China News:
ಚೀನಾದ ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳ ಕಾರ್ಯಾಗಾರದಲ್ಲಿ ಟ್ರಂಪ್ ಅವರೊಳಗಿನ BUDDHAನ ದರ್ಶನವಾಗಿದೆ. ಎರಡನೇ ಬಾರಿ ಅಮೆರಿಕದ ಅಧ್ಯಕ್ಷ ಪದವಿಗೇರಲು ಸಜ್ಜಾಗಿರುವ ಟ್ರಂಪ್, ಶಿಲ್ಪಿಯ ಕಣ್ಣಿಗೆ ದೈವಿಕ ವ್ಯಕ್ತಿಯಾಗಿ ಕಂಡಿದ್ದಾರೆ.ಬುದ್ಧ ಎಂದರೆ ಶಾಂತಿ ಮತ್ತು ತ್ಯಾಗದ ಸಂಕೇತ.
ಅಮೆರಿಕದ ನಿಯೋಜಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೆ ಈ ಎರಡು ಗುಣಗಳಿವೆಯೇ? ಇದು ಚರ್ಚೆಯ ವಿಷಯ. ಆದರೆ, ಚೀನಾದ ಶಿಲ್ಪಿಯೊಬ್ಬರು ಟ್ರಂಪ್ ಅವರಲ್ಲಿ BUDDHAನನ್ನು ಕಂಡಿದ್ದಾರೆ.ಶಿಲ್ಪಿ ಹಾಂಗ್ ಮಾತನಾಡಿ, “ಟ್ರಂಪ್ ಅವರು ಚುನಾವಣೆ ಗೆದ್ದಾಗ ನನಗೆ ಸಾಕಷ್ಟು ಆಸಕ್ತಿ ಮೂಡಿತು. ಆರಂಭದಲ್ಲಿ ನಾನು ಇದನ್ನು ವಿನೋದಕ್ಕೆಂದು ಇದನ್ನು ರೂಪಿಸಿದೆ. ರಾಜಕೀಯ ಎಂಬುದು ಬೇಸರದ ಸಂಗತಿ. ಆದರೆ, ಟ್ರಂಪ್ ಆನ್ಲೈನ್ನಲ್ಲಿ ಭಾರಿ ಮೆಚ್ಚುಗೆ ಗಳಿಸಿದ ವ್ಯಕ್ತಿಯೂ ಆಗಿದ್ದಾರೆ ಎಂಬುದನ್ನು ಕಂಡೆ” ಎಂದರು.
BUDDHAನಂತೆ ಕಾಲು ಮಡಚಿ, ಅರ್ಧ ಕಣ್ಣಿನಲ್ಲಿ ಧ್ಯಾನಸ್ಥರಾಗಿರುವಂತೆ ಶಿಲ್ಪಿಯೊಬ್ಬರು ಟ್ರಂಪ್ ಅವರ ಪ್ರತಿಮೆ ನಿರ್ಮಿಸಿದ್ದಾರೆ. ಹಾಂಗ್ ಜಿನ್ಶಿ ಈ ಪ್ರತಿಮೆ ನಿರ್ಮಾಣದ ಹಿಂದಿನ ರೂವಾರಿ. ಪ್ರತಿಮೆಯ ಅನೇಕ ನಕಲುಗಳನ್ನು ಅಮೆಜಾನ್ ಮತ್ತು ಚೀನಿ ಮಾಲೀಕತ್ವದ ಟೆಮು ಜಾಲತಾಣದಲ್ಲಿ 45 ಡಾಲರ್ಗೆ ಮಾರಾಟ ಮಾಡಲಾಗುತ್ತಿದೆ.47 ವರ್ಷದ ಹಾಂಗ್ ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಅನೇಕ ಸೆರಾಮಿಕ್ ಸೃಷ್ಟಿಯನ್ನು ಮಾಡಿದ್ದಾರೆ. ಇದೀಗ ಟ್ರಂಪ್ ಶಾಂತಿದೂತನಾಗಿ ಕಾಣಿಸಿಕೊಂಡಿರುವುದು ಅನೇಕ ಗ್ರಾಹಕರಲ್ಲಿ ನಗು ಮೂಡಿಸಿದೆ.