spot_img
spot_img

ಬಾಂಗ್ಲಾ ಗಲಭೆ ಗಂಭೀರ ಆರೋಪ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಲಂಡನ್​: ಸಾಗರೋತ್ತರ ಅವಾಮಿ ಲೀಗ್ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಹಸೀನಾ ಅವರು, ಜುಲೈ-ಆಗಸ್ಟ್ ತಿಂಗಳಲಿನಲ್ಲಿ ಬಾಂಗ್ಲಾದಲ್ಲಿ ನೆಡೆದ ಪ್ರಕ್ಷುಬ್ಧತೆಯ ಹಿಂದದಿನ “ಮಾಸ್ಟರ್ ಮೈಂಡ್” ಯೂನಸ್​ ಎಂದು ಆರೋಪಿಸಿ, ಅವರು ಮತ್ತು ಅವರ ಬೆಂಬಲಿಗರನ್ನು ಬಾಂಗ್ಲಾದೇಶದ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಒಳಪಡುವಂತೆ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.

ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಆಪಾದಿತ ಕಿರುಕುಳಕ್ಕಾಗಿ ಅವರು ಯೂನಸ್ ಮತ್ತು ಅವರ ಮಧ್ಯಂತರ ಸರ್ಕಾರವನ್ನು ಟೀಕಿಸಿದ ಹಸೀನಾ ಅವರು, “ದೇಶದಲ್ಲಿ ಆಗಸ್ಟ್ 5 ರಿಂದ, ಅಲ್ಪಸಂಖ್ಯಾತರು, ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರ ಪೂಜಾ ಸ್ಥಳಗಳ ಮೇಲೆ ವ್ಯಾಪಕವಾಗಿ ದಾಳಿಗಳು ನೆಡೆಯುತ್ತಿವೆ.

ಆ ದಾಳಿಗಳನ್ನು ಪಕ್ಷವು ಖಂಡಿಸುತ್ತೇದೆ ಹಾಗೂ ಯೂನಸ್​ ನೇತೃತ್ವದ ಹೊಸ ಸರ್ಕಾರದಲ್ಲಿ ಜಮಾತ್ ಸಂಘಟನೆಯ ಭಯೋತ್ಪಾದಕರು ಸ್ವತಂತ್ರವಾಗಿ ಓಡಾಡುತ್ತಿದ್ದಾರೆ,” ಎಂದು ಅವರು ಆರೋಪಿಸಿದರು. ಇನ್ನು ಹಸೀನಾ ಅವರ ಲಂಡನ್​ ಸಭೆಯ ಆಡಿಯೋ ರೆಕಾರ್ಡಿಂಗ್ ಅನ್ನು ಬಾಂಗ್ಲಾದೇಶ ಅವಾಮಿ ಲೀಗ್‌ ಮತ್ತು ಅದರ ವಿದ್ಯಾರ್ಥಿ ಸಂಘಟನೆಯ ಫೇಸ್‌ಬುಕ್ ಪುಟಗಳಲ್ಲಿ ಹಂಚಿಕೊಳ್ಳಲಾಗಿದೆ.

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಮಧ್ಯಂತರ ಆಡಳಿತ ಸರ್ಕಾರದ ವಿರುದಸ್ದ ತೀವ್ರ ದಾಳಿ ನಡೆಸಿದ್ದಾರೆ. ಬಾಂಗ್ಲಾದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ (Muhammad Yunus) ಅವರು ದೇಶದಲ್ಲಿ ಭಯೋತ್ಪಾದಕರು ಮತ್ತು ಮೂಲಭೂತವಾದಿಗಳಿಗೆ ಸಹಾಯವಾಗುವಂತೆ “ಫ್ಯಾಸಿಸ್ಟ್ ಆಡಳಿತ” ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾನುವಾರ ಲಂಡನ್‌ನಲ್ಲಿ (London) ಸಾಗರೋತ್ತರ ಅವಾಮಿ ಲೀಗ್ (Awami League) ಬೆಂಬಲಿಗರ ಸಭೆಯನ್ನುದ್ದೇಶಿಸಿ ಮಾತನಾಡಿದ ಹಸೀನಾ ಅವರು, ಬಾಂಗ್ಲಾದಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ನಡೆದ ಪ್ರಕ್ಷುಬ್ಧತೆಯ ಹಿಂದಿನ “ಮಾಸ್ಟರ್‌ಮೈಂಡ್” (Mastermind) ಯೂನಸ್ ಎಂದು ಆರೋಪಿಸಿ, ಬಾಂಗ್ಲಾದೇಶದ (Bangladesh) ಕಾನೂನಿನ ಕುಣಿಕೆಯಲ್ಲಿ ಯೂನಸ್​ ಮತ್ತು ಅವರ ಮಿತ್ರರನ್ನು ಸಿಲುಕಿಸುವುದಾಗಿ ಪ್ರತಿಜ್ಞೆ ಮಾಡಿದರು.

