ಜನತೆಗೆ ಮೂಲ ಸೌಕರ್ಯಗಳನ್ನು ಅವರ ಮೂಲ ಆದಾಯ, ಶಾಲೆ, ಆಸ್ಪತ್ರೆ ಸೌಲಭ್ಯ ಒದಗಿಸಲು ಫುಟ್ ಬಾಲ್ ಆಟಗಾರ ಸಾಡಿಯೊ ಮಾನೆ ಅವರು ಹಳ್ಳಿಯನ್ನು ನಿರ್ಮಿಸಿದ್ದಾರೆ.
ನನಗೆ ಹತ್ತು ಫೆರಾರಿಗಳು, 20 ವಜ್ರದ ಗಡಿಯಾರಗಳು, ಎರಡು ಜೆಟ್ ವಿಮಾನಗಳು ಏಕೆ ಬೇಕು? ಅದರಿಂದ ಜನರಿಗೆ ಏನು ಉಪಯೋಗ, ನಾನು ಹಸಿವಿನಿಂದ ಬಳಲುತ್ತಿದ್ದೆ, ಹೊಲಗಳಲ್ಲಿ ಕೆಲಸ ಮಾಡುತ್ತಿದ್ದೆ.
ಕ್ರೀಡಾ ತಾರೆಯೊಬ್ಬರು ಇದನ್ನು ಹೇಳುವುದು ಮಾತ್ರವಲ್ಲ, ಆ ರೀತಿ ಬದುಕಿ ತೋರಿಸಿದ್ದಾರೆ. ಅವರು ಮತ್ಯಾರೋ ಅಲ್ಲ, ಸಾಡಿಯೊ ಮಾನೆ
ಸೆನೆಗಲೀಸ್ ಫುಟ್ಬಾಲ್ ಸೂಪರ್‌ಸ್ಟಾರ್ ಬಡತನದಲ್ಲಿ ಹುಟ್ಟಿ ಬೆಳೆದು ನಂತರ ತನ್ನ ಹಳ್ಳಿಯನ್ನು ಯಾವ ರೀತಿ ಪರಿವರ್ತಿಸಿದ ಎಂಬ ರೋಚಕ ಕಥೆಯಿದು.
ಆಫ್ರಿಕಾದ ಬಡ ಪ್ರದೇಶಗಳಲ್ಲಿ ಒಂದಾದ ದ್ರಾಕ್ಷಿಹಣ್ಣಿನ ತೋಟದ ಮಧ್ಯೆ ಹುಟ್ಟಿಕೊಂಡ ಕನಸು ಈಗ ಅಂತಾರಾಷ್ಟ್ರೀಯ ವೃತ್ತಿಜೀವನವಾಗಿ ರೂಪಾಂತರಗೊಳ್ಳುವಲ್ಲಿಯವರೆಗೆ ಬೆಳೆಯಿತು. ಮಾನೆ ಅವರು 2019 ರಲ್ಲಿ ಚಾಂಪಿಯನ್ಸ್ ಲೀಗ್ ನ್ನು ಗೆದ್ದು, ತನ್ನ ಹಳ್ಳಿಯಾದ ಬಂಬಾಲಿಯಲ್ಲಿ ಬೆಳಗಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ.
ಮಾನೆ ತನ್ನ ಗಳಿಕೆಯ ಒಂದು ಮಿಲಿಯನ್ ಪೌಂಡ್‌ಗಳನ್ನು ಬಂಬಾಲಿಯಾಗೆ ಮೀಸಲಿಡುವ ಮೂಲಕ ಹಳ್ಳಿಯನ್ನು ಬೆಳಗಿಸಿದ್ದಾರೆ. ಶಾಲೆಗಳ ನಿರ್ಮಾಣಕ್ಕೆ 3 ಲಕ್ಷ ಡಾಲರ್, ಆಸ್ಪತ್ರೆಗಳ ನಿರ್ಮಾಣಕ್ಕೆ 6 ಲಕ್ಷ ಡಾಲರ್ ಹಣ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಇಂಟರ್‌ನೆಟ್ ಸೌಲಭ್ಯವನ್ನೂ ಕಲ್ಪಿಸಿದ್ದಾರೆ.
ಏಳನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಇವರು ಊರಿನಲ್ಲಿ ಅಂಚೆ ಕಚೇರಿ, ಪೆಟ್ರೋಲ್ ಬಂಕ್, ಮಸೀದಿಯನ್ನು ಕಟ್ಟಿಸಿದ್ದಾರೆ. ಪ್ರಸಿದ್ಧ ಸಾರ್ವಜನಿಕ ಮೂಲ ಆಧಾಯ ಯೋಜನೆ ಅನುಷ್ಠಾನಗೊಂಡು ಪ್ರತಿ ತಿಂಗಳು ಬಡ ಕುಟುಂಬಗಳಿಗೆ 76 ಡಾಲರ್ ಧನ ಸಹಾಯ ಮಾಡುತ್ತಾರೆ.