Sri Ram Sena
Sri Ram Sena ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಾಹೇಬ್ರು ಎಚ್ಚರಿಕೆ ಕೊಟ್ಟಿದ್ದಾರೆ! ಅದು ಏನು ಅಂದ್ರೆ, ಅಕ್ರಮ ಬಾಂಗ್ಲಾ ವಲಸಿಗರನ್ನು ಭಾರತದಿಂದ ಓಡಿಸಲು ಪ್ಲಾನ್! ಬಾಂಗ್ಲಾದಲ್ಲಿ ಹೊತ್ತಿಕೊಂಡಿರುವ ಆಂತರಿಕ ಮೀಸಲಾತಿ ಕಿಚ್ಚು ಜೋರಾಗುತ್ತಿದೆ!
Sri Ram Sena ಮುಖ್ಯಸ್ಥರಿಂದ ಖಂಡನೆ!
ಅಕ್ರಮ ಬಾಂಗ್ಲಾ ವಲಸಿಗರನ್ನು ಭಾರತದಿಂದ ಓಡಿಸಲು ಪ್ಲಾನ್ ಬಾಂಗ್ಲಾದಲ್ಲಿ ಹೊತ್ತಿಕೊಂಡಿರುವ ಆಂತರಿಕ ಮೀಸಲಾತಿ ಕಿಚ್ಚು ಧಗ ಧಗಿಸ್ತಿದೆ. ಹಿಂಸಾಚಾರ ತಾಂಡವವಾಡ್ತಿದೆ. ಆದರೆ ಕೆಲ ಹಿಂದೂಗಳನ್ನೆ ಟಾರ್ಗಟ್ ಮಾಡಿಕೊಂಡಿರುವ ಕಿಡಿಗೇಡಿಗಳು ಚಿತ್ರಹಿಂಸೆ ನೀಡ್ತಿದ್ದಾರೆ. ಇದು ಭಾರತೀಯ ಹಿಂದೂ ಮುಖಂಡರ ರಕ್ತ ಕುದಿಯುವಂತೆ ಮಾಡಿದೆ. ಹಾಗಾಗಿ ಕರ್ನಾಟಕದಲ್ಲಿರುವ ಅಕ್ರಮ ಬಾಂಗ್ಲಾ ಮುಸ್ಲಿಮರ ವಿರುದ್ಧ ಸಮರ ಸಾರಿದ್ದಾರೆ.
ಒಂದು ಲಕ್ಷ ರೋಹಿಂಗ್ಯಾ ಮುಸ್ಲಿಮರು?
ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರು ಪೊಲೀಸ್ ಆಯುಕ್ತ ಬಿ ದಯಾನಂದ್ ಅವರನ್ನ ಭೇಟಿ ಮಾಡಿ ನಗರದಲ್ಲಿ ಅಕ್ರಮವಾಗಿ ನೆಲಸಿರುವ ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಬರ್ಮಾ ರೋಹಿಂಗ್ಯಾ ಮುಸ್ಲಿಮರನ್ನು ಕರ್ನಾಟಕದಿಂದ ಕಳುಹಿಸಬೇಕು ಎಂದು ಆಗ್ರಹಿಸಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲ ಬೆಂಗಳೂರಲ್ಲಿ 4 ರಿಂದ 5 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾ ಮುಸ್ಲಿಮರು ಇದ್ದಾರೆ. ಅದರ ಮಾಹಿತಿಯನ್ನು ನಾವೇ ಪೊಲೀಸರಿಗೆ ನೀಡ್ತಿವಿ ಎಂದು ಶ್ರೀರಾಮಸೇನೆ ಹೇಳಿದೆ.
