ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಗರದ ಹೊರವಲಯದಲ್ಲಿರುವ ಕಣಿಮಿಣಿಕೆಯಲ್ಲಿ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. 200 ಸಾರ್ವಜನಿಕರು ಫ್ಲಾಟ್ ಹಂಚಿಕೆ ಪತ್ರವನ್ನು ಪಡೆದಿದ್ದಾರೆ.
ಕಣಿಮಿಣಿಕೆ ವಸತಿ ಯೋಜನೆ ಬೆಂಗಳೂರು- ಮೈಸೂರು ರಸ್ತೆಗೆ ಸಮೀಪವಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಕಣಿಮಿಣಿಕೆ 2 ಬಿಹೆಚ್ಕೆ ಫ್ಲಾಟ್ ದರ 25 ಲಕ್ಷದಿಂದ 30 ಲಕ್ಷ, 3 ಬಿಹೆಚ್ಕೆ ಫ್ಲಾಟ್ ದರ 40 ಲಕ್ಷದಿಂದ 64 ಲಕ್ಷ ನಿಗದಿಪಡಿಸಲಾಗಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೌತ್ ಇಂಡಿಯನ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಹೆಚ್ಡಿಎಫ್ಸಿ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ಗಳ ಪ್ರತಿನಿಧಿಗಳು ಸ್ಥಳದಲ್ಲಿ ಹಾಜರಿದ್ದು ಲೋನ್ ಪ್ರಕ್ರಿಯೆಗಳಿಗೆ ನೆರವಾದರು.
ಶನಿವಾರ ನಡೆದ ಫ್ಲಾಟ್ ಮೇಳದಲ್ಲಿ ಸುಮಾರು 600ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಇದರಲ್ಲಿ ಸುಮಾರು 200 ಸಾರ್ವಜನಿಕರು ಫ್ಲಾಟ್ನ ಪ್ರಾರಂಭಿಕ ಠೇವಣಿಯನ್ನು ಸ್ಥಳದಲ್ಲಿಯೇ ಪಾವತಿಸಿ, ಹಂಚಿಕೆ ಪತ್ರವನ್ನು ಪಡೆದಿದ್ದಾರೆ. 50 ಮಂದಿ ಚೆಕ್ ಅನ್ನು ನೀಡಿದ್ದು, ಸೋಮವಾರ ಆರ್ಟಿಜಿಎಸ್ ಮೂಲಕ ಸಂಪೂರ್ಣ ಹಣ ಪಾವತಿಸಿದ ನಂತರ ಹಂಚಿಕೆ ಪತ್ರವನ್ನು ನೀಡಲಾಗುವುದು. ಪ್ರಸ್ತುತ ಫ್ಲಾಟ್ನ ದರವು ಹಳೆಯದಾಗಿದ್ದು, ಸದ್ಯದಲ್ಲಿಯೇ ಫ್ಲಾಟ್ನ ಮೊತ್ತವನ್ನು ಪರಿಷ್ಕರಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಗರದ ಹೊರವಲಯದಲ್ಲಿರುವ ಕಣಿಮಿಣಿಕೆಯಲ್ಲಿ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರೆತಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರ್ಥಿಕ ಸದಸ್ಯ ಡಾ.ಎ.ಲೋಕೇಶ್, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸಮೂರ್ತಿ, ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಇಂಬವಳ್ಳಿ, ಬಸವರೆಡ್ಡಿ ಹಾಗೂ ಇತರ ಅಧಿಕಾರಿಗಳು ಮೇಳದಲ್ಲಿ ಉಪಸ್ಥಿತರಿದ್ದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now