Aryan Khan News:
ಶಾರುಖ್ ಇಂಟ್ರೊಡಕ್ಷನ್ ಸೀನ್ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN, ಸೂಪರ್ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ ಮಾಡುವಂತೆ ಸೂಚಿಸುತ್ತಾನೆ. ನಿರಂತರ ರೀಟೇಕ್‌ಗಳು ಶಾರುಖ್ ಅವರ ತಾಳ್ಮೆ ಪರೀಕ್ಷಿಸುತ್ತವೆ. ಕೊನೆಗೆ, ಕೋಪಗೊಂಡ ಅವರು, “ಶಟ್ ಅಪ್, ಒನ್ ಮೋರ್, ಒನ್ ಮೋರ್.
ಈಗ ನಾನು ಮಾಡುತ್ತೇನೆ, ನೀವೆಲ್ಲರೂ ನೋಡಿ ಕಲಿಯಿರಿ” ಎಂದು ತಿಳಿಸುತ್ತಾರೆ.ಬಾಲಿವುಡ್ ನಟ ಶಾರುಖ್ ಖಾನ್ ಸೋಮವಾರ ‘ನೆಕ್ಸ್ಟ್ ಆನ್ ನೆಟ್‌ಫ್ಲಿಕ್ಸ್ ಈವೆಂಟ್’ನಲ್ಲಿ ‘ದಿ ಬಾ***ಡ್ಸ್ ಆಫ್ ಬಾಲಿವುಡ್’ (The Ba***ds of Bollywood) ಟೀಸರ್ ಅನಾವರಣಗೊಳಿಸಿದರು. ಈ ಸರಣಿಯು ಕಿಂಗ್ ಖಾನ್ ಪುತ್ರ ARYAN KHAN ಅವರ ಚೊಚ್ಚಲ ನಿರ್ದೇಶನದ ಪ್ರಾಜೆಕ್ಟ್ ಆಗಿದೆ.
ತೆರೆಮರೆಯಲ್ಲಿ ನಡೆಯುವ ತಂದೆ-ಮಗನ ಹಾಸ್ಯದ ಒಂದು ನೋಟವನ್ನು ಟೀಸರ್ ತೋರಿಸಿದೆಈ ದೃಶ್ಯದೊಂದಿಗೆ ಟೀಸರ್ ಮುಕ್ತಾಯಗೊಳ್ಳುತ್ತದೆ. ದೃಶ್ಯ ಹಾಸ್ಯಮಯವಾಗಿದೆ. ಕಾರ್ಯಕ್ರಮದ ಹಾಸ್ಯ ಶೀರ್ಷಿಕೆಯು ನೆಟ್‌ಫ್ಲಿಕ್ಸ್‌ನಲ್ಲಿ ಶೀಘ್ರದಲ್ಲೇ ಬರಲಿರುವ ಕಾಮಿಡಿ ಕ್ಷಣಗಳ ಸುಳಿವು ಒದಗಿಸಿದೆ. ಆದಾಗ್ಯೂ, ಈ ಶೋನ ಕಾಸ್ಟ್ ಲಿಸ್ಟ್ ಅನ್ನು ಗೌಪ್ಯವಾಗಿಡಲಾಗಿದೆ.
ಟೀಸರ್ನಲ್ಲಿ ಚಿತ್ರತಂಡದ ಹೆಸರು ಬಹಿರಂಗಗೊಳ್ಳುತ್ತದೆ. ಆದ್ರೆ, ಈ ಪ್ರೊಜೆಕ್ಟ್ನಲ್ಲಿ ಹೆಚ್ಚಿನ ಸುಳಿವು ಬಿಟ್ಟುಕೊಟ್ಟಿಲ್ಲ.ನಂತರ ಶಾರುಖ್ ಖಾನ್ ಪರ್ಫೆಕ್ಟ್ ಶಾಟ್ ನೀಡಿದ್ದಾರೆ. ಆದರೆ, ಅಲ್ಲೂ ಹಾಸ್ಯಮಯ ತಿರುವೊಂದನ್ನು ನೀವು ನೋಡಬಹುದು. ನಿರ್ದೇಶಕನ ಜವಾಬ್ದಾರಿ ಹೊತ್ತ ARYAN KHAN, ಕ್ಯಾಮೆರಾ ರೋಲಿಂಗ್ನಲ್ಲಿಲ್ಲ ಎಂದು ತಿಳಿಸಿದ್ದಾನೆ.
ಕೊನೆಗೆ, ಶಾರುಖ್ ತನ್ನ ಮಗನ ಮೂರ್ಖತನಕ್ಕಾಗಿ ಆತನಿಗೆ ಹೊಡೆಯಲು ಆತನ ಹಿಂದೆ ಓಡಿದ್ದಾರೆ.ಎಲ್ಲರೂ ಆಕರ್ಷಕವಾಗಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಶಾರುಖ್, ತಮಗೆ ತೋರಿಸಿದ ಪ್ರೀತಿಯಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ತಮ್ಮ ಮಕ್ಕಳಾದ ಸುಹಾನಾ ಮತ್ತು ARYAN KHAN ಅವರಿಗೆ ತೋರಿಸಿ ಎಂದು ಅಭಿಮಾನಿಗಳು ಮತ್ತು ಮಾಧ್ಯಮದವರಲ್ಲಿ ಕೇಳಿಕೊಂಡರು.
ಶಾರುಖ್ ಖಾನ್ ಹೊರತುಪಡಿಸಿ, ಪತ್ನಿ ಗೌರಿ ಖಾನ್, ಮಕ್ಕಳಾದ ARYAN KHAN ಮತ್ತು ಸುಹಾನಾ ಖಾನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಾಲಿವುಡ್ ಕಿಂಗ್ ಶಾರುಖ್ ಖಾನ್ಗೆ ಪುತ್ರ ARYAN KHAN ಆ್ಯಕ್ಷನ್ ಕಟ್ ಹೇಳಿರೋದು ಇದೇ ಮೊದಲಲ್ಲ. ಈ ಹಿಂದೆ ತಮ್ಮ ಬ್ರ್ಯಾಂಡ್ನ ಜಾಹೀರಾತನ್ನು ARYAN KHAN ನಿರ್ದೇಶಿಸಿದ್ದರು. ಇದೀಗ ಮತ್ತೊಮ್ಮೆ ವಿಶ್ವಾದ್ಯಂತ ಗಮನ ಸೆಳೆದಿರುವ ಶಾರುಖ್ ಖಾನ್ಗೆ ARYAN KHAN ಡೈರೆಕ್ಷನ್ ಮಾಡಿದ್ದಾರೆ.
ಇದನ್ನು ಓದಿರಿ :Honour To The Late Designer Rohit Bal! Sonam Kapoor Tears Up?