ಹುಬ್ಬಳ್ಳಿ: ಹುಬ್ಬಳ್ಳಿಯಿಂದ ರಿಷಿಕೇಶವರೆಗೆ ಪ್ರಯಾಣಿಸಲು ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗುತ್ತಿದೆ. ಇದೆ ಅಕ್ಟೋಬರ್ ೧೪ ರಿಂದ ನವೆಂಬರ್ ೪ ರವರೆಗೆ ಸೋಮವಾರ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ರೈಲು ಸಂಖ್ಯೆ 07363 ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ರಿಷಿಕೇಶ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ರಾತ್ರಿ 8:30 ಗಂಟೆಗೆ ಹೊರಟು, ಬುಧವಾರ ರಾತ್ರಿ 11:30 ಗಂಟೆಗೆ ಯೋಗ ನಗರಿ ರಿಷಿಕೇಶ ತಲುಪಲಿದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07364 ಯೋಗ ನಗರಿ ರಿಷಿಕೇಶ – ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು ಅಕ್ಟೋಬರ್ 17 ರಿಂದ ನವೆಂಬರ್ 7, 2024 ರವರೆಗೆ ಪ್ರತಿ ಗುರುವಾರ 06:15 ಗಂಟೆಗೆ ಯೋಗ ನಗರಿ ರಿಷಿಕೇಶ ನಿಲ್ದಾಣದಿಂದ ಹೊರಟು, ಶನಿವಾರ 06:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ.
ಈ ರೈಲು ಎರಡು ದಿಕ್ಕುಗಳಲ್ಲಿ ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಚಾರ್ಡ್ ಲೈನ್, ಅಹ್ಮದ್ ನಗರ, ಕೋಪರ್ ಗಾಂವ್ , ಮನ್ಮಾಡ್ ಜಂ, ಭೂಸಾವಲ್ ಜಂ., ಹರ್ದಾ, ಇಟಾರ್ಸಿ ಜಂ., ರಾಣಿ ಕಮಲಾಪತಿ, ಬೀನಾ ಜಂ., ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ ನಿಲ್ದಾಣ, ಗ್ವಾಲಿಯರ್ ಜಂ., ಆಗ್ರಾ ಕ್ಯಾಂಟ್, ಮಥುರಾ ಜಂ., ಹಜರತ್ ನಿಜಾಮುದ್ದೀನ್ ಜಂ., ಘಾಜಿಯಾಬಾದ್ ಜಂ., ಮೀರತ್ ಸಿಟಿ ಜಂ., ಮುಜಾಫರ್ ನಗರ, ಡಿಯೋಬಂದ್, ತಾಪ್ರಿ ಜಂ., ರೂರ್ಕಿ ಮತ್ತು ಹರಿದ್ವಾರ ನಿಲ್ದಾಣಗಲ್ಲಿ ನಿಲುಗಡೆ ಇರಲಿವೆ.
ಈ ವಿಶೇಷ ರೈಲಿನಲ್ಲಿ 2ನೇ ದರ್ಜೆ ಹವಾನಿಯಂತ್ರಿತ-1, 3ನೇ ದರ್ಜೆ ಹವಾನಿಯಂತ್ರಿತ-4, ಸ್ಲೀಪರ್ ಕ್ಲಾಸ್-9, ಎಸ್ಎಲ್ಆರ್/ಡಿ ಮತ್ತು ಗಾರ್ಡ್ಸ್ ಬ್ರೇಕ್ ವ್ಯಾನ್ ಮತ್ತು ಜನರೇಟರ್ ಕಾರ್ ತಲಾ-1 ಬೋಗಿಗಳು ಸೇರಿದಂತೆ ಒಟ್ಟು 16 ಬೋಗಿಗಳು ಇರಲಿವೆ.
ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಭಗತ್ ಕಿ ಕೋಠಿ ನಿಲ್ದಾಣಗಳ ನಡುವೆ 2 ಟ್ರಿಪ್ ವಿಶೇಷ ರೈಲು ಸೇವೆ ಆರಂಭಿಸಲಾಗಿದೆ. ರೈಲು ಸಂಖ್ಯೆ 06587 ಎಸ್ಎಂವಿಟಿ ಬೆಂಗಳೂರು-ಭಗತ್ ಕಿ ಕೋಠಿ ವಿಶೇಷ ಎಕ್ಸ್ಪ್ರೆಸ್ ರೈಲು ಬೆಂಗಳೂರಿನ ಸರ್ ಎಂ ವಿಶ್ವೇರಯ್ಯ ಟರ್ಮಿನಲ್ ನಿಲ್ದಾಣದಿಂದ ಅಕ್ಟೋಬರ್ 25 ಮತ್ತು 30, 2024 ರಂದು 17:45 ಗಂಟೆಗೆ ಹೊರಟು, ಮೂರನೇ ದಿನ 12:45 ಗಂಟೆಗೆ ಭಗತ್ ಕಿ ಕೋಠಿ ತಲುಪಲಿದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06588 ಭಗತ್-ಕಿ-ಕೋಠಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲು ಅಕ್ಟೋಬರ್ 28 ಮತ್ತು ನವೆಂಬರ್ 2, 2024 ರಂದು ಭಗತ್-ಕಿ-ಕೋಠಿಯಿಂದ 05:00 ಗಂಟೆಗೆ ಹೊರಟು, ಮರುದಿನ 23:30 ಗಂಟೆಗೆ ಎಸ್ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.
ಈ ರೈಲು ಎರಡು ದಿಕ್ಕಿನ ಮಾರ್ಗದಲ್ಲಿ, ಬಾಣಸವಾಡಿ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಸತಾರಾ, ಪುಣೆ, ಲೋನಾವಲ , ಕಲ್ಯಾಣ್, ವಸಾಯಿ ರೋಡ್, ವಾಪಿ, ಸೂರತ್, ವಡೋದರಾ ಜಂ., ಅಹಮದಾಬಾದ್ ಜಂ., ಮಹೇಶನಾ ಜಂ., ಪಾಲನ್ಪುರ್ ಜಂ., ಅಬು ರೋಡ್, ಪಿಂಡ್ವಾರಾ, ಜವಾಯಿ ಬಂದ್, ಫಲ್ನಾ, ಮಾರ್ವಾರ್ ಜಂ., ಪಾಲಿ ಮಾರ್ವಾರ್ ಮತ್ತು ಲುನಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ಈ ವಿಶೇಷ ರೈಲು 2ನೇ ದರ್ಜೆ ಹವಾನಿಯಂತ್ರಿತ-4, 3ನೇ ದರ್ಜೆ ಹವಾನಿಯಂತ್ರಿತ-15 ಮತ್ತು ಬ್ರೇಕ್ ವ್ಯಾನ್ ಮತ್ತು ಜನರೇಟರ್ ಕಾರಗಳು-2 ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.