Mangalore (South Kannada) News:
BRAHMA RAKSHASA EXPULSION ಮಂಗಳೂರಿನ ಕೊಟ್ಟಾರ ಬಳಿಯ ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಅಪರೂಪವೂ ಆದ ಬ್ರಹ್ಮರಾಕ್ಷಸ ಉಚ್ಛಾಟನೆಯು ಬುಧವಾರ ರಾತ್ರಿ ಧಾರ್ಮಿಕ ವಿಧಿ – ವಿಧಾನದೊಂದಿಗೆ ನಡೆಯಿತು.
Ritual held at midnight:
ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರದ ಚಿಂತನೆಯಲ್ಲಿದ್ದ ಆಡಳಿತ ಕಮಿಟಿಯು ತಂತ್ರಿಗಳಿಂದ ಪ್ರಶ್ನಾಚಿಂತನೆ ಇಟ್ಟಿದ್ದರು. BRAHMA RAKSHASA EXPULSION ಈ ವೇಳೆ, ಪ್ರಶ್ನಾಚಿಂತನೆಯಲ್ಲಿ ಜೀರ್ಣೋದ್ಧಾರಕ್ಕೂ ಮುನ್ನ ಅಲ್ಲಿರುವ ಬ್ರಹ್ಮರಾಕ್ಷಸ ಹಾಗೂ ಪ್ರೇತಗಳ ಉಚ್ಛಾಟನೆ ಆಗಬೇಕು. ಇಲ್ಲದಿದ್ದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಅಡೆತಡೆ ಎದುರಾಗಬಹುದು ಎಂಬ ಹೇಳಲಾಗಿತ್ತು. ಅದರಂತೆ ಅಮಾವಾಸ್ಯೆಯ ನಡುರಾತ್ರಿಯಲ್ಲಿ ಈ ಪ್ರಕ್ರಿಯೆ ನಡೆಯಿತು.
Brahma Rakshasa who wandered invisibly:
ಅಗೋಚರವಾಗಿ ಆ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದ ಬ್ರಹ್ಮರಾಕ್ಷಸನ ಉಚ್ಛಾಟನೆಯ ವಿಶೇಷ ದೃಶ್ಯವನ್ನು ಕಾಣಲೆಂದೇ ಊರ ಜನತೆ ದೈವಸ್ಥಾನದಲ್ಲಿ ರಾತ್ರಿ 10 ಗಂಟೆಗಿಂತ ಮೊದಲೇ ಸೇರಿದ್ದರು. ಪ್ರತೀ ಮನೆಯವರು ಉಚ್ಛಾಟನೆಗೆ ಅಗತ್ಯವಾಗಿದ್ದ ತೆಂಗಿನಕಾಯಿ, ಕೋಳಿ, ತೆಂಗಿನಗರಿಯ ಸೂಟೆಗಳನ್ನು ಹರಕೆ ಸಲ್ಲಿಸಿದರು.
ರಾತ್ರಿ 12 ಗಂಟೆ ಆಗುತ್ತಿದ್ದಂತೆ ಬಬ್ಬುಸ್ವಾಮಿ ಹಾಗೂ ಗುಳಿಗ ದೈವಗಳ ದರ್ಶನಪಾತ್ರಿಗಳು ಆವೇಶಕ್ಕೆ ನಿಂತರು. ದೈವಾವೇಶದಲ್ಲಿಯೇ ಆ ಪ್ರದೇಶದಲ್ಲಿ ಅಗೋಚರವಾಗಿ ಅಲೆಯುತ್ತಿದ್ದ ಬ್ರಹ್ಮರಾಕ್ಷಸ ಹಾಗೂ ಪ್ರೇತಗಳನ್ನು ಆವಾಹಿಸಿ ದೈವಸ್ಥಾನದ ಮುಂಭಾಗ ಇಟ್ಟಿದ್ದ ಬಲಿಗೆ ಹಾಕಿದರು. ಬಲಿಯಲ್ಲಿ ಆ ಕ್ಷುದ್ರಶಕ್ತಿಗಳು ದಿಗ್ಭಂಧನಕ್ಕೊಳದವು.
