ವಿಜಯನಗರ (ಹೊಸಪೇಟೆ): ವಿಶ್ವ ಪಾರಂಪರಿಕ ತಾಣ ಹಂಪಿಯ ಗತವೈಭವವನ್ನು ಮರುಸೃಷ್ಟಿಸಿರುವ ಎಐ ತಂತ್ರಜ್ಞಾನದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿಗಮನ ಸೆಳೆಯುತ್ತಿವೆ. ಗತಕಾಲದಲ್ಲಿಹಂಪಿ ನೆಲದಲ್ಲಿನಡೆಯುತ್ತಿದ್ದ ಸಂಭ್ರಮದ ದೃಶ್ಯಗಳನ್ನು ಹಂಪಿ ಹೀಗಿತ್ತಂತೆ ನೋಡಿ ಎನ್ನುವಂತೆ ಸೃಷ್ಟಿಸಲಾಗಿದೆ.
ಹಂಪಿಯ ಗತವೈಭವವನ್ನು ಎಐ ತಂತ್ರಜ್ಞಾನದ ಮೂಲಕ ಮರುಸೃಷ್ಟಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಾಜಮನೆತನ, ಆನೆಗಳು, ನದಿ, ದೇವಸ್ಥಾನಗಳು, ಮಾರುಕಟ್ಟೆ ದೃಶ್ಯಗಳನ್ನು ಒಳಗೊಂಡ ಈ ವಿಡಿಯೊಗಳು ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ.
ಮುತ್ತು-ರತ್ನಗಳ ವ್ಯಾಪಾರ, ಜನಜೀವನ, ಹಂಪಿಯ ಪರಂಪರೆಯನ್ನು ಅಂದಿನ ಕಾಲದಲ್ಲೇ ಇದ್ದಂತೆ ಅನುಭವಿಸುವಂತೆ ಮಾಡುತ್ತವೆ. ಈ ವಿಡಿಯೊಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಹಂಪಿ ಸ್ಮಾರಕ, ನದಿ, ಆನೆ, ಸೈನ್ಯ, ಅಲ್ಲಿನ ಆಚರಣೆ ಸೇರಿ ಹಂಪಿ ಇತಿಹಾಸದ ನೈಜ ಅನುಭವ ನೀಡುವಂತಿರುವ ವಿಡಿಯೊಗಳು ಹರಿದಾಡುತ್ತಿವೆ. ಹಂಪಿ ಬೀದಿಯಲ್ಲಿಮುತ್ತು-ರತ್ನ ಸೇರಿನಲ್ಲಿಅಳೆದು ಮಾರಾಟ ಮಾಡುತ್ತಿದ್ದರಂತೆ ಎಂಬುದನ್ನು ಇತಿಹಾಸದಲ್ಲಿಓದಿದ್ದೇವೆ. ಆದರೆ, ನೋಡಿರಲಿಲ್ಲ. ಈಗ ಎಐ ವಿಡಿಯೊದಲ್ಲಿಆ ದೃಶ್ಯವನ್ನು ಕಾಣಬಹುದು.
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿಅಂದಿನ ಕಾಲದಲ್ಲಿದ್ದ ವೈಭವದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಎಐ ತಂತ್ರಜ್ಞಾನದಲ್ಲಿಮರು ಸೃಷ್ಟಿಸಲಾಗಿದೆ. ಈ ವಿಡಿಯೊಗಳು ಗತಕಾಲವನ್ನು ಅಚ್ಚೊತ್ತಿದಂತೆ ಕಾಣುತ್ತಿವೆ. ಈ ವಿಡಿಯೊಳಲ್ಲಿಹಂಪಿಯ ವೈಭವ ಹೇಗಿತ್ತೆಂದು ನೋಡಬಹುದು.
ದೇಶ, ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಹಂಪಿ ಆಗಿನ ಕಾಲದಲ್ಲಿಹೇಗಿತ್ತು ಎಂಬುದನ್ನು ವಿಡಿಯೊಗಳಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ. ವಿಡಿಯೊಗಳಲ್ಲಿಹಂಪಿಯ ಪರಂಪರೆ, ವೈಭವ, ವಿಜಯನಗರ ಸಾಮ್ರಾಜ್ಯದಲ್ಲಿಕಾಲದಲ್ಲಿದ್ದ ಮಾರುಕಟ್ಟೆ, ಜನರು ಖರೀದಿ ಮಾಡುತ್ತಿರುವುದು, ಓಡಾಡುತ್ತಿರುವುದು, ಆನೆಗಳು, ನದಿ, ದೇವಸ್ಥಾನ, ನದಿಯಲ್ಲಿಜನರು ದೋಣಿಯಲ್ಲಿವಿಹರಿಸುತ್ತಿರುವುದು, ರಾಜಮನೆತನದ ದೃಶ್ಯಗಳಲ್ಲಿ ಕಾಣಿಸುತ್ತವೆ.