“ಬಾಂಗ್ಲಾದೇಶವು ಈಗ ಫ್ಯಾಸಿಸ್ಟ್ ಆಡಳಿತದ ಹಿಡಿತದಲ್ಲಿದೆ, ಅಲ್ಲಿ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅಳಿಸಿಹಾಕಲಾಗಿದ್ದು, ಬಡತನ ನಿರ್ಮೂಲನೆ ಮತ್ತು ಮೂಲಸೌಕರ್ಯ ಅಭಿವೃದ್ಧಿ, ಪ್ರಜಾಪ್ರಭುತ್ವದ ಬಲವರ್ಧನೆ ಸೇರಿದಂತೆ ನಮ್ಮ ಸರ್ಕಾರದ ಸಾಧನೆಗಳನ್ನು ಯೂನಸ್ ಅವರ ನಾಯಕತ್ವದಲ್ಲಿ ರದ್ದುಗೊಳಿಸಲಾಗಿದ್ದು, ಯೂನಸ್ ಅವರ ಸರ್ಕಾರವು ಭಯೋತ್ಪಾದಕರು ಮತ್ತು ಕ್ರಿಮಿನಲ್‌ಗಳಿಗೆ ಕ್ಷಮಾದಾನ ನೀಡುತ್ತಿದ್ದು, ಬೆಂಕಿ ಹಚ್ಚುವಿಕೆ ಮತ್ತು ಕೊಲೆಗಳಲ್ಲಿ ಭಾಗಿಯಾಗಿರುವವರಿಗೆ ಸಾಥ್​​ ನೀಡುತ್ತಿದ್ದಾರೆ ಎಂದು ಹಸೀನಾ ಆರೋಪಿಸಿದ್ದಾರೆ.

“ಬಾಂಗ್ಲಾದೇಶ ಸಂಸತ್ತಿನ ಮೇಲಿನ ದಾಳಿಗಳು ಮತ್ತು ಇತರ ದೌರ್ಜನ್ಯಗಳಿಗೆ ಕಾರಣರಾದವರು ಸೇರಿದಂತೆ ಶಿಕ್ಷೆಗೊಳಗಾದ ಅಪರಾಧಿಗಳು ಮತ್ತು ಭಯೋತ್ಪಾದಕರ ಬಿಡುಗಡೆಯು ಯೂನಸ್​​ ಸರ್ಕಾರದ ಸಹಭಾಗಿತ್ವವನ್ನು ಸಾಬೀತುಪಡಿಸುತ್ತದೆ” ಎಂದು ಅವರು ಆರೋಪಿಸಿದ್ದಾರು.

ಇನ್ನೊಂದೆಡೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸೋಮವಾರ ಢಾಕಾಗೆ ಭೇಟಿ ನೀಡಿ, ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದರು. ದೇಶದಲ್ಲಿ “ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜತಾಂತ್ರಿಕ ಆಸ್ತಿಗಳ ಮೇಲಿನ ದಾಳಿಯ ವಿಷಾದನೀಯ ಘಟನೆಗಳು” ಎಂದರು. ಕಳೆದ ಕೆಲವು ವಾರಗಳಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಘಟನೆಗಳು, ಹಾಗೆಯೇ ಬಾಂಗ್ಲಾದೇಶದ ಹಿಂದೂ ದೇವಾಲಯಗಳ ಮೇಲಿನ ದಾಳಿಗಳು ನವದೆಹಲಿಯಲ್ಲಿ ಬಲವಾದ ಕಳವಳಗಳನ್ನು ಉಂಟುಮಾಡಿವೆ ಎಂದರು.

