ಬೆಂಗಳೂರು: ಬೆಂಗಳೂರು ಉಪನಗರ ರೈಲ್ವೆ ಯೋಜನೆಯ (ಬಿಎಸ್‌ಆರ್‌ಪಿ) 2ನೇ ಹಂತ 142 ಕಿಲೋಮೀಟರ್ ಮಾತ್ರ ಕ್ರಮಿಸುವ ಸಾಧ್ಯತೆಯಿದೆ.
ಈ ಸಂಬಂಧ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲು ಯೋಜನೆಯನ್ನು ಅನುಷ್ಟಾನಗೊಳಿಸುತ್ತಿರುವ ರೈಲು ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ ಕರ್ನಾಟಕ (ಕೆ-ರೈಡ್) ಗೆ ಸೂಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ವಂಚನೆ ಮಾಡಿದ ಬ್ಯಾಂಕ್ ಸಿಬ್ಬಂದಿಯೂ ಸೇರಿ 14 ಜನರು ; 74 ಕೋಟಿ ರೂಪಾಯಿಗಳು.!
ಕಳೆದ ವಾರ ವಿಧಾನಸೌಧದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಅವರು, ರೈಲ್ವೆ ಮತ್ತು ಕೆ-ರೈಡ್ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೆ-ರೈಡ್‌ನ ಉನ್ನತ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದರು.
ಭವಿಷ್ಯದಲ್ಲಿ ಬೆಂಗಳೂರು ವಿಭಾಗೀಯ ವರ್ತುಲ ರೈಲು ಮಾರ್ಗ ನಿರೀಕ್ಷೆ ಮತ್ತು ಸದ್ಯ ನಾಲ್ಕು ಹಾಗೂ ಜೋಡಿ ಮಾರ್ಗದ ಯೋಜನೆ ನಡೆಯುತ್ತಿರುವುದರಿಂದ ಈ ಹಿಂದೆ ಪ್ರಸ್ತಾಪಿಸಿದಂತೆ 452ಕಿ. ಮೀ ವ್ಯಾಪ್ತಿಯ ಉಪನಗರ ರೈಲಿನ ಅಗತ್ಯವಿಲ್ಲ ಎಂದು ತೀರ್ಮಾನಿಸಲಾಗಿದೆ. ರೈಲ್ವೆ ಸಂಪರ್ಕ ಇಲ್ಲದ ಕಡೆಗಳಲ್ಲಿ ಉಪ ನಗರ ರೈಲು ಯೋಜನೆ ವಿಸ್ತರಿಸಲು ಸೂಚಿಸಲಾಗಿದೆ ಎಂದು ಕೆ-ರೈಡ್ ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಕೊಹ್ಲಿಗೆ ಸಿಕ್ಕಷ್ಟು ಅವಕಾಶ ಕೆ.ಎಲ್.ರಾಹುಲ್‌ಗೆ ಸಿಗದಿರಬಹುದು. 2ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ.!
ಕಳೆದ ವರ್ಷದ ಆರಂಭದಲ್ಲಿ K-RIDE ಹಂತದಲ್ಲಿ 452km ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದು 148.17 ಕಿ. ಮೀನ ಮೊದಲನೇ ಹಂತದ ಯೋಜನೆಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ವಿಸ್ತರಿಸುತ್ತದೆ. ಇದು ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರದಿಂದ ಕೋಲಾರ, ಚಿಕ್ಕಬಾಣಾವರದಿಂದ ತುಮಕೂರು, ಚಿಕ್ಕಬಾಣಾವರದಿಂದ ಮಾಗಡಿ, ಕೆಂಗೇರಿಯಿಂದ ಮೈಸೂರು, ವೈಟ್ ಫೀಲ್ಡ್ ನಿಂದ ಬಂಗಾರಪೇಟೆ; ಹೀಲಲಿಗೆಯಿಂದ ಹೊಸೂರು, ರಾಜಾನುಕುಂಟೆಯಿಂದ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುತಿತ್ತು. ಆದಾಗ್ಯೂ ನವೆಂಬರ್‌ನಲ್ಲಿ ಕೆ-ರೈಡ್‌ನಿಂದ ಪೂರ್ವ ಕಾರ್ಯಸಾಧ್ಯತೆ ಅಧ್ಯಯನ ನಡೆಸುವ ಮನವಿಯನ್ನು ನೈರುತ್ಯ ರೈಲ್ವೆ ತಿರಸ್ಕರಿಸಿತ್ತು.