ಸ್ಥಳೀಯ ಆರಾಧ್ಯ ದೈವ ಪೇಟೆ ಬಸವೇಶ್ವರ, ನೀಲಮ್ಮನವರ ಜೋಡಿ ರಥೋತ್ಸವ ನಿಮಿತ್ತ ನಡೆಯುವ ಪರಿಷೆ ಮಹಿಳೆಯರು, ಚಿಣ್ಣರು ಸೇರಿ ಎಲ್ಲ ವರ್ಗದವರನ್ನು ವಿಶೇಷವಾಗಿ ಆಕರ್ಷಿಸಿದೆ. ದೇಗುಲದ ಎದುಗಡೆಯ ರಸ್ತೆಯಲ್ಲಿಎರಡೂ ಬದಿಗೆ ಬಳೆ, ಆಟದ ಹಾಗೂ ಪಾತ್ರೆ ಸಾಮಾನು, ಪುಸ್ತಕ ಸೇರಿ ನಾನಾ ಬಗೆಯ ಅಂದಾಜು 100ಕ್ಕೂ ಹೆಚ್ಚು ತಾತ್ಕಾಲಿಕ ಅಂಗಡಿಗಳನ್ನು ಹಾಕಲಾಗಿದೆ.
ಪರಿಷೆಯಲ್ಲಿವಿಶೇಷವಾಗಿ ಹಲವಾರು ಬಳೆಗಳಲ್ಲಿಹ್ಯಾಪಿ(ಡಜನ್ 120 ರೂ.) ಪುಷ್ಪ 2, ಅನಿಮಲ್, ಅನಾರ್‌ಕಲಿ, ಕಿಸಾನ್, ಕಚ್‌ಕಡಾಯ್, ಕಟಾಕಟಾ ಸೇರಿ ಫ್ಯಾನ್ಸಿ ತರಹ ಸೇರಿದಂತೆ ಬಗೆ ಬಗೆಯ ಗಾಜಿನ ಬಳೆಗಳು ಡಜನ್ ಒಂದಕ್ಕೆ 100 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.
ಮಹಿಳೆಯರು, ಯುವತಿಯರು ತಮಗಿಷ್ಟವಾದ ಬಳೆ ಖರೀದಿಸುತ್ತಿದ್ದಾರೆ. ಅಲ್ಲದೇ ಮಹಿಳೆಯರು ಅಡುಗೆ ಪಾತ್ರೆ ಸಾಮಾನುಗಳನ್ನು ಕೊಳ್ಳುತ್ತಿದ್ದಾರೆ. ಶ್ರೀಮಂತ ಸಾಮ್ರಾಜ್ಯ ಎನಿಸಿರುವ ವಿಜಯನಗರ ಸಾಮ್ರಾಜ್ಯದ ಹಂಪಿಯ ವೈಭವ ನೋಡಿದಂತಾಯ್ತು. ಕಲ್ಲಿನತೇರು, ಆನೆ, ಯುದ್ಧದ ದೃಶ್ಯಗಳು ಹಾಗೂ ಬೀದಿಯಲ್ಲಿಮುತ್ತು ರತ್ನ ಮಾರುವುದನ್ನು ಅಂದಿನ ಕಾಲದಲ್ಲೇ ಇರುವಂತೆ ಮಾಡಿರುವ ವಿಡಿಯೊ ಕಣ್ಮನ ಸೆಳೆಯುತ್ತಿದೆ ಎಂದು ವಿಡಿಯೋ ನೋಡಿದ ನಾಗರಾಜ್, ಮಂಜುನಾಥ, ದೇವರಾಜ್ ಎಂಬುವರು ಪ್ರತಿಕ್ರಿಯಿಸಿದ್ದಾರೆ.
ಚಿಣ್ಣರಿಗಾಗಿ ಆಟೊ, ಬಸ್, ಕಾರ್, ಏರೋಪ್ಲೇನ್ ಸೇರಿ ಹಲವಾರು ಬಗೆಯ ಆಟಿಕೆ ಸಾಮಾನುಗಳಿದ್ದು, ಚಿಕ್ಕ ಮಕ್ಕಳು ಹಠ ಹಿಡಿದು ಆಟದ ಸಾಮಾನುಗಳನ್ನು ಪಾಲಕರಿಂದ ಕೊಡಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಮಂಡಕ್ಕಿ, ಖಾರ, ಬೆಂಡು, ಬತ್ತಾಸು ಸಿಹಿ ತಿಂಡಿಗಳನ್ನು ಎಲ್ಲರೂ ಖರೀದಿಸುತ್ತಿದ್ದಾರೆ.