ್ರೆ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದ ಇಳುವರಿ ಕುಂಠಿತವಾಗುತ್ತದೆ.
ಅಡಕೆ ಕಾಯಿ ಉದುರಲು ಪ್ರಾರಂಭಿಸುತ್ತದೆ. ಇದರಿಂದ ಗೂನೆ ಕಟ್ಟದೆ ಅಡಕೆ ಬೆಳೆಗಾರ ನಷ್ಟವನ್ನುಭವಿಸುವಂತಾಗಿದೆ. ಅಡಕೆ ಬೆಳೆಗಾರರಿಗೆ ಅಡಕೆ ಖೇಣಿ ಮಾಡುವವರೆ ಶತ್ರುಗಳಾಗಿದ್ದಾರೆ. ಕಳಪೆ ಗುಣಮಟ್ಟದ ಅಡಕೆಯನ್ನು ಮಾರುಕಟ್ಟೆಗೆ ಕಳುಹಿಸುವುದರಿಂದ ಅಡಕೆಯ ದರ ಕುಸಿತವಾಗಿ ಅಡಕೆಯ ಮಾನ ಹೋಗುತ್ತಿದೆ.
What are the challenges of groundnut cultivation?:
ಅಡಕೆ ಬೆಳೆಗೆ ಇಂದು ಸವಾಲಾಗಿರುವುದು ಅಡಕೆ ಬೆಳೆಯ ಕ್ಷೇತ್ರ ವಿಸ್ತರಣೆ, ರೋಗಗಳು, ಕಳಪೆ ಗುಣಮಟ್ಟದ ಅಡಕೆ ಮತ್ತು ಮಾರುಕಟ್ಟೆಯ ದರ. ಅಡಕೆ ಬೆಳೆಗಾರರಿಗೆ ಇಂದು ದೊಡ್ಡ ಸವಾಲಾಗಿರುವುದು ಅಂದ್ರೆ ಅದು ಅಡಕೆ ಬೆಳೆಯ ಕ್ಷೇತ್ರ ವಿಸ್ತರಣೆ. ಮಲೆನಾಡಿನಲ್ಲಿದ್ದ ಅಡಕೆ ಬೆಳೆ ಈಗ ರಾಜ್ಯದ ತುಂಬೆಲ್ಲಾ ಹರಡಿಕೊಂಡಿದೆ. ಇದರಿಂದ ಅಡಕೆ ಬೆಳೆಗಾರರ ಆಂತಕಕ್ಕೆ ಕಾರಣವಾಗಿದೆ. ಅಡಕೆ ಬೆಳೆ ಕ್ಷೇತ್ರ ಹೆಚ್ಚಾದರೆ, ದರ ಕುಸಿಯುವ ಭಯ ಆವರಿಸಲಿದೆ. ಹಾಲಿ ಅಡಕೆಗೆ ಈಗ ಎಲೆ ಚುಕ್ಕಿ ರೋಗ ಹಾಗೂ ಕೊಳೆ ರೋಗವಿದೆ.
Groundnut Cultivation by Machinery:
ಅಡಕೆ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಇದರಿಂದ ಅಡಕೆ ಕೃಷಿಗೆ ಯಂತ್ರೋಪಕರಣಗಳ ಅಗತ್ಯ ಬೇಕಾಗಿದೆ. ಅಡಕೆ ಕೃಷಿಗೆ ಪ್ರಾರಂಭದಿಂದಲೇ ಟ್ರಾಕ್ಟರ್ ಬೇಕು. ಗುಂಡಿ ತೆಗೆದು ಅಡಕೆ ಸಸಿ ನೆಟ್ಟ ಮೇಲೆ ಅದಕ್ಕೆ ಗೊಬ್ಬರ, ಮಣ್ಣು ಮಾಡಲು ಯಂತ್ರೋಪಕರಣ ಬೇಕೇ ಬೇಕು. ಇನ್ನೂ ಅಡಕೆ ಕಟಾವಿಗೆ ಬಂದಾಗ ಟ್ರಾಕ್ಟರ್ನಲ್ಲಿ ಅಡಕೆ ಗೊನೆ ಕಟ್ ಮಾಡಿಕೊಂಡು ಹೋಗಲು ಬೇಕಾಗುತ್ತದೆ. ಅಡಕೆ ಸುಲಿಯಲು ಸುಲಿಯುವಯಂತ್ರಗಳು ಬಂದಿವೆ. ಅಡಕೆ ಕೃಷಿ ಸಂಪೂರ್ಣ ಯಂತ್ರಗಳ ಮೇಲೆಯೇ ನಿಂತಿದೆ.