142 ಕಿ.ಮೀ ಮಾತ್ರ ರೈಲು ಚಲಿಸುತ್ತದೆ ಎಂದು ಅಧಿಕಾರಿ ನಿರ್ದಿಷ್ಟಪಡಿಸಿದ್ದಾರೆ: ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ 18 ಕಿಮೀ, ಚಿಕ್ಕಬಾಣಾವರದಿಂದ ದಬ್ಬಾಸ್ ಪೇಟೆ 36 ಕಿ. ಮೀ. ಚಿಕ್ಕಬಾಣಾವರದಿಂದ ಮಾಗಡಿ ರಸ್ತೆ 45ಕಿಮೀ; ಹೀಲಲಿಗೆಯಿಂದ ಆನೇಕಲ್ ರಸ್ತೆ- 24ಕಿಮೀ, ರಾಜಾನುಕುಂಟೆಯಿಂದ ಓಡೇರಹಳ್ಳಿ – 8 ಕಿ.ಮೀ, ಕೆಂಗೇರಿಯಿಂದ ಹೆಜ್ಜಾಲ-11ಕಿಮೀ. ಇರಲಿದೆ. ಇವುಗಳು ಸದ್ಯ ಅಸ್ತಿತ್ವದಲ್ಲಿರುವ ಉಪನಗರ ರೈಲಿನ ಸಣ್ಣ ವಿಸ್ತರಿತ ಮಾರ್ಗಗಳಾಗಿವೆ ಆದ್ದರಿಂದ ಇಂದು ಮುಂಬರುವ ಹೊರ ವರ್ತುಲ ರೈಲು ಯೋಜನೆಗೆ ಸೇರಲಿದೆ. K-RIDE ಶೀಘ್ರದಲ್ಲೇ ರೈಲ್ವೆಗೆ ಈ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಿ ಅವರ ಒಪ್ಪಿಗೆ ಪಡೆಯಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : 5 ಕೋಟಿ ರೂ.ವೆಚ್ಚದಲ್ಲಿ ಕಾವೇರಿಗೆ ಆರತಿ ಯೋಜನೆ ; ದಸರಾ ಆರಂಭಕ್ಕೆ ಸರ್ಕಾರ ಚಿಂತನೆ..!
ಇತರ ರೈಲ್ವೆ ಯೋಜನೆಗಳಿಂದಾಗಿ ಮೂಲ ಹಂತ-2 ಯೋಜನೆ ಅನಗತ್ಯವಾಗಿದೆ ಎಂದು ನಾವು ನೈರುತ್ಯ ರೈಲ್ವೆ ಮೂಲಕ ರೈಲ್ವೆ ಮಂಡಳಿಗೆ ಪತ್ರ ಬರೆದಿದ್ದೇವೆ. ಹೊಸ ಪ್ರಸ್ತಾವನೆಯನ್ನು ಸಲ್ಲಿಸಲು ಕೆ- ರೈಡ್ ಗೆ ಸೂಚಿಸಿದ್ದೇವೆ. 23,000 ಕೋಟಿ ರೂ.ಗಳ ವರ್ತುಲ ರೈಲು ಯೋಜನೆಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಇದು ವಡ್ಡರಹಳ್ಳಿ, ದೇವನಹಳ್ಳಿ, ಮಾಲೂರು, ಹೀಲಲಿಗೆ, ಹೆಜ್ಜಾಲ ಮತ್ತು ಸೋಲೂರನ್ನು ಸಂಪರ್ಕಿಸುತ್ತದೆ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಯೋಗೇಶ್ ಮೋಹನ್ ಟಿಎನ್ ಐಇಗೆ ತಿಳಿಸಿದರು.