Bangladesh Violence:
ಸಂಭವಿಸಿದ ಆಂತರಿಕ ಮೀಸಲಾತಿ ಕಿಚ್ಚು ಇಡೀ ದೇಶವನ್ನೇ ಸುಡ್ತಿದೆ. ಪ್ರಧಾನಿ ಮನೆಯನ್ನೇ ಧ್ವಂಸ ಮಾಡಿದ ಕಿಡಿಗೇಡಿಗಳು ಕಂಡ ಕಂಡಲ್ಲಿ ಕೇಕೆ ಹಾಕ್ತಿದ್ದಾರೆ. ಇದರ ನಡುವೆ ಹಿಂದೂ ಕುಟುಂಬಗಳನ್ನೇ ಟಾರ್ಗೆಟ್ ಮಾಡಿಕೊಂಡಿರೋ ಪ್ರಕರಣ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಇದು ಹಿಂದೂ ಸಮಾಜದವರ ರಕ್ತ ಕುದಿಯುವಂತೆ ಮಾಡಿದೆ. ಹಾಗಾಗಿ ಕರ್ನಾಟಕದಲ್ಲಿರುವ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಹೆಮ್ಮೆಟ್ಟಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ (B Dayanand) ಮನವಿ ಮಾಡಲಾಗಿದೆ.
Sri Ram Sena ಹೇಳಿದ್ದೇನು?
ರೋಹಿಂಗ್ಯಾಗಳನ್ನ ಇಲ್ಲಿ ಸ್ಥಾನ ನೀಡಲಾಗ್ತಿದೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ಎಂಪಿ. ಎಂಎಲ್ಎ ಕ್ಷೇತ್ರದಲ್ಲಿ ರೋಹಿಂಗ್ಯಾ ಮುಸಲ್ಮಾನರಿಗೆ ಸ್ಥಳೀಯ ದಾಖಲಾತಿ ನೀಡಲಾಗ್ತಿದೆ. ಅಷ್ಟೆ ಅಲ್ಲದೆ ಚಾಮರಾಜಪೇಟೆಯಲ್ಲಿ ಒಟ್ಟು ಒಂದು ಲಕ್ಷ ರೋಹಿಂಗ್ಯಾ ಮುಸಲ್ಮಾನರಿದ್ದಾರೆಂದು ಆರೋಪ ಮಾಡಲಾಗಿದೆ. ಪೊಲೀಸರ ಮೇಲೆ ಆರೋಪ ಮಾಡಿರುವ ಪ್ರಮೋದ್ ಮುತಾಲಿಕ್ ಅವರು ಪೊಲೀಸರು ಪೋಸ್ಟಿಂಗ್ ಗೆಲ್ಲ ರಾಜಕಾರಣಿಗಳ ಜೊತೆ ಕೆಲಸ ಮಾಡಬಾರದು ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಪೊಲೀಸರು ಕ್ರಮ ಕೈಗೊಳ್ಳದೆ ಇದ್ದರೆ ನಾವೇ ಒದ್ದು ಓಡಿಸ್ತಿವಿ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಅಕ್ರಮವಾಗಿ ಬಾಂಗ್ಲಾ ನುಸುಳುಕೋರರು ನೆಲಸಿರುವ ಬಗ್ಗೆ ಈಗಾಗಲೇ ಪೊಲೀಸರಿಗೂ ಮಾಹಿತಿ ಇದೆ. ಹಾಗಾಗಿ ಅಕ್ರಮ ವಲಸಿಗರ ಮೇಲೆ ದಾಳಿ ಕೂಡ ನಡೆದು ಕೆಲವರನ್ನು ವಾಪಸ್ಸು ಕಳುಹಿಸಲಾಗಿದೆ. ಆದರೆ ಈಗ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆ ಹಾಗು ಹಿಂದೂಗಳ ಹತ್ಯೆಯಿಂದಾಗಿ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಇನ್ನಷ್ಟು ಓದಿರಿ:
Vinesh Phogat: ಹೊರ ಬರಲು ಕಾರಣ ಕೇವಲ 100 ಗ್ರಾಮ್!