Traffic Prohibition:
ನಡುರಾತ್ರಿ ಕಳೆಯುತ್ತಿದ್ದಂತೆ ದೈವಪಾತ್ರಿ ಈ ಕ್ಷುದ್ರಶಕ್ತಿಗಳಿಗೆ ಮುಕ್ತಿಕೊಡಲು ಆವೇಶದಲ್ಲಿಯೇ ಕೂಳೂರು ನದಿಯತ್ತ ತೆರಳಿದರು. BRAHMA RAKSHASA EXPULSION ಜನರೂ ಅದರ ಹಿಂದೆಯೇ ಓಡಿದರು. ಈ ವೇಳೆ ಯಾರೂ ಎದುರು ಸಿಕ್ಕಬಾರದೆಂಬ ನಂಬಿಕೆಯಿದೆ. ಆದ್ದರಿಂದ ಈ ಪ್ರದೇಶದ ಎಲ್ಲ ರಸ್ತೆಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ಸಂಚಾರ ನಿಷೇಧಿಸಲಾಗಿತ್ತು.
ಈ ಬಗ್ಗೆ ಮುಂಚೆಯೇ ಮುನ್ಸೂಚನೆ ನೀಡಲಾಗಿತ್ತು. ಜನಸಂಚಾರ ಇರದಂತೆ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆಯೂ ಸಹಕರಿಸಿತ್ತು. ಈ ಬಗ್ಗೆ ಮಾತನಾಡಿದ ದೈವಪಾತ್ರಿ ಪ್ರಜ್ವಲ್, ”ಈ ಪ್ರದೇಶದಲ್ಲಿ ಮಧ್ಯಾಹ್ನದ ಮತ್ತು ರಾತ್ರಿ ವೇಳೆ ಸಂಚರಿಸುವವರಿಗೆ ತೊಂದರೆಯಾಗುವುದು, ಆರೋಗ್ಯದಲ್ಲಿ ವ್ಯತ್ಯಾಸವಾಗುವುದು ಆಗಬಾರದೆಂದು ದೈವಸ್ಥಾನದ ಜೀರ್ಣೋದ್ದಾರದ ವೇಳೆ ಕ್ಷುದ್ರ ಶಕ್ತಿಗಳನ್ನು ಉಚ್ಛಾಟನೆ ಮಾಡಲಾಗುತ್ತಿದೆ” ಎಂದರು. ಗ್ರಾಮಸ್ಥ ರಾಜೇಶ್ ಮಾತನಾಡಿ,
”ಈ ದೈವಸ್ಥಾನ ಜೀರ್ಣೋದ್ದಾರ ಮಾಡುವ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿತು. ಇಲ್ಲಿ ಇರುವ ಬ್ರಹ್ಮ ರಾಕ್ಷಸನ ಉಚ್ಛಾಟನೆ ಮಾಡುವಂತೆ ಕಾಣಿಸಿತು. ದೈವದ ದರ್ಶನದ ಸಂದರ್ಭದಲ್ಲಿಯೂ ಇದೇ ರೀತಿ ಕಾಣಿಸಿತು. ಅದರಂತೆ ಬ್ರಹ್ಮ ರಾಕ್ಷಸನ ಉಚ್ಛಾಟನೆ ನಡೆಯಿತು” ಎಂದು ಹೇಳಿದರು.
ಇದನ್ನು ಓದಿರಿ : JAYALALITHA JEWELLERY : ಜಯಲಲಿತಾ ಚಿನ್ನಾಭರಣ ಒಯ್ಯಲು 6 ದೊಡ್ಡ ಪೆಟ್ಟಿಗೆ ತನ್ನಿ