spot_img
spot_img

BOMB THREAT TO SCHOOLS – ದೆಹಲಿ ಶಾಲೆಗಳಿಗೆ ವಿದ್ಯಾರ್ಥಿಗಳಿಂದಲೇ ಬಾಂಬ್ ಬೆದರಿಕೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ದೆಹಲಿಯ ಶಾಲೆಗಳಿಗೆ ಬಂದ್​ ನಕಲಿ ಬಾಂಬ್ ಬೆದರಿಕೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಪತ್ತೆಯಾದ ಆರೋಪಿಗಳ ಕಂಡು ಪೊಲೀಸರೇ ಶಾಕ್​ ಆಗಿದ್ದಾರೆ. ಇಲ್ಲಿನ ರೋಹಿಣಿ ಶಾಲೆಗಳಿಗೆ ಇತ್ತೀಚಿಗೆ ಬಾಂಬ್​ ಬೆದರಿಕೆ ಇಮೇಲ್​ ಬಂದಿತ್ತು. ಇದರ ಜಾಡು ಹಿಡಿದು ಹೊರಟಾಗ ಅದೇ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಈ ಬೆದರಿಕೆ ಹಾಕಿದ್ದು ಪತ್ತೆಯಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ದೆಹಲಿ ಶಾಲೆಗಳಿಗೆ ಬಾಂಬ್​ ಬೆದರಿಕೆ ಹಾಕಿದ ಪ್ರಕರಣದಲ್ಲಿ ವಿಚಿತ್ರ ಸಂಗತಿ ಹೊರಬಿದ್ದಿದೆ. ಶಾಲೆಗಳಿಗೆ ಬೆದರಿಕೆ ಹಾಕಿದ್ದು, ಅದೇ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.ಎರಡೂ ಶಾಲೆಗಳಿಗೆ ಅಲ್ಲೇ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಬಾಂಬ್​ ಬೆದರಿಕೆಯ ಇಮೇಲ್​ ಕಳುಹಿಸಿದ್ದಾರೆ. ತನಿಖೆಯ ವೇಳೆ ಐಪಿ ಅಡ್ರೆಸ್​ನಿಂದಾಗಿ ಮಕ್ಕಳ ಮನೆಯನ್ನು ಪತ್ತೆ ಮಾಡಲಾಯಿತು. ವಿಚಾರಣೆಯ ವೇಳೆ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Exam Postponement Plan:

ಕಳೆದ ಕೆಲ ದಿನಗಳಿಂದ ದೆಹಲಿ ಶಾಲೆಗಳಿಗೆ ಬೆದರಿಕೆ ಕರೆಗಳು ಬರುತ್ತಿದ್ದ ಕಾರಣ, ಇದೇ ತಂತ್ರವನ್ನು ಬಳಸಿ ತಾವು ಪರೀಕ್ಷೆಯಿಂದ ತಪ್ಪಿಸಿಕೊಳ್ಳುವ ಯೋಜನೆ ಮಾಡಿದ್ದೆವು ಎಂದು ವಿದ್ಯಾರ್ಥಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಶಾಲಾ ಪರೀಕ್ಷೆಗಳಿಗೆ ತಾವು ಸಿದ್ಧರಾಗಿಲ್ಲದ ಕಾರಣ, ಪರೀಕ್ಷೆಗಳನ್ನು ಮುಂದೂಡಲು ಬಯಸಿ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾರೆ. ಇಬ್ಬರೂ ವಿದ್ಯಾರ್ಥಿಗಳಾಗಿದ್ದರಿಂದ ಕೌನ್ಸೆಲಿಂಗ್ ಮಾಡಿ, ಪೋಷಕರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.ಡಿಸೆಂಬರ್​ 14 ರಂದು ಪಶ್ಚಿಮ ವಿಹಾರ್ ಶಾಲೆಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿತ್ತು. ಅದಕ್ಕೂ ಮೊದಲು ಇಲ್ಲಿನ ಪಿವಿಆರ್​ ಮಲ್ಟಿಫ್ಲೆಕ್ಸ್​​ನಲ್ಲಿ ಸ್ಫೋಟ ಸಂಭವಿಸಿತ್ತು. ಹೀಗಾಗಿ, ನಗರದ ಶಾಲೆಗಳಿಗೆ ಬರುತ್ತಿದ್ದ ಬೆದರಿಕೆಗಳ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದರು.ಕಳೆದ 11 ದಿನಗಳಲ್ಲಿ ದೆಹಲಿಯ 100ಕ್ಕೂ ಅಧಿಕ ಶಾಲೆಗಳಿಗೆ ನಕಲಿ ಬಾಂಬ್​ ಬೆದರಿಕೆಯ ಇಮೇಲ್​ ಸಂದೇಶಗಳು ಬಂದಿವೆ. ಎಲ್ಲವನ್ನೂ ವಿಪಿಎನ್​ (ವರ್ಚುವಲ್​ ಪ್ರೈವೇಟ್​​ ನೆಟ್​ವರ್ಕ್​) ಮೂಲಕ ರವಾನಿಸಲಾಗಿದ್ದು, ಇದರಿಂದ ಆರೋಪಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿತ್ತು.

