ಬೆಂಗಳೂರು: ಬೆಳಗಾವಿ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಇಲ್ಲಿನ ವಿಧಾನಸಭೆ ಸಭಾಂಗಣದಲ್ಲಿ ಹೊಸ ಸಭಾಧ್ಯಕ್ಷರ ಪೀಠ ಅಳವಡಿಸಲಾಗಿದೆ. ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿ ಹೊಸ ಸಭಾಧ್ಯಕ್ಷರ ಪೀಠವನ್ನು ಅಳವಡಿಸಲಾಗಿದೆ. 45 ಲಕ್ಷ ರೂ. ಮೌಲ್ಯದ ಪೀಠ ಇದಾಗಿದೆ.
ಪೀಠದಲ್ಲಿ ಗಂಡ ಬೇರುಂಡ, ಊಳುವ ರೈತ, ಚರಕ ಸೇರಿ ವಿವಿಧ ಕುಸುರಿಗಳೊಂದಿಗೆ ಅದ್ಧೂರಿ ಟಚ್ ಕೊಡಲಾಗಿದೆ. ಸ್ಪೀಕರ್ ಯು. ಟಿ. ಖಾದರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿ ಅಧಿಕಾರಿಗಳು ವಿಧಾನಸಭೆ ಸಭಾಂಗಣದಲ್ಲಿನ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಹೊಸ ಸಭಾಧ್ಯಕ್ಷರ ಪೀಠವನ್ನು ವೀಕ್ಷಿಸಿದರು.
ಬೆಂಗಳೂರು ವಿಧಾನಸೌಧದಲ್ಲಿನ ಸಭಾಧ್ಯಕ್ಷರ ಪೀಠದ ಮಾದರಿಯಲ್ಲೇ ಸುವರ್ಣಸೌಧದಲ್ಲಿ ಸಭಾಧ್ಯಕ್ಷರ ಪೀಠವನ್ನು ಸಿದ್ಧಪಡಿಸಲಾಗಿದೆ. ಪೀಠವನ್ನು ರೋಸ್ ವುಡ್ನಲ್ಲಿ ಮಾಡಲಾಗಿದೆ. ಈ ವಿಲಾಸಿ ಪೀಠಕ್ಕೆ ಸುಮಾರು 45 ಲಕ್ಷ ರೂ. ವೆಚ್ಚವಾಗಿದೆ. ಈ ಮುಂಚೆ ಸಾಮಾನ್ಯ ಮರದಿಂದ ಸರಳವಾಗಿ ಪೀಠವನ್ನು ಸಿದ್ಧಪಡಿಸಲಾಗಿತ್ತು. ಇದೀಗ ವಿಲಾಸಿ, ರೋಸ್ ವುಡ್ನಿಂದ ಪೀಠವನ್ನು ರೆಡಿ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ಸ್ಪೀಕರ್ ಯು. ಟಿ. ಖಾದರ್, ”ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಮೇರೆಗೆ ವಿಧಾನಸಭೆ ಸಭಾಂಗಣದ ಸಭಾಧ್ಯಕ್ಷರ ಪೀಠವನ್ನು ಬೆಂಗಳೂರು ಮಾದರಿಯಲ್ಲಿ ಸಿದ್ಧಪಡಿಸಿದ್ದೇವೆ. ಪೀಠವನ್ನು ರೋಸ್ ವುಡ್ನಲ್ಲಿ ಮಾಡಲಾಗಿದೆ” ಎಂದು ತಿಳಿಸಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now