Maintain nut quality without adulteration:
ಈ ಕುರಿತು ಮಾತನಾಡಿದ ಅಡಕೆ ಬೆಳೆಗಾರರಾದ ಮಹೇಶ್, “ಏರುಗತಿಯಲ್ಲಿ ಇದ್ದ ಅಡಕೆ ಧಾರಣೆ ಕಳೆದ ತಿಂಗಳಿನಿಂದ ಕುಸಿತವಾಗುತ್ತಿದೆ. ಇದಕ್ಕೆ ಮುಖ್ಯಕಾರಣ ಅಡಕೆಯ ಗುಣಮಟ್ಟ. ವಿಶೇಷವಾಗಿ ಕಳೆದ ಒಂದೂವರೆ ತಿಂಗಳಿನಿಂದ ಉತ್ತರ ಭಾರತದ ಕಡೆಯಿಂದ ಮುಖ್ಯವಾಗಿ ಡಿ.ಎಸ್ ಕಾನ್ಪೂರದವರು ಶಿವಮೊಗ್ಗಕ್ಕೆ ಬಂದು ಅಡಕೆ ವ್ಯಾಪಾರಿಗಳಲ್ಲಿನ ಅಡಕೆ ಮಾನದಂಡವನ್ನು ಪರಿಶೀಲಿಸಿದರು. ಅವರಿಗೆ ಬೇಕಾದ ಅಡಕೆಯ ಗುಣಮಟ್ಟವನ್ನು ಮುಂದಿಟ್ಟುಕೊಂಡು ಅಡಕೆಯನ್ನು ಖರೀದಿ ಮಾಡಿದ್ದರು. ಈ ವೇಳೆ ಒಳ್ಳೆಯ ಧಾರಣೆ ಎಲ್ಲಾ ಅಡಕೆ ಬೆಳೆಗಾರರಿಗೆ ಸಿಕ್ಕಿತ್ತು” ಎಂದರು.
“ಪ್ರಸ್ತುತ ಕಲಬೆರಕೆ ಇದೆ ಎಂದ್ರೆ ತಪ್ಪಾಗಲಾರದು. ಅಡಕೆಯಲ್ಲಿ ಸೆಕೆಂಡ್ ಕ್ವಾಲಿಟಿ ಅಡಕೆಯನ್ನು ಸೇರಿಸಿ ವ್ಯಾಪಾರ ಪ್ರಾರಂಭವಾದಾಗಿನಿಂದ ಅಡಕೆ ಧಾರಣೆ ಕುಸಿತಕ್ಕೆ ಕಾರಣವಾಗಿದೆ. ಅಡಕೆ ಬೆಳೆಗಾರರು ಉತ್ತಮವಾದ ಅಡಕೆಯನ್ನು, ಕಲಬೆರಕೆ ಮಾಡದೆ ಇರುವ ಅಡಕೆಯನ್ನು ತನ್ನಿ ಎಂದು ಮನವಿ ಮಾಡಿದ್ದರು.
ಇಂದು ಅಡಕೆ ಬೆಳೆ ವಿಸ್ತರಣೆ ಆಗುತ್ತಿತ್ತು. ಅದರಂತೆ ಆವಕವು ಸಹ ಜಾಸ್ತಿ ಅಗುತ್ತಿರುವುದರಿಂದ ಗುಣಮಟ್ಟದ ಅಡಕೆಯನ್ನು ಕೇಳುತ್ತಿದ್ದಾರೆ. ನಾವು ಸರಿಯಾದ, ಉತ್ತಮ ಧಾರಣೆಯನ್ನು ಪಡೆದು ಕೊಡುವಂತಹ ಕೆಲಸ ಮಾಡಿದ್ರೆ ಅಡಕೆ ಸ್ಥಿರತೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಅಡಕೆಯನ್ನು ತಯಾರು ಮಾಡಬೇಕಿದೆ” ಎಂಬ ಕಿವಿಮಾತು ಹೇಳಿದ್ದಾರೆ.
Precautionary measures are necessary:
“ರೋಗ ಬಾಧಿತ ಗರಿ ಹಾಗೂ ಕೊಂಬೆಗಳನ್ನು ಕತ್ತರಿಸಬೇಕು, ಬಸಿ ಕಾಲುವೆಗಳನ್ನು ಮಾಡಬೇಕು. ತೋಟದಲ್ಲಿ ಇರುವ ನೀರು ತೋಟದಿಂದ ಹೊರಗೆ ಹೋಗುವಂತೆ ಮಾಡಬೇಕು. ತೋಟದಲ್ಲಿ ಗಾಳಿಯಾಡುವಂತೆ ಮಾಡಬೇಕು. ಅಡಕೆ ಬೆಳೆಗಾರರು ಮೇ ತಿಂಗಳ ಮೂರನೇ ವಾರದಲ್ಲಿ ಶೇ 1 ರಷ್ಟು ಬೋಡೊ ದ್ರಾವಣ ಸಿಂಪಡಣೆ ಮಾಡುವ ಸೂಚನೆಯನ್ನು ನೀಡಲಾಗಿದೆ. ಮಳೆ ನೋಡಿಕೊಂಡು ಎರಡು ಮೂರು ಬಾರಿ ಬೋಡೊ ದ್ರಾವಣವನ್ನು ಸಿಂಪಡಣೆ ಮಾಡಬೇಕು.
ತುಂತುರು ಮಳೆಯಾದಾಗ ಬೋಡೊ ದ್ರಾವಣ ಸಿಂಪಡಣೆ ಮಾಡಬೇಕು. ಶುಷ್ಕ ವಾತಾವರಣ ಇದ್ದಾಗ ಬೋಡೊ ದ್ರಾವಣದ ಬದಲಾಗಿ ಕಾಂಪರ್ ಆಕ್ಸಿಡ್ ಕ್ಲೋರಡ್ ಶೇ.3ರಷ್ಟು ಹಾಗೂ ಮೆಡಲಾಕ್ಸಿಡ್ ಎಂಜೆಡ್ ಶೇ. 2% ರಷ್ಟು ಸಿಂಪಡಣೆಗೆ ರೈತರಿಗೆ ಸೂಚಿಸಲಾಗಿದೆ” ಎಂದು ತಿಳಿಸಿದರು. “ತೋಟದ ಮಣ್ಣು ಹುಳಿಯಾಗಿದ್ರೆ, ಇದಕ್ಕೆ ಕೃಷಿ ಸುಣ್ಣವನ್ನು ಸುಮಾರು 200 ಗ್ರಾಂ ಎಕರೆಗೆ ಬೆರಸಬೇಕು. ಪ್ರತಿ ಒಂದು ಮರಕ್ಕೆ 15 ಗ್ರಾಂ ಸಾವಯವ ಗೊಬ್ಬರವನ್ನು ನೀಡಬೇಕು. ಹಾಗೆಯೇ ರಾಸಾಯನಿಕ ಗೊಬ್ಬರವಾದ NPK ಅನ್ನು ನೀಡಬೇಕಾಗುತ್ತದೆ.
ಮೇ ಮತ್ತು ಜೂನ್ ಹಾಗೂ ಸೆಪ್ಟೆಂಬರ್ ಹಾಗೂ ಅಕ್ಟೋಬರ್ನಲ್ಲಿ NPK 100 ಮತ್ತು 140 ಕೊಡುವಂತಾಗಬೇಕು. ನಮ್ಮ ಜಿಲ್ಲೆಯಲ್ಲಿ 38 ಸಾವಿರ ಹೆಕ್ಟರ್ ಅಡಕೆಯು ಕೊಳೆ ರೋಗದಿಂದ ನಷ್ಟವಾಗಿದೆ. ಎಲೆ ಚುಕ್ಕೆ ರೋಗವು 14 ಸಾವಿರ ಹೆಕ್ಟರ್ನಲ್ಲಿ ಹರಡಿದೆ. ಇದಕ್ಕೆ ರೋಗಬಾಧಿತ ಗರಿಗಳನ್ನು ತೆಗೆದು ಸುಟ್ಟು ಹಾಕಬೇಕು. ಆಗ ರೋಗ ನಿಯಂತ್ರಣಕ್ಕೆ ಬರುತ್ತದೆ” ಎಂದರು.
ಜಿಲ್ಲಾ ತೋಟಗಾರಿಕ ಇಲಾಖೆಯ ಉಪ ನಿರ್ದೇಶಕರಾದ ಸವಿತ ಜಿ ಮಾತನಾಡಿ, “ನಮ್ಮ ಜಿಲ್ಲೆಯಲ್ಲಿ ಒಟ್ಟು 1 ಲಕ್ಷ 21 ಸಾವಿರ ಹೆಕ್ಟರ್ನಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಸತತ ಮಳೆಯಿಂದ 31 ಸಾವಿರ ಹೆಕ್ಟರ್ ಪ್ರದೇಶ ಕೊಳೆ ರೋಗಕ್ಕೆ ತುತ್ತಾಗಿದೆ. ಕೊಳೆ ರೋಗಕ್ಕೆ ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರೋಗ ನಿಯಂತ್ರಣಕ್ಕೆ ಯಾವ ರೀತಿ ಜಾಗೃತಿ ಮಾಡಬೇಕೆಂದು ಎಲ್ಲಾ ತಾಲೂಕಿನ ಸಹಾಯಕ ನಿರ್ದೇಶಕರುಗಳು ಜಾಗೃತಿ ಮೂಡಿಸುತ್ತಿದ್ದಾರೆ” ಎಂದು ಹೇಳಿದರು.
