ಕೇಳದೆ ನಿಮಗಾಗಿ ದೂರದಲ್ಲಿ ಯಾರೋ ಹಾಡು ಕೇಳಿದರೆ ಯಾರಿಗೆ ಇಷ್ಟವಿಲ್ಲ ಆ ಹಾಡಿನ ಮೂಲ ಸೂತ್ರಧಾರನ ನೆನಪು ಬರದೇ ಇರುವುದು ಅಸಾಧ್ಯ ಶಂಕರ ನಾಗ್ ಅವರು ಕರ್ನಾಟಕವನ್ನು ಆಗಲಿ ಕನ್ನಡ ಚಿತ್ರರಂಗಕ್ಕೆ ಸಂಪತ್ತು ಕಳೆದುಕೊಂಡಂತೆ ಕೇವಲ 35ನೇ ವಯಸ್ಸಿಗೆ ಶಂಕರ್ ನಾಗ್ ಅವರು ನಿಧನ ಹೊಂದಿದರು.
ಗೀತಾಂಜಲಿ ಹಾಲುಗೆನ್ನೆಗೆ ಹಾಡು ಎಲ್ಲರನ್ನು ಮನರಂಜಿಸುವ, ಮನವೊಲಿಸುವ ಶಂಕರ ನಾಗ್ ಅವರ ಹಾಡು ಮೊದಲು ನೆನಪಾಗುವುದು ಅವರು ಬದುಕಿದ್ದರೆ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.
ಶಂಕರ್ ನಾಗ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರು ಕನ್ನಡ ಚಿತ್ರರಂಗದಲ್ಲಿ ಹಲವು ಕ್ರಾಂತಿ ಮಾಡಿದ್ದರು. ಇದರಲ್ಲಿ ಸಾಂಗ್ ರೀರೆಕಾರ್ಡಿಂಗ್ ಸ್ಟುಡಿಯೋ ಮಾಡಿದ ಖ್ಯಾತಿಯೂ ಅವರಿಗೆ ಸಿಗುತ್ತದೆ ಎಂದರೆ ತಪ್ಪಾಗಲಾರದು.
ಮೊದಲು ಸಿನಿಮಾಗಳ ಹಾಡಿನ ರೀರೆಕಾರ್ಡಿಂಗ್ ಕೆಲಸಗಳು ಮದ್ರಾಸ್ ಅಂದರೆ ಈಗಿನ ಚೆನ್ನೈನಲ್ಲಿ ನಡೆಯುತ್ತಿತ್ತು. ಕನ್ನಡ ಸಿನಿಮಾದ ಶೂಟಿಂಗ್ ಎಲ್ಲೇ ಆದರೂ, ಅದರ ಹಾಡಿಸ ಕೆಲಸಗಳಿಗೆ ಚೆನ್ನೈ ಅಥವಾ ಮುಂಬೈಗೆ ತೆರಳಬೇಕಿತ್ತು. ಸಿನಿಮಾ ಕೆಲಸಗಳ ಕೇಂದ್ರ ಬಿಂದುವು ಮದ್ರಾಸೇ ಆಗಿತ್ತು. ಈ ಬಗ್ಗೆ ಶಂಕರ್ ನಾಗ್ಗೆ ಬೇಸರ ಇತ್ತು. ಸಿನಿಮಾ ನಿರ್ಮಾಣ ಮಾಡೋದು ಕನ್ನಡಿಗರು, ಸಿನಿಮಾ ನೋಡೋದು ಕನ್ನಡಿಗರು ಹೀಗಿರುವಾಗ ಅದರ ಕೆಲಸಗಳು ಏಕೆ ಚೆನ್ನೈನಲ್ಲಿ ನಡೆಯಬೇಕು ಎಂಬುದು ಅವರ ಪ್ರಶ್ನೆ ಆಗಿತ್ತು.