ಆಗಸ್ಟ್ 5 ರಂದು, “ಸ್ಟೂಡೆಂಟ್ಸ್ ಅಗೇನ್ಸ್ಟ್ ಡಿಸ್ಕ್ರಿಮಿನೇಷನ್” ಎಂಬ ವಿದ್ಯಾರ್ಥ ಸಂಘಟನೆಗಳ ನೇತೃತ್ವದ ಕ್ರಾಂತಿಯು ಶೇಖ್ ಹಸೀನಾ ಅವರ 16 ವರ್ಷಗಳ ಆಡಳಿತವನ್ನು ಉರುಳಿಸುವಲ್ಲಿ ಯಶಸ್ವಿಯಾಗಿತ್ತು. ನಂತರ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿ, ಭಾರತಕ್ಕೆ ಬಂದಿಳಿದರು. ಮತ್ತು ಪ್ರಸ್ತುತ ಅವರು ಭಾರತ ಸರ್ಕಾರದ ಆಶ್ರಯದಲ್ಲಿಯೇ ಇದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GALWAN VALLEY IN LEH LADAKH:ಭರದ ಕಾರ್ಯಾಚರಣೆ.

Leh (Ladakh) News: ಭಾರತೀಯ ಸೇನೆ ಮತ್ತು ಸ್ಥಳೀಯ ಮಧ್ಯಸ್ಥಗಾರರ ಸಹಯೋಗದಲ್ಲಿ ಅಧಿಕಾರಿಗಳು ಕಣಿವೆಯಲ್ಲಿ ಈ ಯೋಜನೆಗೆ ಮುಂದಾಗಿದ್ದು, ಸ್ಥಳೀಯ ಪ್ರವಾಸಿಗ ಆಕರ್ಷಿಣೀಯ ತಾಣವಾಗಿ ರೂಪಿಸುವ...

PINK SALT BENEFITS FOR HEALTH : ಪಿಂಕ್ ಉಪ್ಪಿನಿಂದ ಆರೋಗ್ಯಕ್ಕೆ ಹಲವು ಪ್ರಯೋಜನ

Pink Salt Benefits for Health News: ಹಿಮಾಲಯನ್ ಪಿಂಕ್ ರಾಕ್ SALT ಅಥವಾ ಪಿಂಕ್ ಉಪ್ಪು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ದೊರೆಯುತ್ತವೆ...

MACHINERY CAPITAL : ಕರ್ನಾಟಕವು ದೇಶದ ಯಂತ್ರೋಪಕರಣಗಳ ರಾಜಧಾನಿ

Bangalore News: ಭಾರತದ MACHINERY ಉದ್ಯಮದಲ್ಲಿ ಕರ್ನಾಟಕ ಶೇ.50ರಷ್ಟು ಉತ್ಪಾದನೆ ಪಾಲು ಹೊಂದಿದೆ ಎಂದು ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ತಿಳಿಸಿದರು.MACHINERY ಕ್ಷೇತ್ರವು ಉತ್ಪಾದನಾ ವಲಯಕ್ಕೆ ಬಹುದೊಡ್ಡ...

SHAH JAHAN URUS: ಪ್ರವಾಸಿಗರಿಗೆ ಉಚಿತ ಪ್ರವೇಶ, ಬಿಗಿ ಭದ್ರತೆ.

Agra (Uttar Pradesh) News : ಉಚಿತ ಅಷ್ಟೇ ಅಲ್ಲ, ಪ್ರವಾಸಿಗರು ಚಕ್ರವರ್ತಿ ಷಹಜಹಾನ್ ಮತ್ತು ಬೇಗಂ ಮುಮ್ತಾಜ್ ಅವರ ನಿಜವಾದ ಸಮಾಧಿಗಳನ್ನು ವೀಕ್ಷಿಸಬಹುದಾಗಿದೆ.ಜನವರಿ 26,...