WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Benefits of Plant Based Foods News:
ಲಂಡನ್‌ನ ಕಿಂಗ್ಸ್ ಕಾಲೇಜಿನ ಅಧ್ಯಯನವು, PLANT ಆಧಾರಿತ ಆಹಾರ ಪದಾರ್ಥಗಳು ಚಯಾಪಚಯ ಕ್ರಿಯೆ ಹೆಚ್ಚಿಸುತ್ತವೆ. ಇದು ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದೆ.30ನೇ ವಯಸ್ಸಿನಲ್ಲಿ ಅಧಿಕ ರಕ್ತದೊತ್ತಡ, ಮಧ್ಯಮ ವಯಸ್ಸಿನಲ್ಲಿ ಹೃದಯಾಘಾತ, ಸೋಂಕುಗಳು, ಉರಿಯೂತ ಮತ್ತು ಕ್ಯಾನ್ಸರ್‌ಗಳು ಹೆಚ್ಚುತ್ತಿರುವುದರಿಂದ, ತಜ್ಞರು ಈಗ ಹಸಿರು ಸೊಪ್ಪು, ತರಕಾರಿ ಆಹಾರವು ಅತ್ಯುತ್ತಮ ಔಷಧ ಎಂದು ವೈದ್ಯರು ತಿಳಿಸುತ್ತಾರೆ.
What is the truth behind green leafy vegetables?:ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯು, ಸಸ್ಯಾಹಾರಿ ಆಹಾರದ ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ. ಈ ಅಧ್ಯಯನವು 200 ಆರೋಗ್ಯವಂತ ವಯಸ್ಕರನ್ನು ಒಳಗೊಂಡಿತ್ತು.
ಅವರ ಆಹಾರ ಸೇವನೆ ಹಾಗೂ ಚಯಾಪಚಯ ಕ್ರಿಯೆಯ ಮಟ್ಟವನ್ನು ವಿಶ್ಲೇಷಿಸಿದೆ.ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ನಿಯಮಿತವಾಗಿ ಸೇವಿಸುವ ದೇಹದಲ್ಲಿ ಪ್ರಯೋಜನಕಾರಿ ಸೂಕ್ಷ್ಮ ಅಣುಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಈ ಸೂಕ್ಷ್ಮ ಅಣುಗಳು ಅಥವಾ ಚಯಾಪಚಯ ಕ್ರಿಯೆಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಹಾಗೂ ಉರಿಯೂತ ಕಡಿಮೆ ಮಾಡುವಲ್ಲಿ ಹಾಗೂ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
RESEARCH RESULTS?: ಜೊತೆಗೆ ಅವರಿಗೆ ಭವಿಷ್ಯದ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಿರುತ್ತದೆ.ಈ ಸೂಕ್ಷ್ಮ ಅಣುಗಳ ಕಡಿಮೆ ಮಟ್ಟವನ್ನು ಹೊಂದಿರುವವರು ನೋಡಲು ಆರೋಗ್ಯವಾಗಿ ಕಾಣಿಸಿಕೊಂಡರು. ಆದರೆ, ಕಳಪೆ ಚಯಾಪಚಯ ಕ್ರಿಯೆಯನ್ನು ಹೊಂದಿರುತ್ತಾರೆ.
Eat green leafy vegetables, stay healthy:ರೋಗಗಳನ್ನು ತಡೆಗಟ್ಟಬಹುದು, ದೀರ್ಘಾಯುಷ್ಯ ಪಡೆಯಬಹುದು. ಸಸ್ಯಾಧಾರಿತ ಪೋಷಣೆಗೆ ಆದ್ಯತೆ ನೀಡಿ, ಸಂಪೂರ್ಣ ಆಹಾರವನ್ನು ಅಳವಡಿಸಿಕೊಳ್ಳಿ ಮತ್ತು ಪ್ರಕೃತಿಯೇ ನಿಮ್ಮ ಔಷಧಿಯಾಗಿರಲಿ ಎಂದು ತಜ್ಞರು ತಿಳಿಸುತ್ತಾರೆ. ಹಸಿರು ಸೊಪ್ಪು, ತರಕಾರಿ ಅಂದ್ರೆ, PLANT ಆಧಾರಿತ ಆಹಾರ ಪದಾರ್ಥಗಳಿಂದ ನಿಮ್ಮ ಆರೋಗ್ಯವನ್ನು ಪರಿವರ್ತಿಸಬಹುದು.
Important Note to Readers:ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನು ಓದಿರಿ :Amla, A Powerhouse Of Medicinal Properties