‘ಒಂದು ಮುತ್ತಿನ ಕಥೆ’ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆದಿತ್ತು. ರಾಜ್ಕುಮಾರ್ ನಟನೆಯ ಈ ಚಿತ್ರವನ್ನು, ಶಂಕರ್ ನಾಗ್ ನಿರ್ದೇಶನ ಮಾಡಿದ್ದರು. ಈ ಚಿತ್ರದ ಹಾಡಿನ ರೆಕಾರ್ಡ್ ಬೆಂಗಳೂರಿನಲ್ಲೇ ನಡೆದಿತ್ತು ಅನ್ನೋದು ವಿಶೇಷ. ‘ಮೊದಲು ಹಾಡುಗಳ ರೆಕಾರ್ಡಿಂಗ್ ಮಾಡಬೇಕು ಎಂದರೆ ಮದ್ರಾಸ್ ಅಥವಾ ಮುಂಬೈಗೆ ಹೋಗಬೇಕಿತ್ತು. ಆ ವ್ಯವಸ್ಥೆ ಕರ್ನಾಟಕದಲ್ಲಿ ಇರಲಿಲ್ಲ. ಪ್ರರಿ ಬಾರಿ ರೆಕಾರ್ಡಿಂಗ್ ಮಾಡಬೇಕಾದರೆ ತಿಂಗಳು ಗಟ್ಟಲೆ ನಿಂತು ಕಾಯಬೇಕಿತ್ತು’ ಎಂದಿದ್ದರು ಶಂಕರ್ ನಾಗ್.
‘ಸಿನಿಮಾ ನಿರ್ಮಾಪಕರ ಈ ಸ್ಥಿತಿ ಕಂಡು ಬೇಸರ ಆಗಿತ್ತು. ಹೀಗಾಗಿ ನಮ್ಮದೇ ಸ್ಟುಡಿಯೋ ಬೇಕು ಎನಿಸಿತು. ಅನಂತ್ ನಾಗ್, ರಮೇಶ್ ಭಟ್, ಸೂರ್ಯ ರಾವ್ ಅವರಿಂದ ಆರ್ಥಿಕ ಸಹಾಯ ಪಡೆದು ರೀ-ರೆಕಾರ್ಡಿಂಗ್ ಸ್ಟುಡಿಯೋ ಮಾಡಿದೆವು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅದನ್ನು ಉದ್ಘಾಟನೆ ಮಾಡಿದರು. ನಮ್ಮಲ್ಲೂ ಎಲ್ಲಾ ಸೌಲಭ್ಯ ಇದೆ ಎಂಬುದರ ಸಂಕೇತವೇ ಈ ಸ್ಟುಡಿಯೋ’ ಎಂದಿದ್ದರು ಶಂಕರ್ ನಾಗ.
ಶಂಕರ್ ನಾಗ್ ಅವರು ಅನೇಕ ಕನಸನ್ನು ಕಂಡಿದ್ದರು. ಬೆಂಗಳೂರಲ್ಲಿ ಮೆಟ್ರೋ ನಿರ್ಮಾಣ ಮಾಡಬೇಕು ಎಂದು ಅವರು ಕನಸು ಕಂಡಿದ್ದರು. ನಂದಿ ಬೆಟ್ಟದಲ್ಲಿ ರೋಪ್ವೇ ಬರಬೇಕು ಎಂಬುದು ಅವರ ಆಸೆ ಆಗಿತ್ತು. ಅವರು ಮೃತಪಟ್ಟ ಹಲವು ವರ್ಷಗಳ ಬಳಿಕ ಬೆಂಗಳೂರಿಗೆ ಮೆಟ್ರೋ ಬಂತು.
ಬಾಲ್ಯದ ನಂತರ ವಿದ್ಯಾಬ್ಯಾಸಕ್ಕಾಗಿ ಮುಂಬೈಗೆ ತೆರಳಿದ ಶಂಕರ್ ನಾಗ್, ಅಲ್ಲಿನ ಮರಾಠಿ ಚಿತ್ರಮಂದಿರದ ಕಡೆಗೆ ಆಕಷಿ೯ತರಾಗಿ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತ ಅದರಲ್ಲಿಯೇ ತೀವ್ರವಾಗಿ ತೊಡಗಿಕೊಂಡರು.
ಅಣ್ಣ ಅನಂತ್ ನಾಗ್ರಂತೆ ಶಂಕರ್ ನಾಗ್ ಕೂಡ ಬ್ಯಾಂಕ್ ನೌಕರನಾದರೂ. ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಂಗೀತ ಅಭಿರುಚಿ ಇದ್ದ ಕಾರಣ ತಬಲ , ಕೊಳಲು , ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು.