Dima Hasao (Assam) News:
ASSAM ಕಲ್ಲಿದ್ದಲು ಗಣಿಯಲ್ಲಿ ಕಳೆದೆರಡು ದಿನಗಳಿಂದ ಸಾಗುತ್ತಿದ್ದ ರಕ್ಷಣಾ ಕಾರ್ಯಾಚರಣೆಗೆ ಮಂಗಳವಾರ ಸಂಜೆ ಕೊಂಚ ವಿರಾಮ ನೀಡಲಾಗಿತ್ತು.ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಉಮ್ರಾಂಗ್ಸೊದಲ್ಲಿನ ಕಲ್ಲಿದ್ದಲು ಗಣಿಯೊಳಗೆ ಸಿಲುಕಿರುವ 9 ಕಾರ್ಮಿಕರ ಪೈಕಿ ಒಬ್ಬ ಕಾರ್ಮಿಕನ ಮೃತದೇಹವನ್ನು ಇಂದು ಮೇಲೆತ್ತಲಾಗಿದೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಮತ್ತು ಎನ್ಡಿಆರ್ಎಫ್ ಡೈವರ್ಸ್ ಭಾಗಿಯಾಗಿದ್ದಾರೆ.
ಕಳೆದೆರಡು ದಿನಗಳಿಂದ ಸಾಗುತ್ತಿದ್ದ ಕಾರ್ಯಾಚರಣೆಗೆ ಮಂಗಳವಾರ ಸಂಜೆ ಕೊಂಚ ವಿರಾಮ ನೀಡಲಾಗಿತ್ತು. ಬುಧವಾರ ಬೆಳಗ್ಗೆಯಿಂದ ಹಗಲು ರಾತ್ರಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದೀಗ ರಕ್ಷಣಾ ತಂಡವನ್ನು ಕೂಡಾ ವಿಸ್ತರಿಸಲಾಗಿದೆ ಎಂದು ಎನ್ಡಿಆರ್ಎಫ್ ಉಪ ಕಮಾಂಡೆಂಟ್ ಎನ್.ತಿವಾರಿ ಮಾಹಿತಿ ನೀಡಿದರು.
ಗಣಿಯಲ್ಲಿ ಸಿಲುಕಿರುವ ಉಳಿದ 8 ಮಂದಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು ಭೂ ಸೇನೆ, ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯ ಚುರುಕುಗೊಳಿಸಿದ್ದಾರೆ ಎಂದು ಎನ್ಡಿಆರ್ಎಫ್ ಅಧಿಕಾರಿಗಳು ಹೇಳಿದ್ದಾರೆ.ಮಂಗಳವಾರ ಸಂಜೆ ಬಿಡುವು ನೀಡಲಾಗಿದ್ದ ಕಾರ್ಯಾಚರಣೆ ಬುಧವಾರ ಬೆಳಗ್ಗೆ ಪುನಾರಂಭಗೊಂಡಿದ್ದು, ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರನ್ನು ನಮ್ಮ ತಂಡ ಶೀಘ್ರದಲ್ಲೇ ತಲುಪಲಿದ್ದು, ರಕ್ಷಿಸುವ ಭರವಸೆ ಇದೆ.
ಸದ್ಯ ಎನ್ಡಿಆರ್ಎಫ್ ಮತ್ತು ಸೇನೆ ಒಟ್ಟಿಗೆ ಗಣಿಯಲ್ಲಿ ಕೆಲಸ ಮಾಡುತ್ತಿದ್ದು, ಅವರೊಂದಿಗೆ ಶೀಘ್ರದಲ್ಲೇ ನೌಕಾ ಸಿಬ್ಬಂದಿಗಳೂ ಸೇರಲಿದ್ದಾರೆ ಎಂದು ಅವರು ಹೇಳಿದರು.ರಕ್ಷಣಾ ಕಾರ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ASSAM ಸಿಎಂ ಹಿಮಾಂತ್ ಬಿಸ್ವಾ ಶರ್ಮಾ, ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ.
ಒಬ್ಬರನ್ನು ಬಂಧಿಸಲಾಗಿದೆ. ಇದೊಂದು ಅನಧಿಕೃತ ಗಣಿಗಾರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಗಣಿ ಕಾರ್ಮಿಕರೊಬ್ಬರು ಮಾತನಾಡಿ, ನಾವು ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಜನರು ನೀರು ತುಂಬುತ್ತಿದೆ ಎಂದು ಕೂಗಲು ಆರಂಭಿಸಿದರು. ಆಗ 30ರಿಂದ 35 ಜನ ನಾವು ಹೊರಬಂದೆವು. ಆದರೆ 15-16 ಜನರು ಅಲ್ಲೇ ಸಿಲುಕಿಕೊಂಡರು ಎಂದು ತಿಳಿಸಿದರು
ರಕ್ಷಣಾ ಕಾರ್ಯಾಚರಣೆಯ ಕುರಿತು ಕೇಂದ್ರ ಕಲ್ಲಿದ್ದಲು ಸಚಿವ ಜಿ.ಕೃಷ್ಣ ರೆಡ್ಡಿ ಅವರ ಜೊತೆಗೂ ಚರ್ಚಿಸಲಾಗಿದ್ದು, ಸಹಾಯ ಯಾಚಿಸಲಾಗಿದೆ. ಅವರೂ ಕೂಡ ಕಾರ್ಯಾಚರಣೆಯಲ್ಲಿ ASSAM ಸರ್ಕಾರವನ್ನು ಬೆಂಬಲಿಸಲು ಎಲ್ಲಾ ರೀತಿಯ ನೆರವು ನೀಡುವಂತೆ ನಿರ್ದೆಶಿಸಿದ್ದಾರೆ. ಸಚಿವರ ತ್ವರಿತ ಪ್ರತಿಕ್ರಿಯೆ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಇದನ್ನು ಓದಿರಿ : DISCOUNTS ON IPHONE 16 SERIES : ಆಪಲ್ ಪ್ರಿಯರಿಗೆ ಗುಡ್ ನ್ಯೂಸ್; ಐಫೋನ್ 16 ಸೀರಿಸ್ ಮೇಲೆ ಆಫರ್