ಮುಂಬೈ(ಮಹಾರಾಷ್ಟ್ರ): ಮುಂಬೈನಲ್ಲಿರುವ ರಿಸರ್ವ್ ಬ್ಯಾಂಕ್ ಇಂಡಿಯಾ ಪ್ರಧಾನ ಕಚೇರಿಗೆ ರಷ್ಯಾ ಭಾಷೆಯಲ್ಲಿ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ದೇಶದಲ್ಲಿ ಆನ್ಲೈನ್ ಮೂಲಕ ಬಾಂಬ್ ಬೆದರಿಕೆ ಕರೆಗಳು ಹೆಚ್ಚುತ್ತಿವೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ಗೆ(ಆರ್‌ಬಿಐ) ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಒಂದೇ ತಿಂಗಳಲ್ಲೇ ಬಂದ ಎರಡನೇ ಬೆದರಿಕೆ ಇದಾಗಿದೆ.
ದುಷ್ಕರ್ಮಿಗಳು ಗುರುವಾರ ಆರ್‌ಬಿಐ ಅಧಿಕೃತ ವೆಬ್ ಜಾಲತಾಣಕ್ಕೆ ಬೆದರಿಕೆ ಇಮೇಲ್ ಕಳುಹಿಸಿದ್ದು, ಕಟ್ಟಡ ಸ್ಪೋಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮುಂಬೈನ ಮಠ ರಾಮಬಾಯಿ ಮಾರ್ಗ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಇಮೇಲ್ ಸಂದೇಶ ಕಳುಹಿಸಿದವರ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ನವೆಂಬರ್ 16ರಂದು ಕೂಡ ಇದೇ ರೀತಿ ಆರ್‌ಬಿಐ ಕಸ್ಟಮರ್ ಕೇರ್ಗೆ ಬಾಂಬ್ ಬೆದರಿಕೆ ಬಂದಿತ್ತು. ಇಮೇಲ್ ಸಂದೇಶವನ್ನು ರಷ್ಯಾನ್ ಭಾಷೆಯಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now