ಬೆಂಗಳೂರು, (ಅ.18) : ಗಂಟೆ ಗಟ್ಟಲೆ ಟ್ರಾಫಿಕ್ ಕಿರಿ ಕಿರಿ ಅನುಭವಿಸುವ ಬೆಂಗಳೂರು ಜನರಿಗೆ ಈ ಸಮಸ್ಯೆಯಿಂದ ಶೀಘ್ರವೇ ಪರಿಹಾರ ಸಿಗುವುದು ಸೂಕ್ತವಾಗಿದೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫ್ಲೈಯಿಂಗ್ ಟ್ಯಾಕ್ಸಿ ಸೇವೆ ಆರಂಭಿಸಲು ತೀರ್ಮಾನಿಸಿ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಮಾಹಿತಿ ನೀಡಿದೆ.
ಈ ಒಪ್ಪಂದದ ಮೂಲಕ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಏರ್‌ಮೊಬಿಲಿಟಿಯ ಪರಿಹಾರಗಳನ್ನು ಕಂಡು ಕೊಳ್ಳಲಾಗುತ್ತಿದೆ.
ಈ ಟ್ಯಾಕ್ಸಿ ಸೇವೆ ಆರಂಭವಾದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಗಳಲ್ಲಿ ನಿಮಿಷಗಳಲ್ಲಿ ತೆರಳಲು ಅನುಕೂಲ.
ಬೆಂಗಳೂರು ಏರ್‌ಪೋರ್ಟ್ ಈ ಹಾರಾಡುವ ಟ್ಯಾಕ್ಸಿ ಸೇವೆ ಒದಗಿಸಲು ಖಾಸಗಿ ಸರಳಾ ಏವಿಯೇಷನ್ ಜೊತೆಗೆ ಕೈ ಜೋಡಿಸಿದೆ.
2025ರಲ್ಲಿ ಈ ಸೇವೆಯು ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಖಚಿತ ಪಡಿಸಿದ್ದು, ಪೋಟೋ ಹಂಚಿಕೊಂಡಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಎಲೆಕ್ಟ್ರಾನಿಕ್ಸ್ ಸಿಟಿಗೆ 159 ನಿಮಿಷಗಳ ಬದಲಾಗಿ ಕೇವಲ 19 ನಿಮಿಷಗಳಲ್ಲಿ ತಲುಪಬಹುದು. ಇಷ್ಟು ತ್ವರಿತಮಟ್ಟದಲ್ಲಿ ಫ್ಲೈಯಿಂಗ್ ಟ್ಯಾಕ್ಸ್ ಸೇವೆ ಒದಗಿಸಲಿದೆ.
ಇದು ಟ್ರಾಫಿಕ್ ಮಧ್ಯ ಜನರಿಗೆ ಸಾರಿಗೆ ಸೇವೆ ನೀಡುವಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಿದೆ ಎಂದು ತಿಳಿಸಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now