Imports from abroad are dangerous for groundnut growers:
”ದೇಶದ ಶೇ 70ರಷ್ಟು ಅಡಕೆಯನ್ನು ಕರ್ನಾಟಕ ರಾಜ್ಯದಲ್ಲಿ ಬೆಳೆಯಲಾಗುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ 10 ಜಿಲ್ಲೆಯಲ್ಲಿ ಅಡಕೆಯನ್ನು ಬೆಳೆಯಲಾಗುತ್ತಿದೆ. ಅಡಕೆಯ ಮೇಲೆ ಲಕ್ಷಾಂತರ ಕುಟುಂಬಗಳು ಅವಲಂಬನೆಯಾಗಿವೆ. ಅಡಕೆ ಬೆಳೆಗಾರರು ಎಲೆ ಚುಕ್ಕೆ ರೋಗ, ಕೋಳೆರೋಗ, ಹಳದಿ ಎಲೆ ರೋಗದಿಂದ ನಲುಗಿ ಹೋಗುತ್ತಿದ್ದಾರೆ.
ನಮ್ಮ ದೇಶದಲ್ಲಿ ಅಡಕೆ ದರ ಕುಸಿತವಾಗಿವೆ. ಕಾರಣ ಭಾರತಕ್ಕೆ 17 ಸಾವಿರ ಟನ್ ಅಡಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಮಲೆನಾಡಿದ ದೇಶವಾರು ಅಡಕೆ, ಬಯಲು ಸೀಮೆಯ ತೂರಸಾಲು ಅಡಕೆ ಗುಣಮಟ್ಟದಲ್ಲಿ ಉತ್ಪಾದನೆ ಆಗುತ್ತಿದೆ. ಇಂತಹ ಗುಣಮಟ್ಟದ ಅಡಕೆಯ ಬೆಲೆ ಕುಸಿತವಾಗುತ್ತಿದೆ. ಅಡಕೆಗೆ ಕಳೆ ಹೊಡೆಯುವ ಮಿಷನ್, ಅಡಕೆ ಸುಲಿಯುವ ಯಂತ್ರಗಳಿಗೆ ಸಬ್ಸಿಡಿ ಇದೆ.
ARECANUT CROPಯನ್ನು ಮಂಗಗಳು ನಾಶ ಮಾಡುತ್ತಿದೆ. ರೋಗಗಳು ಅಡಕೆ ಬೆಳೆಯನ್ನು ಕುಂಠಿತಗೊಳಿಸಿದೆ. ವಿದೇಶಿ ಅಡಕೆ ಆಮದು ನೀತಿಯು ಸಹ ಅಡಕೆ ಬೆಳೆಗಾರರನ್ನು ಸಂಕಷ್ಟಕ್ಕೆ ನೂಕಿವೆ” ಎಂದು ಅಡಕೆ ಬೆಳೆ ಹೋರಾಟಗಾರಾದ ರಮೇಶ್ ಹೆಗಡೆ ಅಳಲು ತೋಡಿಕೊಂಡಿದ್ದಾರೆ.
To keep the price of groundnut stable:
ಅಡಕೆ ದರ ಏರಿಳಿತದಿಂದ ಅಡಕೆ ಬೆಳೆಗಾರರು ಕಂಗಲಾಗಿದ್ದಾರೆ. ಅಡಕೆ ಕೊಯ್ಲು ಮಾಡಿ ಮಾರುಕಟ್ಟೆಗೆ ಮಾರಾಟಕ್ಕೆ ಹೋದಾಗ ಅಡಕೆ ದರ ಕಡಿಮೆ ಇರುತ್ತದೆ. ಅದೇ ರೈತನ ಬಳಿ ಅಡಕೆ ಇಲ್ಲದಾಗ ದರ ಏರಿಕೆ ಆಗಿರುತ್ತದೆ. ದರ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕಿದೆ. ಸರ್ಕಾರ ಸರಿಯಾಗಿ ಗಮನ ಹರಿಸಿ, ಸೂಕ್ತ ಪರಿಹಾರ ನೀಡಬೇಕೆಂದು ಅಡಕೆ ಬೆಳೆಗಾರರು ಆಗ್ರಹಿಸಿದ್ದಾರೆ.
ಇದನ್ನು ಓದಿರಿ : Z MORH TUNNEL INAUGURATION : ನಾಳೆ ಝಡ್-ಮೋರ್ಹ್ ಸುರಂಗ ಮಾರ್ಗ ಉದ್ಘಾಟನೆ