spot_img
spot_img

KL ರಾಹುಲ್​ಗೆ ಬಿಗ್ ಟೆನ್ಶನ್.. ಅಯ್ಯರ್​​, ಸಿರಾಜ್​​ಗೂ ಅದೇ ಢವಢವ..!

spot_img
spot_img

Share post:

ಇಂಡಿಯನ್ ಪ್ರಿಮೀಯರ್​​ ಲೀಗ್​​ನ ಬಿಗ್ ಬಿಲಿಯನ್​ ಡೇಗೆ ಕೌಂಟ್​ಡೌನ್​ ಶುರುವಾಗಿದೆ. ಮೆಗಾ ಹರಾಜಿನ ಕಣದಲ್ಲಿ 574 ಆಟಗಾರರು ಕಾಣಿಸಿಕೊಂಡಿದ್ದಾರೆ. ಸ್ಟಾರ್​ ಆಟಗಾರರಾದ ಕೆ.ಎಲ್.ರಾಹುಲ್, ಶ್ರೇಯಸ್​ ಅಯ್ಯರ್​​, ಮೊಹಮ್ಮದ್ ಸಿರಾಜ್​ಗೆ ಟೆನ್ಶನ್ ಶುರುವಾಗಿದೆ.

2025ರ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 24, 25ರಂದು ನಡೆಯಲಿರುವ ಈ ಮೆಗಾ ಹರಾಜಿನ ಬಗ್ಗೆ ಅಭಿಮಾನಿಗಳಲ್ಲಿ ಕೂತುಹಲ ಮನೆ ಮಾಡಿದೆ. 574 ಆಟಗಾರರು ಪೈಕಿ ಹರಾಜಿನ ಕಣದಲ್ಲಿ ಸೇಲಾಗುವ 204 ಆಟಗಾರರು ಯಾರು ಅನ್ನೋ ನಿರೀಕ್ಷೆ ಗರಿಗೆದರಿದೆ.

2 ಸೆಟ್​ನಲ್ಲಿರುವ 12 ಮಾರ್ಕ್ಯೂ ಆಟಗಾರರ ಪೈಕಿ ಮೂವರ ಎದೆಯಲ್ಲಿ ನಡುಕ ಶುರುವಾಗಿದೆ. ಬಿಗ್ ಅಮೌಂಟ್​​ಗೆ ಸೇಲ್ ಆಗ್ತೀವಾ ಇಲ್ವಾ ಅನ್ನೋ ಭಯ ಕಾಡಲಾರಂಭಿಸಿದೆ.

ಲಕ್ನೋ ಸೂಪರ್ ಜೈಂಟ್ಸ್​ ಜೊತೆಗಿನ ವಿವಾದ ಮಾಡಿಕೊಂಡಿರುವ ಕೆ.ಎಲ್.ರಾಹುಲ್, ಮಾರ್ಕ್ಯೂ​​ ಆಟಗಾರರ ಲಿಸ್ಟ್​ನಲ್ಲಿದ್ದಾರೆ. ಲಕ್ನೋ ಮಾಲೀಕರ ಜೊತೆಗಿನ ವಾಗ್ವಾದ ಹಾಗೂ ಸ್ಟ್ರೈಕ್​ರೇಟ್​​​ ಸೆಟ್ ಬ್ಯಾಕ್ ಆಗಿತ್ತು.

ಆದ್ರೀಗ ಇದೇ ರಾಹುಲ್​ಗೆ ಮೆಗಾ ಹರಾಜಿನಲ್ಲಿ ಹಿನ್ನಡೆಯಾಗಿ ಕಾಡುತ್ತಾ ಎಂಬ ಅನುಮಾನ ಹುಟ್ಟಿಹಾಕಿದೆ.

ಕೆ.ಎಲ್.ರಾಹುಲ್ ಹಾರ್ಡ್ ಹಿಟ್ಟರ್​ ಅಲ್ಲ. ಇನ್ನಿಂಗ್ಸ್​ ಬಿಲ್ಡ್ ಮಾಡೋಕೆ ಸಮಯ ತೆಗೆದುಕೊಳ್ಳುವ ರಾಹುಲ್, ಮಾಡ್ರನ್ ಡೇ ಟಿ20 ಕ್ರಿಕೆಟ್ ಸ್ಟ್ರೈಲ್​ಗೆ ಸೆಟ್ ಆಗಲ್ಲ.

ಅಂಡರ್ ಫ್ರೆಷರ್​ನಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಗಿದ್ದಾರೆ. ಇದೇ ಕಾರಣಕ್ಕೆ ಲಕ್ನೋ ಜೊತೆಗಿನ ಸಂಬಂಧಕ್ಕೆ ಬ್ರೇಕ್​ ಬಿದ್ದಿದೆ. ಈ ಅಂಶಗಳೇ ಐಪಿಎಲ್ ಫ್ರಾಂಚೈಸಿಗಳು ಕೆ.ಎಲ್.ರಾಹುಲ್ ಖರೀದಿಗೆ ಮನ್ಸು ಮಾಡುತ್ತಾ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ.

ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಟೀಮ್​​ ಕ್ಯಾಪ್ಟನ್​, ರಿಟೈನ್​​ ಆಗಿಲ್ಲ. ಕೊಲ್ಕತ್ತಾ ನೈಟ್​ ರೈಡರ್ಸ್ ತಂಡದಲ್ಲೇ ಉಳಿಸಿಕೊಳ್ಳುವ ಯತ್ನ ಮಾಡಿದ್ರು. ಮೆಗಾ ಹರಾಜಿನ ಕಣಕ್ಕೆ ಶ್ರೇಯಸ್ ಅಯ್ಯರ್ ದುಮುಕಿದ್ದಾರೆ. ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹೆಣಗಾಡ್ತಿರುವ ಶ್ರೇಯಸ್​ ಅಯ್ಯರ್, ಬಿಸಿಸಿಐನ ಸೆಂಟ್ರಲ್ ಕಾಂಟ್ರಾಕ್ಟ್​ನಲ್ಲೂ ಇಲ್ಲ.

ಸದ್ಯ ಏಕದಿನ ತಂಡದ ಸದಸ್ಯನಾಗಿ ಮಾತ್ರವೇ ಉಳಿದಿರುವ ಅಯ್ಯರ್​ಗೆ, ಟಿ20ಯಲ್ಲಿ ಹೇಳಿಕೊಳ್ಳುವ ಶ್ರೇಯಸ್ಸು ಸಿಕ್ಕಿಲ್ಲ. 2024ರ ಕ್ಯಾಲೆಂಡರ್​ನಲ್ಲಿ ಐಪಿಎಲ್​ ಬಿಟ್ರೆ, ಟಿ20 ಮ್ಯಾಚ್​ಗಳನ್ನೇ ಆಡದ ಶ್ರೇಯಸ್​ ಟಾಪ್​ ಆರ್ಡರ್​ಗೆ ಮಾತ್ರವೇ ಸಿಮೀತ. ಹೀಗಾಗಿ ಶ್ರೇಯಸ್​ ಮೆಗಾ ಹರಾಜಿನಲ್ಲಿ ಬಂಪರ್​​ ಪ್ರೈಸ್ ಸಿಗುತ್ತಾ ಎಂಬ ಪ್ರಶ್ನೆ ಇದೆ.

ಮೊಹಮ್ಮದ್ ಸಿರಾಜ್.. ಟೀಮ್ ಇಂಡಿಯಾ ಖಾಯಂ ಆಟಗಾರ. ಸದ್ಯ 3 ಫಾರ್ಮೆಟ್​ನಲ್ಲಿ ಆಡ್ತಿರುವ ಸಿರಾಜ್, ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡಲು ಪರದಾಡ್ತಿದ್ದಾರೆ.

ಆರ್​ಸಿಬಿ ಹಾಗೂ ಟೀಮ್ ಇಂಡಿಯಾ ಪರ ವರ್ಷದಿಂದ ಹೇಳಿಕೊಳ್ಳುವ ಆಟವಾಡಿಲ್ಲ. ಹೀಗಾಗಿ ಐಪಿಎಲ್​ ಫ್ರಾಂಚೈಸಿಗಳು ಸ್ಪೀಡ್​​ಸ್ಟರ್ ಮೊಹಮ್ಮದ್ ಶಮಿಯ ಮೇಲೆ ಬಿಗ್ ಅಮೌಂಟ್​ ಸುರಿಸುವುದು ಡೌಟೇ..

ಒಟ್ನಲ್ಲಿ, ಸ್ವಯಃ ಕೃತ ಅಪರಾಧ, ತಂಡದೊಂದಿಗಿನ ವಾಗ್ವಾದ.. ಆತ್ಮಗೌರವ, ಹಣದಾಸೆ ಸೇರಿದಂತೆ ಇನ್ನಿತರ ಕಾರಣಕ್ಕೆ ಈ ತ್ರಿಮೂರ್ತಿಗಳು, ಮೆಗಾ ಹರಾಜಿನ ಕಣದಲ್ಲಿ ಕಾಣಿಸಿಕೊಳ್ತಿದ್ದಾರೆ.

ಈ ತ್ರಿಮೂರ್ತಿಗಳಿಗೆ ಅವರದ್ದೇ ಆಟ ಸೆಟ್ ಬ್ಯಾಕ್ ಆಗುವ ಫಿಯರ್ ಕಾಡ್ತಿದ್ದು, ಮೆಗಾ ಹರಾಜಿನಲ್ಲಿ ಎಷ್ಟಕ್ಕೆ ಬಿಕರಿಯಾಗ್ತಾರೆ ಅನ್ನೋದು ಕಾದುನೋಡಬೇಕಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...