ಬೆಳಗಾವಿ : 2024 ರ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾಷಣವು ಕರ್ನಾಟಕದ ನಿರ್ಣಾಯಕ ಉಪಕ್ರಮಗಳು ಮತ್ತು ಭವಿಷ್ಯದ ಯೋಜನೆಗಳನ್ನು ಎತ್ತಿ ತೋರಿಸಿದೆ.
ಅಭಿವೃದ್ಧಿ ಉಪಕ್ರಮಗಳು: ಉತ್ತರ ಕರ್ನಾಟಕಕ್ಕೆ ಮೂಲಸೌಕರ್ಯ ಯೋಜನೆಗಳಿಗೆ ಒತ್ತು ನೀಡುವುದು, ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆಗಳು, ನೀರಾವರಿ ಮತ್ತು ನಗರಾಭಿವೃದ್ಧಿಗೆ ಒತ್ತು ನೀಡುವುದು.
ರೈತ ಕಲ್ಯಾಣ: ಕೃಷಿಯನ್ನು ಬೆಂಬಲಿಸಲು ಹೊಸ ಯೋಜನೆಗಳು, ಬೆಳೆಗಳಿಗೆ ಸಹಾಯಧನ, ನೀರಾವರಿ ಸೌಲಭ್ಯಗಳು ಮತ್ತು ರೈತರ ಸಾಲವನ್ನು ನಿಭಾಯಿಸುವ ಕ್ರಮಗಳು.
ಶಿಕ್ಷಣ ಮತ್ತು ಆರೋಗ್ಯ: ಗ್ರಾಮೀಣ ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಸುಧಾರಿತ ಸೌಲಭ್ಯಗಳ ಘೋಷಣೆಗಳು, ಜೊತೆಗೆ ಈ ವಲಯಗಳಿಗೆ ವರ್ಧಿತ ಬಜೆಟ್ ಹಂಚಿಕೆಗಳು.
ಪ್ರಾದೇಶಿಕ ಸಬಲೀಕರಣ: ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯ ಬೇಡಿಕೆಗಳನ್ನು ಪರಿಹರಿಸುವುದು, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಗಮನಹರಿಸುವುದು.
ಸೌಹಾರ್ದತೆಗೆ ಬದ್ಧತೆ: ರಾಜ್ಯದಾದ್ಯಂತ ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆ ಮತ್ತು ಕೋಮು ಸೌಹಾರ್ದತೆ ಕಾಪಾಡುವಲ್ಲಿ ಸರ್ಕಾರದ ಗಮನವನ್ನು ಪುನರುಚ್ಚರಿಸುವುದು.
ಕರ್ನಾಟಕದ ವಿಶೇಷವಾಗಿ ಉತ್ತರ ಪ್ರದೇಶದ ನಾಗರಿಕರ ಆಕಾಂಕ್ಷೆಗಳನ್ನು ಪರಿಹರಿಸಲು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಮಹತ್ವವನ್ನು ಸಿಎಂ ಸಿದ್ದರಾಮಯ್ಯ ಒತ್ತಿ ಹೇಳಿದರು.
ಅಶೋಕ್ , ಅಶ್ವತ್ಥ ನಾರಾಯಣ, ಯತ್ನಾಳ್… ನಾವೆಲ್ಲಾ ಶೂದ್ರರು ಎಂದು ಮತ್ತೆ ಮತ್ತೆ ಒತ್ತಿ ಹೇಳಿದರು. ಈ ವೇಳೆ ಎದ್ದು ನಿಂತ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ ‘ನಾವು ಶೂದ್ರ ರಾಗಿರುವುದಕ್ಕೆ ಮೀಸಲಾತಿ(ಪಂಚಮಸಾಲಿ)ಕೇಳುತ್ತಿದ್ದೇವೆ’ ಎಂದು ಸಿಟ್ಟಿನಿಂದ ಉತ್ತರಿಸಿದರು.
”ಜಾತಿ ಆಧಾರದ ಮೇಲೇನೆ ಶ್ರೇಷ್ಠತೆ ಕಳಪೆ ತೀರ್ಮಾನವಾಯಿತು. ಬಸವಾದಿ ಶರಣರು ಈ ನಂಬಿಕೆ ಸರಿಯಿಲ್ಲ ಎಂದಿದ್ದರು. ಪ್ರತಿಯೊಬ್ಬರೂ ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟುತ್ತಾರೆ , ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಜಾತಿ ವ್ಯವಸ್ಥೆಯ ಪರಿಣಾಮವಾಗಿ ಅಲ್ಪ ಮಾನವರಾಗಿಬಿಡುತ್ತಾರೆ ಎಂದು ಕುವೆಂಪು ಅವರು ಹೇಳಿದ್ದರು.
ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದರು ಎಂದು ಸಿಎಂ ಹೇಳಿದರು. ಈ ವೇಳೆ ವಿಪಕ್ಷ ನಾಯಕ ಆರ್. ಆಶೋಕ್ ಅವರು ”ಅದು ನಿಮಗೇ ಹೇಳಿದ್ದು, ಸರ್… ಅಹಿಂದ ಎಲ್ಲ ಮಾಡಬೇಡಿ ಎಂದು ನಿಮಗೆ ಹೇಳಿದ್ದು” ಎಂದು ಕಾಲೆಳೆದರು.
‘ಬಸವಣ್ಣ ಅವರು ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ. ನಿನ್ನ ಮನೆಯ ಮಗನೆದೆನಿಸಯ್ಯ ಎಂದು ಬಸವಣ್ಣ ಹೇಳಿದ್ದರು. ಪಟ್ಟ ಭದ್ರ ಹಿತಾಸಕ್ತಿಗಳು ಮಾತ್ರ ಜಾತಿ ವ್ಯವಸ್ಥೆಯ ಪರವಾಗಿ ನಿಂತಿದ್ದಾರೆ’ ಎಂದು ಸಿಎಂ ಹೇಳಿದರು.
‘ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ನಾವು ಸರಕಾರಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಾವೇನು ವಿಧಾಸಭೆ, ಪಾರ್ಲಿಮೆಂಟ್ ಎಂದು ಕರೆಯುತ್ತೇವಲ್ಲ, ಬಸವಾದಿ ಶರಣರ ಕಾಲದಲ್ಲಿ ಅದು ಅನುಭವ ಮಂಟಪವಾಗಿತ್ತು. ಅದರ ಅಧ್ಯಕ್ಷರಾಗಿದ್ದವರು ಅತ್ಯಂತ ತಳ ಸಮುದಾಯಕ್ಕೆ ಸೇರಿದ್ದ, ಮಹಾನ್ ಜ್ಞಾನಿ ಅಲ್ಲಮ ಪ್ರಭು ಎಂದು ಸಿಎಂ ಹೇಳಿದರು.