ಬೆಂಗಳೂರು: SC/ ST ಸಮುದಾಯದ ಜನರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತಡೆಗೆ ಸರ್ಕಾರ ಬ್ರಹ್ಮಾಸ್ತ್ರ ರೆಡಿ ಮಾಡಿದೆ. SC/ST ಸಮುದಾಯದ ಜನರ ಮೇಲೆ ನಡೆಯುವ ದೌರ್ಜನ್ಯ ನಡೆಸುವ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಉದ್ದೇಶ ದಿಂದ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪನೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಹಾಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಘಟಕಗಳನ್ನು ಸ್ಪೆಷಲ್ ಪೊಲೀಸ್ ಠಾಣೆಗಳಾಗಿ ಪರಿವರ್ತಿಸಿ ಘೋಷಣೆ ಮಾಡಲಾಗಿದೆ.
ಅಟ್ರಾಸಿಟಿ ಕೇಸ್ ದಾಖಲಾದರೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರ ಈ ಠಾಣೆ ಯ ಸಬ್ ಇನ್ಸ್ಪೆಕ್ಟರ್ ಹಾಗೂ ಮೇಲಿನ ಅಧಿಕಾರಿಗಳಿಗಿರುತ್ತದೆ.
ರಾಜ್ಯದಲ್ಲಿ ದಿನೇ ದಿನೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ದ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ್ತಿವೆ. ಹೀಗಾಗಿ ದಲಿತರ ಮೇಲೆ ದೌರ್ಜನ್ಯ ನಿಯಂತ್ರಿಸಲು ಈ ಕ್ರಮ ಎಂದು ಸರ್ಕಾರ ಹೇಳಿದೆ.
ಮುಂದಿನ ದಿನಗಳಲ್ಲಿ ದೌರ್ಜನ್ಯ ನಿಯಂತ್ರಿಸಲು ಸರ್ಕಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಗಳ ಘಟಕಗಳಿಗೆ ಪೊಲೀಸ್ ಪವರ್ ಸಿಕ್ಕಿದ್ದು, ಸ್ಪೆಷಲ್ ಪೊಲೀಸ್ ಠಾಣೆಗಳಾಗಿ ರಾಜ್ಯಾದ್ಯಂತ ೩೩ ಘಟಕಗಳಿಗಳು ಕೆಲಸ ಮಾಡಲಿವೆ.
ಈ ವಿಶೇಷ ಠಾಣೆಗಳು ಎಸ್ ಟಿ, ಎಸ್ ಸಿ ಗಳ ಮೇಲೆ ದೌರ್ಜನ್ಯ ನಿಯಂತ್ರಣ ಕ್ಕೆ ಕೆಲ ಮಾಡಲಿವೆ. ಈ ಠಾಣೆಗಳಿಗೆ 1000 ಹೆಚ್ಚುವರಿ ಹುದ್ದೆಗಳನ್ನು ಸರ್ಕಾರ ಸೃಷ್ಟಿ ಮಾಡಿದೆ.
ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಕಲಾವತಿಯವರು ಆದೇಶ ಹೊರೆಡಿಸಿದ್ದಾರೆ.ಈಗಾಗಲೇ ಸಚಿವ ಸಂಪುಟ ಕೂಡ ಅನುಮೋದನೆ ನೀಡಿದೆ. ಸಮಾಜ ಕಲ್ಯಾಣ ಸಚಿವ ಎಚ್ .ಸಿ ಮಹದೇವಪ್ಪ ಅವರ ವಿಶೇಷ ಒತ್ತಾಸೆಯಿಂದ ಈ ಆದೇಶ ಹೊರಬಿದ್ದಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.