ಬೆಂಗಳೂರು: ಸಿಎಂ ಸ್ಥಾನ ಒಪ್ಪಂದದಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೀಡಿದ್ದ ಅಂದಿನ ಸಂದರ್ಶನ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸಿಎಂ ಸಿದ್ದರಾಮಯ್ಯ ಬುಡಕ್ಕೆ ಒಪ್ಪಂದದ ಬಾಂಬ್ ಇಟ್ಟ ಡಿಕೆಶಿ, ನಿಮ್ಮ ಕಾಲ ಹತ್ತಿರ ಬಂದಿದೆ. ಜಾಗ ಖಾಲಿ ಮಾಡಿ ಅನ್ನೋ ಸಂದೇಶ ಕೊಟ್ಟಿದ್ರು. ಇದಕ್ಕೀಗ ಸಿಎಂ ಸಿದ್ದರಾಮಯ್ಯ ಆ ರೀತಿಯ ಯಾವುದೇ ಒಪ್ಪಂದ ಆಗಿಲ್ಲ ಎಂದು ಟಕ್ಕರ್ ಕೊಟ್ಟಿದ್ರು.
ಅಧಿಕಾರ ಹಂಚಿಕೆ ಎಂದರೆ 50-50 ಫಾರ್ಮೂಲ. ಅವರು ಮೂವತ್ತು ತಿಂಗಳು, ಇವರು ಮೂವತ್ತು ತಿಂಗಳು. ಹೀಗೆ ಡೆಲ್ಲಿಯ ಗಲ್ಲಿಗಳಲ್ಲಿ ಈ ಒಪ್ಪಂದಗಳ ಸದ್ದಾಗಿತ್ತು. ಅಸಲಿಗೆ ಡೆಲ್ಲಿ ಹೈಕಮಾಂಡ್ ಈ ರಹಸ್ಯ ಸಭೆಯಲ್ಲಿ ಆಗಿದ್ದೇನು ಅನ್ನೋದು ಬಲ್ಲಱರು? ಮೊನ್ನೆ ನಾವು ಒಪ್ಪಂದದ ಮೇಲಿದ್ದೇವೆ ಅನ್ನೋ ಡಿಕೆಶಿ ಕೊಟ್ಟ ಸಂದರ್ಶನ ಮತ್ತೊಮ್ಮೆ ಬಣ ಯುದ್ಧಕ್ಕೆ ಕಾರಣವಾಗಿದೆ.
ಡಿಸಿಎಂ ಡಿಕೆಶಿ ಡೆಲ್ಲಿಯಲ್ಲೇ ಇದ್ದು ಮಾರ್ಮಿಕವಾಗಿ ಸಂದೇಶ ಪಾಸ್ ಮಾಡಿ, ಇಲ್ಲಿ ಸಿದ್ದು ಬಣಕ್ಕೆ ಡೈರೆಕ್ಟ್ ಹಿಟ್ ಮಾಡಿದ್ದರು. ಡಿಕೆಶಿ ಮಾತೇ ರಾಜ್ಯ ರಾಜಕೀಯದಲ್ಲಿ ಹೀಟ್ ವಾತಾವರಣ ಸೃಷ್ಟಿಸಿದೆ. ಈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿ ಯಾವ ಒಪ್ಪಂದ ಆಗಿಲ್ಲ ಅನ್ನೋ ಮೂಲಕ ಸಂಘರ್ಷವನ್ನ ಮತ್ತೊಂದು ಮಜಲಿಗೆ ಕೊಂಡೊಯ್ದಿದ್ದಾರೆ.
ಸಿಎಂ ಸ್ಥಾನದ ಒಪ್ಪಂದ ಆಗಿಲ್ಲ ಎಂಬ ಸಿಎಂ ಹೇಳಿಕೆ ಬೆನ್ನಲ್ಲೆ ಡಿಕೆಶಿ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ಆಯ್ತು ನಮ್ಮ ಚೀಫ್ ಮಿನಿಸ್ಟರ್ ಹೇಳಿದ ಮೇಲೆ ಫೈನಲ್ ಎಂದು ಕೌಂಟರ್ ಕೊಟ್ಟರು. ಇನ್ನೊಂದೆಡೆ ಡಿಕೆ ಸುರೇಶ್ ಹೇಳಿಕೆಯನ್ನೇ ಸಚಿವ ಜಾರಕಿಹೊಳಿ ಪ್ರಸ್ತಾಪಿಸಿದ್ದಾರೆ. ಜತೆಗೆ 2028ಕ್ಕೆ ನಾನು ಸಿಎಂ ರೇಸ್ನಲ್ಲಿ ಇದ್ದೇನೆ ಎಂದಿದ್ದಾರೆ.
ಡಿಕೆಶಿ ಹೇಳಿದ ಒಪ್ಪಂದ, ಗಾಂಧಿ ಫ್ಯಾಮಿಲಿಗೆ ನಿಷ್ಠೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತ್ನಾಡಿದ್ದಾರೆ. ಸಿಎಂ ಸೀಟ್ ಹಂಚಿಕೆಯಲ್ಲಿ ಯಾವ ಒಪ್ಪಂದ ಆಗಿಲ್ಲ ಅನ್ನೋ ಮೂಲಕ ಡಿಕೆಶಿಯ ಪವರ್ ಶೇರಿಂಗ್ ಆಸೆಗೆ ತಣ್ಣೀರು ಎರಚಿದ್ದಾರೆ.. ಆದ್ರೆ, ಹೈಕಮಾಂಡ್ ತೀರ್ಮಾನಕ್ಕೆ ಎಂದಿದ್ದಾರೆ.