spot_img
spot_img

ಛೇ! ಇದೆಂಥ ವಿಕೃತಿ..? ಶೌಚಾಲಯಕ್ಕೆ ಹೋಗಬೇಕೆಂದು ಬೇಡಿಕೊಂಡರು ಬಿಡದೆ ಅತ್ಯಾಚಾರ ಎಸಗಿದ..!

spot_img
spot_img

Share post:

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಕಂಡು ಕೇಳರಿಯದಂತಹ ದುಷ್ಕೃತ್ಯ ಎಸಗಿದ ಆರೋಪಿಯ ಬಗ್ಗೆ ಹೇಳಲು ಹೊರಟಿದ್ದೇವೆ.2000 ಕ್ಕೂ ಅಧಿಕ ಹೆಣ್ಣು ಮಕ್ಕಳ ಜೊತೆಗೆ ಚೆಲ್ಲಾಟವಾಡಿ, ಅತ್ಯಾಚಾರ ಎಸಗಿ ಅದನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ವಿಕೃತಿ ಮೆರೆದ ಹಾಸನ ಜಿಲ್ಲೆಯ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಇಂದು ಮತ್ತೊಂದು ಸತ್ಯ ಹೊರ ಬಿದ್ದಿದೇ. ಪೊಲೀಸ್‌ರ ವಿಶೇಷ ತನಿಖಾ ತಂಡ ಕೋರ್ಟಿಗೆ ಸಲ್ಲಿಸಿದ ಜಾರ್ಜ್ ಶೀಟ್ ನಲ್ಲಿ ಹಲವು ವಿಷಯಗಳ ಕುರಿತು ಉಲ್ಲೇಖಿಸಲಾಗಿದೆ.

ಮೈಸೂರಿನ ಕೆ ಆರ್ ಪೇಟೆ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ತನಿಖೆಯಲ್ಲಿ ಸಾಬೀತಾಗಿದೆ.
ಆ ಹಿರಿಯ ಮಹಿಳೆ ಬೇಡಣ್ಣ ಬಿಟ್ಟುಬಿಡಿ ಎಂದು ಕೈ ಮುಗಿದು ಕೇಳಿಕೊಂಡರು ಬಿಡದೆ ಆಕೆಯನ್ನು ಉರಿದು ಮುಕ್ಕಿರುವ ವಿಚಾರ ಎಸ್ಐಟಿ ತನ್ನ ಜಾರ್ಜ್ ಶೀಟ್ ನಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ 1652 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಿಗಿರುವುದು ಸತ್ಯ ಎಂದು ಉಲ್ಲೇಖಿಸಲಾಗಿದೆ. ಇದು ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಎರಡನೇ ಅತ್ಯಾಚಾರ ಆರೋಪದ ದೋಷಾರೋಪ ಪಟ್ಟಿಯಾಗಿದೆ.

ಮಹಿಳೆಯ ದೂರಿನ ಆಧಾರದ ಮೇಲೆ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ಐಟಿ ತಂಡ ತನಿಖೆ ಆರಂಭಿಸಿತು. ವಿಚಾರಣೆ ನಡೆಸಿದಾಗ ಅತ್ಯಾಚಾರ ವಿಚಾರಣೆ ಬಯಲಾಗಿದೆ.ಪ್ರಕರಣದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷಿಗಳು ಸಿಕ್ಕಿವೆ.

ಹೊಳೆನರಸೀಪುರದ ತೋಟದ ಮನೆಯಲ್ಲಿ ಕೆಲಸಕ್ಕಿದ್ದ ಸಂತ್ರಸ್ತೆಯನ್ನು ಹಿಡಿದು ರೂಮಿಗೆ ಎಳೆದೊಯ್ದು ತನ್ನ ಬಟ್ಟೆ ಬಿಚ್ಚುತ್ತಾ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಾ ಮಹಿಳೆಗೆ ಬಟ್ಟೆ ತೆಗೆಯುವಂತೆ ಆದೇಶಿಸುತ್ತಾನೆ. ಅಣ್ಣ, ಬೇಡಣ್ಣ ಬಿಟ್ಬಿಡಿ ಎಂದು ಗೋಗರೆದರು, ಏನಾಗಲ್ಲ ತಂಗಿಯೇ ಎನ್ನುತ್ತಾ ಮುಂದುವರಿಯುತ್ತಾನೆ.
ದಮ್ಮಯ್ಯ ಕಣಣ್ಣ, ಬಾಗಿಲು ತೆಗೆದು ನನ್ನನ್ನು ಬಿಟ್ಟು ಬಿಡು ಎಂದು ಮಹಿಳೆ ಗೋಳಾಡಿದರು ಕೇಳದೆ ಪ್ರಜ್ವಲ್ ಮಹಿಳೆಯ ಬಟ್ಟೆ ಬಿಚ್ಚಿಸುತ್ತಾನೆ.

ನಾನು ಬಾತ್ರೂಮ್‌ಗೆ ಹೋಗಬೇಕು ಅರ್ಜೆಂಟ್ ಎಂದು ಹೇಳಿದರು ಅದನ್ನ ಲೆಕ್ಕಿಸದೆ ರಾಕ್ಷಸನಂತೆ ಮೇಲೇರಿ ಅತ್ಯಾಚಾರ ಎಸಿಗಿದ್ದಾನೆ. ಅಲ್ಲದೆ ಯಾರ ಮುಂದೆ ಏನಾದರು ಬಾಯಿ ಬಿಟ್ಟರೆ ನಿನ್ನ ಮಗನಿಗೆ ಈ ವಿಡಿಯೋ ಕಳುಹಿಸುತ್ತೇನೆ ಎಂದು ಬೆದರಿಸಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಳು.

spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...