ಬೆಳಗಾವಿ: ಬೆಳಗಾವಿ-ಬೆಂಗಳೂರು ಮಾರ್ಗವಾಗಿ ಪ್ರತಿದಿನ ಬೆಳಗ್ಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ತನ್ನ ಹಾರಾಟವನ್ನು ಪ್ರಯಾಣಿಕರ ದಟ್ಟಣೆಯ ನಡುವೆಯೂ ಅ. 27ರಿಂದ ಸ್ಥಗಿತಗೊಳಿಸುತ್ತಿರುವುದು ಚರ್ಚೆಗೆ ಗುರಿಯಾಗಿದೆ. ರಾಜ್ಯ ರಾಜಧಾನಿಗೆ ತೆರಳಿ ಒಂದೇ ದಿನದಲ್ಲಿ ತುರ್ತು ಕೆಲಸ ಮುಗಿಸಿಕೊಂಡು ವಾಪಸ್ಸಾಗಲು ಆಸರೆಯಾಗಿದ್ದ, ಬೆಳಗಾವಿ-ಬೆಂಗಳೂರು ನಡುವಿನ ನೇರ ಇಂಡಿಗೋ ವಿಮಾನಯಾನ ಸ್ಥಗಿತ.
ಗೋವಾ, ಮಹಾರಾಷ್ಟ್ರದ ಗಡಿ ಹಂಚಿಕೊಂಡಿರುವ ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ ಬೆಂಗಳೂರಿಗೆ ತೆರಳಿ ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಸಾಧಿಸಲು ಅತ್ಯಂತ ಅನುಕೂಲ.
ಇಂಡಿಗೋ ವಿಮಾನ ಸಂಚಾರವನ್ನು ಮುಂದಿನ ವಿಂಟರ್ ಶೆಡ್ಯೂಲ್‌ನಿಂದ ಕೈಬಿಟ್ಟಿರುವುದು ಬೆಳಗಾವಿಗರ ಕಣ್ಣು ಕೆಂಪಾಗಿದೆ.
ಸ್ಟಾರ್ ಏರ್ ಕಂಪೆನಿ ಬೆಳಗಾವಿಯಿಂದ ನೇರವಾಗಿ ಸೂರತ್, ಇಂದೋರ್, ಜೈಪುರ, ನಾಸಿಕ್, ಕಿಶನ್‌ಘರ್ ಹಾಗೂ ಸ್ಪೆತ್ರೖಸ್‌ಜೆಟ್ ಕಂಪೆನಿ ದೆಹಲಿ, ಹೈದ್ರಾಬಾದ್, ಬೆಂಗಳೂರು ಮತ್ತು ಮುಂಬೈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವಿಮಾನಗಳನ್ನು ಸ್ಥಗಿತ.
ವೃತ್ತಿಪರ ವ್ಯಾಪಾರಸ್ಥರು ಸೇರಿದಂತೆ ಹಲವು ವರ್ಗದ ಪ್ರಯಾಣಿಕರು ತೊಂದರೆ ಪಡುವಂತಾಗಿದ್ದು, ಗೋವಾ ಅಥವಾ ಹುಬ್ಬಳ್ಳಿ ಸೇರಿದಂತೆ ಅನ್ಯ ನಗರದ ವಿಮಾನ ನಿಲ್ದಾಣಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇಂಡಿಗೋ ಸಂಸ್ಥೆ ಬೆಳಗಾವಿ-ಬೆಂಗಳೂರು ನಡುವೆ ಸಂಜೆ ಅವಧಿಯ ನೇರ ವಿಮಾನಯಾನ ಸೇವೆಯನ್ನು 2019ರ ಸೆ. 8ರಂದು ಆರಂಭಿಸಿತ್ತು. ಪ್ರಯಾಣಿಕರ ಬೇಡಿಕೆ ಮೇರೆಗೆ ಹೆಚ್ಚುವರಿ ನಗರಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ 2022ರ ಅ.30ರಂದು ಬೆಂಗಳೂರು-ಬೆಳಗಾವಿ ನಡುವೆ ನೇರ ವಿಮಾನಯಾನ ಸೇವೆ ಆರಂಭಿಸಿತ್ತು.
ನೆರೆಯ ಜಿಲ್ಲೆಗಳಿಗೆ ಹೋಲಿಸಿದರೆ, ಬೆಳಗಾವಿ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ತಡೆಯೊಡ್ಡಲೆಂದೇ ವಂದೇಭಾರತ್ ರೈಲು ವಿಸ್ತರಣೆಗೆ ಅಡ್ಡಗಾಲು ಹಾಕಿದ್ದಲ್ಲದೆ, ಈಗ ವಿಮಾನಯಾನದ ಸಂಪರ್ಕ ಜಾಲದ ಬಲ ಕುಗ್ಗಿಸಲು ಅಧಿಕಾರಿಗಳ ಮೇಲೆ ಕೆಲ ಜನಪ್ರತಿನಿಧಿಗಳು ಒತ್ತಡ ಹೇರುತ್ತಿದ್ದಾರೆ.
ಇಂಡಿಗೋ ಸಂಸ್ಥೆಯು ಬೆಳಗ್ಗಿನ ಬೆಳಗಾವಿ-ಬೆಂಗಳೂರು ನಡುವಿನ ಹಾರಾಟವನ್ನು ಸ್ಥಗಿತಗೊಳಿಸಿದೆ ಎನ್ನುವುದು ಶ್ಲಾಘನೀಯ.
ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ಸೌಲಭ್ಯ ಒದಗಿಸುವ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಪತ್ರ ಬರೆಯಲಾಗಿದೆ. ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳನ್ನು ಭೇಟಿ ಮಾಡಿ ಬೆಳಗಾವಿ-ಬೆಂಗಳೂರು ನಡುವಿನ ಬೆಳಗಿನ ಅವಧಿಯ ನೇರ ವಿಮಾನ ಮುಂದುವರಿಸುವಂತೆ ತಿಳಿಸುತ್ತೇನೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ತಿಳಿಸಿದ್ದಾರೆ.