ಹೊಸ ಚೈತನ್ಯದೊಂದಿಗೆ ‘ಭಾರತ್ ಸಂಚಾರ್ ನಿಗಮ್ ಲಿಮಿಟೆಡ್’ ಹೊಸ ಲೋಗೋ ಬಿಡುಗಡೆ ಮಾಡಿದೆ.
ಇದೀಗ ‘ಹೊಸ ಲೋಗೊ’ ಸಮೇತವಾಗಿ ಪ್ರದರ್ಶನಕೊಳಪಟ್ಟಿದೆ.
ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ತನ್ನ ಲೋಗೋ ಅನ್ನು ಬದಲಾಯಿಸಿದೆ. ಖಾಸಗಿ ಸಂಸ್ಥೆಗಳನ್ನು ಹಿಂದಿಕ್ಕಿದೆ.
ಬಳಕೆದಾರ ಸ್ನೇಹಿ ಮೊಬೈಲ್ ರಿಚಾರ್ಜ್ ಪ್ಲಾನ್ಗಳನ್ನು ಒಂದರ ಮೇಲೊಂದರಲ್ಲಿ ಘೋಷಿಸುತ್ತಿರುವ ಬಿಎಸ್ಎನ್ಎಲ್ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಇದೀಗ ಲೋಗೋ ಬದಲಿಸಿಕೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಪ್ರಯತ್ನಿಸಿದೆ.
ದಿನದ 24 ಗಂಟೆಯೂ ಹೊಸ ಸಿಮ್ ಖರೀದಿಸಬಹುದು. ಬಿಎಸ್ಎನ್ಎಲ್ನಲ್ಲಿ ಈಗ ಆಟೋಮೇಟೆಡ್ ಸಿಮ್ ಕಿಯೋಸ್ಕ್ ಕೂಡ ಸೇರಿದೆ.
ಕ್ಯುಆರ್ ಕೋಡ್ನಲ್ಲೇ ಪೇಮೆಂಟ್ ಹಾಗೂ ಅಪ್ಗ್ರೇಡ್ ಮಾಡಬಹುದು. ಪೋರ್ಟ್ ಮಾಡಬಹುದು. 1.8 ಕೋಟಿ ಗ್ರಾಹಕರು ಬಿಎಸ್ಎನ್ಎಲ್ಗೆ ಸೇರಿದ್ದಾರೆ.
‘ಸುರಕ್ಷಿತ, ವಿಶ್ವಾಸಾರ್ಹ, ಕೈಗೆಟುಕುವ’ ಘೋಷವಾಕ್ಯದೊಂದಿಗೆ ಹೊಸ ವಿನ್ಯಾಸದಲ್ಲಿ ಕಂಗೊಳಿಸುತ್ತಿದೆ.
ವೃತ್ತಾಕಾರದ ಕೇಸರಿ ಬಣ್ಣದಲ್ಲಿ ಭಾರತದ ನಕಾಶೆ ಇದೆ. ಟಿಲಿಕಾಂ ತರಂಗಗಳು ಸುತ್ತುವರಿದಿರುವಂತೆ ಎರಡು ಬಾಣದ ಗುರುತುಗಳಿದ್ದು, ಅದರಲ್ಲಿ ಒಂದು ಬಿಳಿ ಬಣ್ಣ, ಮತ್ತೊಂದು ಹಸಿರು ಬಣ್ಣದಲ್ಲಿದೆ.
ಈ ಹೊಸ ಲೋಗೋದಲ್ಲಿ ದೇಶ ಐಕ್ಯತೆ ಸಾರುವ ಭಾರತದ ತ್ರಿವರ್ಣ ಧ್ವಜದ ಮೂರು ಬಣ್ಣಗಳಿವೆ.
ಜಿಯೋ, ಏರ್ಟೆಲ್ ಇನ್ನಿತರ ಖಾಸಗಿ ಟೆಲಿಕಾಂ ಸಂಸ್ಥೆಗಳು ಮೊಬೈಲ್ ರಿಚಾರ್ಜ್ ದರಗಳನ್ನು ದುಬಾರಿ ಮಾಡಿಕೊಂಡಿವೆ. ಆದರೆ ಬಿಎಸ್ಎನ್ಎಲ್ 1ದಿನ, 28, 85, 365 ದಿನಗಳ ಮೊಬೈಲ್ ರಿಚಾರ್ಜ್ ಪ್ಲಾನ್ಗಳು ಇತರ ಕಂಪನಿಗಳ ಪ್ಲಾನ್ಗಿಂತ ಕಡಿಮೆ ಇದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now