Kejriwal’s concerns:

ಶಾಲೆಗಳಿಗೆ ನಿರಂತರ ಬಾಂಬ್​ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಕಳವಳ ಮತ್ತು ಆತಂಕ ವ್ಯಕ್ತಪಡಿಸಿದ್ದರು. ಇದು ಮಕ್ಕಳ ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದರು. ಇಂತಹ ಘಟನೆಗಳು ನಿರಂತರವಾಗಿ ಮುಂದುವರಿದರೆ ಈ ಬಗ್ಗೆ ಉನ್ನತ ಮಟ್ಟ ತನಿಖೆ ನಡೆಸುವ ಬಗ್ಗೆ ಚಿಂತಿಸಬೇಕು ಎಂದಿದ್ದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

C T RAVI ARREST ISSUE – ಸಿ.ಟಿ ರವಿ ಫೇಕ್ ಎನ್ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ?

Hubli News: "ತರಾತುರಿಯಲ್ಲಿ ಸಿ. ಟಿ. ರವಿ‌ ವಿರುದ್ಧ ಎಫ್​ಐಆರ್ ಮಾಡಲಾಗಿದೆ. ಕಾಮನ್ ಸೆನ್ಸ್ ಬೇಡ್ವಾ ಬೆಳಗಾವಿ ಕಮಿಷನರ್​ಗೆ. ಬೆಳಗಾವಿ ಕಮಿಷನರ್ ಅನ್​ಫಿಟ್ ಇದ್ದಾರೆ" ಎಂದು...

PM MODI TO ATTEND CHRISTMAS – ಪ್ರಧಾನಿ ಮೋದಿ ನಾಳೆ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿ

New Delhi News: ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಕ್ರಿಸ್​ಮಸ್ ಆಚರಣೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸೋಮವಾರ ಸಂಜೆ...

BANDIPUR FOREST – ಬಂಡೀಪುರ ರಾತ್ರಿ ಸಂಚಾರ ನಿಷೇಧ ಸಮಸ್ಯೆ

BANDIPUR NEWS : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (BTR) ಮೂಲಕ ಹಾದು ಹೋಗುವ 24.7 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಸಂಬಂಧಿಸಿದ ಸಮಸ್ಯೆಗಳು...

JAYADEVA HOSPITAL – ನೂತನ ಜಯದೇವ ಆಸ್ಪತ್ರೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

Kalaburagi News: ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವ ಮುನ್ನ ಸಿದ್ದರಾಮಯ್ಯ, ಆಸ್ಪತ್ರೆಯ ನೀಲಿ ನಕಾಶೆಯನ್ನು ವೀಕ್ಷಿಸಿದರು. ಆಸ್ಪತ್ರೆಯನ್ನು ವಿಕ್ಷೀಸಿದ ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರೊಂದಿಗೆ...